
ಇದು ಯುವ ಪ್ರತಿಭಾವಂತರ ಸಿನಿಮಾ. ಚಿತ್ರದ ಹೆಸರು ‘ನಾನೇ ನರರಾಕ್ಷಸ’(Naane NaraRakshasa). ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ ಮಾಡಲಾಗಿದೆ. ರಾಜ್ ಮನೀಶ್ (Raj Manish) ಅವರೇ ಕತೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿ, ನಿರ್ಮಿಸುವ ಜತೆಗೆ ತಾವೇ ನಾಯಕನಾಗಿಯೂ ನಟಿಸುತ್ತಿದ್ದಾರೆ. ಕೊಳ್ಳೆಗಾಲ ಮೂಲದ ದಿವ್ಯಾ ಕುಮಾರ್ (Divya Kumar) ನಾಯಕಿ. ‘ಕಿರುತೆರೆಯಲ್ಲಿ ಗಟ್ಟಿಮೇಳ, ಹರಹರ ಮಹದೇವ, ಶನಿ, ಮಹಾಕಾಳಿ, ಸಂಘರ್ಷ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಈಗ ನಮ್ಮದೇ ನಿರ್ಮಾಣದ ಚಿತ್ರದಲ್ಲಿ ನಾನು ನಾಯಕನಾಗುತ್ತಿದ್ದೇನೆ.
ಪ್ರತಿಯೊಬ್ಬ ಮನಷ್ಯನ ಒಳಗೂ ಒಬ್ಬ ರಾಕ್ಷಸನಿರುತ್ತಾನೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗ್ತಾರೆ ಎನ್ನುವುದೇ ಚಿತ್ರದ ಕತೆ’ ಎನ್ನುತ್ತಾರೆ ರಾಜ್ ಮನೀಶ್. ನೀತು ನಿನಾದ್ ಸಂಗೀತ ಸಂಯೋಜಿಸಿದ್ದಾರೆ. ಮೈಸೂರಿನ ರಂಗಾಯಣದ ಪ್ರತಿಭೆ ಸುನೀಲ್ ಸ್ವಾಮಿರಾಜು ಚಿತ್ರದ ನಾಯಕನ ಸ್ನೇಹಿತನ ಪಾತ್ರ ಮಾಡುತ್ತಿದ್ದಾರೆ. ವಿಜಯ್ ಚಂದ್ರ ಅವರ ಕ್ಯಾಮೆರಾ ಹಿಡಿದಿದ್ದಾರೆ. ಸೇತುರಾಮ್ ಪತ್ರಕರ್ತನಾಗಿ, ಪ್ರಸಾದ್ ಸಿಐಡಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿರಂಜೀವಿಗೆ ನಿರ್ದೇಶನ ಮಾಡುವ ಅವಕಾಶ ಕಳೆದುಕೊಂಡ ಬೇಸರ ಇನ್ನೂ ಇದೆ; ಉಪೇಂದ್ರ
ಹಾರರ್, ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಲಿರಿಕಲ್ ಹಾಡು ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಈ ಸಂದರ್ಭದಲ್ಲಿ ನಾಯಕ ಹಾಗೂ ನಿರ್ದೇಶಕ ರಾಜ್‌ಮನೀಶ್ ಮಾತನಾಡುತ್ತ ಪ್ರೊಡಕ್ಷನ್ ನಂ.1 ಎಂಬ ಚಿತ್ರದಲ್ಲಿ ನಾಯಕನಾಗೂ ನಟಿಸಿದ್ದೆ, ನಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ನಮ್ಮ ತಾಯಿಯವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾನು ಎರಡನೇ ಬಾರಿಗೆ ನಾಯಕನಾಗಿದ್ದೇನೆ. ಅಲ್ಲದೆ ಫಸ್ಟ್ ಟೈಮ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಪ್ರತಿಯೊಬ್ಬ ಮನಷ್ಯನ ಒಳಗೂ ಒಬ್ಬ ರಾಕ್ಷಸನಿರುತ್ತಾನೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗ್ತಾರೆ ಎನ್ನುವುದೇ ಈ ಕಥೆಯ ತಿರುಳು.
