
ಯಲ್ಲು ಪುಣ್ಯಕೋಟಿ (Yallu Punyakoti) ನಿರ್ದೇಶನದ ‘ಅವಳು ಲೈಲಾ ಅಲ್ಲ, ನಾನು ಮಜ್ನೂ ಅಲ್ಲ’ (Avalu Laila Alla,Nanu Maznu Alla) ಚಿತ್ರದ ಆಡಿಯೋ (Audio Release) ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಯಲ್ಲು ಪುಣ್ಯಕೋಟಿ, ‘ಹಿಂದೆ ಶಾರ್ಟ್‌ಮೂವಿ ಮಾಡುತ್ತಿದ್ದೆ. ಈ ಚಿತ್ರದಲ್ಲಿ ಹೀರೋ ಬದುಕಿನ ಮೂರು ಘಟ್ಟಗಳನ್ನು ಹೇಳಲಾಗಿದೆ. ಹೈಸ್ಕೂಲ್, ಕಾಲೇಜ್ ಹಾಗೂ ಉದ್ಯೋಗದ ದಿನಗಳ ಕತೆ ಇದೆ. ಮೂವರು ನಾಯಕಿಯರಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ’ ಎಂದರು.
ನಾಯಕ ಅಜಯ್ (Ajay) ರಂಗಭೂಮಿ ಹಿನ್ನೆಲೆಯವರು. ಈ ಚಿತ್ರಕ್ಕಾಗಿ 40 ಕೆಜಿ ಇಳಿಸಿದ್ದಾರಂತೆ. ‘ಬೆಂಗಳೂರಿಗೆ ಬರುವಾಗ ಪೆಕರನಂತಿದ್ದೆ. ಈ ಸಿನಿಮಾ ನನ್ನ ಬದುಕಿಗೆ ಹೊಸ ರೂಪ ಕೊಟ್ಟಿದೆ’ ಎಂದರು. ನಾಯಕಿ ಅಶ್ವಿನಿ (Ashwini) ಶೂಟಿಂಗ್ ಕತೆಗಳನ್ನು ಹೇಳಿದರು. ಸಂಗೀತ ನಿರ್ದೇಶಕ ಕೌಶಿಕ್ (Koushik) ಅವರಿಗೆ ದೊಡ್ಡ ಸಿನಿಮಾಗಳಿಗೆ ಮ್ಯೂಸಿಕ್ ಮಾಡುವ ಕನಸಿದೆಯಂತೆ. ಸಿದ್ದು ತೊಗರಿ (Siddu Thogari) ಚಿತ್ರದ ನಿರ್ಮಾಪಕರು. ಫೈಟ್ ಹಾಗೂ ನೃತ್ಯ ನಿರ್ದೇಶಕ ಚಾಮರಾಜ ಮಾಸ್ಟರ್ ಹಾಗೂ ಚಿತ್ರತಂಡದವರು ಹಾಜರಿದ್ದರು.
Shiva Rajkumar: ಕರುನಾಡ ಚಕ್ರವರ್ತಿಯ ಹೊಸ ಚಿತ್ರ ಘೋಸ್ಟ್: ಶ್ರೀನಿ ನಿರ್ದೇಶನ
‘ಮಗನೇ ಮಹಿಷ’ ತುಳು ಚಿತ್ರದ ಆಡಿಯೋ ಬಿಡುಗಡೆ: ವೀರು ಟಾಕೀಸ್ ಲಾಂಛನದಲ್ಲಿ ತಯಾರಾದ ವೀರೇಂದ್ರ ಶೆಟ್ಟಿನಿರ್ಮಾಣ- ನಿರ್ದೇಶನದ ‘ಮಗನೇ ಮಹಿಷ’ ತುಳು ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಗರದ ಹೋಟೆಲ್ ಓಶಿಯನ್ ಪಲ್‌ರ್‍ನಲ್ಲಿ ಬುಧವಾರ ನಡೆಯಿತು. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿ, ಸಂಗೀತಕ್ಕೆ ಭಾಷೆ ಇಲ್ಲ, ಹಾಗಾಗಿ ಸಲೀಸಾಗಿ ತುಳು ಭಾಷೆಯ ಚಿತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ಮಂಗಳೂರು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿನ ನೀರು ದೋಸೆ, ಐಡಿಯಲ್ ಐಸ್‌ಕ್ರೀಂ ನನ್ನ ಫೇವರಿಟ್ ಎಂದು ಹೇಳಿದರು.