ನಮ್ಮ ಸಿನಿಮಾ ವೀಕ್ಷಿಸುವಾಗ ಮುಂದೆ ಹೀಗೆ ನಡೆಯುತ್ತೆ ಅಂತ ಯಾರೂಸಹ ಊಹಿಸಲು ಸಾಧ್ಯವೇ ಇಲ್ಲ, ಕೊನೆಯವರೆಗೂ ಕುತೂಹಲ ಕ್ಯಾರಿ ಆಗುತ್ತದೆ. ಮೈಸೂರು, ಬನ್ನೂರು ಸುತ್ತಮುತ್ತಲ ಕಾಡಿನಲ್ಲಿ ಕಲ್ಲು ಮುಳ್ಳಿನ ನಡುವೆ ಸುತ್ತಾಡಿ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈಗ ರೊಮ್ಯಾಂಟಿಕ್ ಸಾಂಗ್ ರಿಲೀಸಾಗಿದ್ದು, ಒಂದು ಜರ್ನಿಸಾಂಗ್, ಥೀಮ್‌ಸಾಂಗ್ ಜೊತೆಗೆ ಡಾ.ರಾಜ್‌ಕುಮಾರ್ ಅವರ ಬಗ್ಗೆಯೂ ಒಂದು ಹಾಡಿದೆ. ನನ್ನದು ರಫ್ ಹುಡುಗನ ಪಾತ್ರ, ಕಾಡಿನ ಮಧ್ಯೆ ಸಿಕ್ಕಿ ಹಾಕಿಕೊಂಡು ಹೇಗೆ ಸಫರ್‌ಪಡುತ್ತೇನೆ. ಅದರಿಂದ ಉಳಿದವರೂ ಸಹ ಹೇಗೆ ತೊಂದರೆಗೆ ಸಿಕ್ಕಿ ಹಾಕಿಕೊಳ್ತಾರೆ, ಆ ಭಯಂಕರ ಕಾಡಿಗೆ ಅವರೆಲ್ಲ ಏಕೆ ಹೋದರು ಅನ್ನುವುದೇ ಕುತೂಹಲ.
ಚಿರು ಕೊನೆಯ ಸಿನಿಮಾದಲ್ಲಿ ಪುತ್ರ ರಾಯನ್ ರಾಜ್ ಸರ್ಜಾ
ಚಿತ್ರದಲ್ಲಿ ಹಲವಾರು ಟ್ವಿಸ್ಟ್ ಗಳಿವೆ ಎಂದು ಹೇಳಿದರು. ಚಿತ್ರದ ಮತ್ತೊಬ್ಬ ನಾಯಕ ಸುನಿಲ್ ಸ್ವಾಮಿರಾಜು ಮಾತನಾಡುತ್ತ ಮೈಸೂರಿನ ರಂಗಾಯಣದಲ್ಲಿ ಕಲಿತಮೇಲೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದೆ. ಈ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದೇನೆ. ಹಾರರ್, ಸಸ್ಪೆನ್ಸ್ ಜೊತೆಗೆ ಥ್ರಿಲ್ಲರ್ ಅನುಭವ ನೀಡುವ ಚಿತ್ರವಿದು. ನಾಯಕ, ನಾಯಕನ ಸ್ನೇಹಿತೆ ಹಾಗೂ ನನ್ನ ನಡುವೆ ಏನಾಗುತ್ತೆ? ಎನ್ನುವುದೇ ಸಸ್ಪೆನ್ಸ್, ನನ್ನ ಪಾತ್ರಕ್ಕೆ ಎರಡು ಶೇಡ್ ಇದೆ ಎಂದರು. ಕೊಳ್ಳೇಗಾಲ ಮೂಲದ ದಿವ್ಯಾಕುಮಾರ್ ಚಿತ್ರದಲ್ಲಿ ಖಳನಾಯಕ ಸ್ನೇಕ್‌ಶಂಕರನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಮೈಸೂರು ಮೂಲದ ರಾಘವೇಂದ್ರ ಅವರು ಬೆನ್ನೆಲುಬಾಗಿ ನಿಂತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.