ಹಿರಿಯ ಕಲಾವಿದ ವಿಜಯಕುಮಾರ್ ಶೆಟ್ಟಿಕೊಡಿಯಾಲ್‌ಬೈಲ್ ಮಾತನಾಡಿ, ಈ ಸಿನಿಮಾ ಸಂಗೀತಮಯ, ಹಾಸ್ಯಮಯ ಆಗಿದೆ. ತುಳು ಚಿತ್ರರಂಗಕ್ಕೆ ಇದು ಹೊಸ ಆಯಾಮ ನೀಡಲಿದೆ ಎಂದು ಹೇಳಿದರು. ಹಿರಿಯ ಕಲಾವಿದ ದೇವದಾಸ್ ಕಾಪಿಕಾಡ್ ಮಾತನಾಡಿ, ಕೋವಿಡ್ ಬಳಿಕ ತುಳು ಚಿತ್ರರಂಗ ಕಷ್ಟದಲ್ಲಿದೆ. ಈ ಹಂತದಲ್ಲಿ ವೀರೇಂದ್ರ ಶೆಟ್ಟಿಹೊಸ ಸಾಹಸಕ್ಕೆ ಕೈ ಹಾಕಿದ್ದು, ಪೂರ್ಣ ಪ್ರಮಾಣದಲ್ಲಿ ಚಿತ್ರ ಗೆಲ್ಲುವ ವಿಶ್ವಾಸವಿದೆ. ಪ್ರೇಕ್ಷಕರು ತುಳು ಕಲಾವಿದರ ಜತೆ ಕೈ ಜೋಡಿಸಿ ಚಿತ್ರವನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಹಾಸ್ಯ ಕಲಾವಿದ ನವೀನ್ ಡಿ.ಪಡೀಲ್ ಮಾತನಾಡಿ, ಕಲಾವಿದರು ಸಿನಿಮಾ ತೆಗೆಯಲು ಬಹಳ ಕಷ್ಟಪಟ್ಟಿರುತ್ತಾರೆ. ಅದಕ್ಕಾಗಿ ಚಿತ್ರವನ್ನು ಚಿತ್ರಮಂದಿರಕ್ಕೇ ಹೋಗಿ ವೀಕ್ಷಿಸಿ ಎಂದು ಹೇಳಿದರು. ಮತ್ತೊಬ್ಬ ಹಾಸ್ಯ ಕಲಾವಿದ ಭೋಜರಾಜ ವಾಮಂಜೂರು ಮಾತನಾಡಿ, ಚಾಲಿಪೋಲಿ ಸಿನಿಮಾಗಿಂತ ಹೆಚ್ಚಿನ ಹಾಸ್ಯವನ್ನು ಈ ಚಿತ್ರದಲ್ಲಿ ಪ್ರೇಕ್ಷಕರು ಆನಂದಿಸಬಹುದು. ಎಲ್ಲರೂ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿದರು. ‘ಮಗನೇ ಮಹಿಷ’ ತುಳು ಚಲನ ಚಿತ್ರದ ನಿರ್ಮಾಪಕ, ನಿರ್ದೇಶಕ ವೀರೇಂದ್ರ ಶೆಟ್ಟಿಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಚಾಲಿಪೋಲಿ ಚಿತ್ರಕ್ಕಿಂತ ಭಿನ್ನವಾಗಿ ಈ ಚಿತ್ರವನ್ನು ತೆಗೆದಿದ್ದೇವೆ.
10 ಕ್ಲಾಸ್ ಉತ್ತರ ಪತ್ರಿಕೆಯಲ್ಲಿ ಅಲ್ಲು ಅರ್ಜುನ್ ಪುಷ್ಪ ಡೈಲಾಗ್ ಬರೆದ ಯುವಕ, ಶಿಕ್ಷಕರೇ ಶಾಕ್!
ಇದೇ ಮೊದಲ ಬಾರಿಗೆ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಸಂಗೀತ ತುಳು ಚಿತ್ರಕ್ಕೆ ಸಿನಿಮಾದ ಮೂಲಕ ಸಿಕ್ಕಿದೆ. ಹಾಸ್ಯದ ಜತೆಯಲ್ಲಿ ಸಂಗೀತವೂ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದರು. ತುಳು ಚಿತ್ರ ನಿರ್ಮಾಪಕರ ಸಂಗದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಸಹ ನಿರ್ದೇಶಕ ರಕ್ಷಣ್ ಮಾಡೂರು, ಗಾಯಕ ಪ್ರಶಾಂತ್ ಕಂಕನಾಡಿ ಇದ್ದರು. ಇದೇ ಸಂದರ್ಭ ಮನೋ ಮೂರ್ತಿ ಅವರನ್ನು ಚಿತ್ರತಂಡದ ಪರವಾಗಿ ಸನ್ಮಾನಿಸಲಾಯಿತು. ನಿತೇಶ್ ಶೆಟ್ಟಿಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.