ನಮ್ ಫಿಗರ್ ನಮ್ ತರಾನೇ; ಭಾವಿ ಪತಿಯನ್ನು ಫಿಗರ್ ಎಂದು ಕರೆದ ಅದಿತಿ ಪ್ರಭುದೇವ

Published : Oct 09, 2022, 02:06 PM IST
ನಮ್ ಫಿಗರ್ ನಮ್ ತರಾನೇ; ಭಾವಿ ಪತಿಯನ್ನು ಫಿಗರ್ ಎಂದು ಕರೆದ ಅದಿತಿ ಪ್ರಭುದೇವ

ಸಾರಾಂಶ

ಎಲ್ಲಿ ನೋಡಿದ್ದರೂ ಭಾವಿ ಪತಿಯನ್ನು ಜನರಿಗೆ ಪರಿಚಯಿಸಿ ಕೊಡುತ್ತಿರುವ ಅದಿತಿ. ಫಿಗರ್ ಅಂದಿದ್ದು ಯಾಕೆ?

ಕನ್ನಡ ಚಿತ್ರರಂಗದ ಸಿಂಪಲ್ ಹುಡುಗಿ ಅದಿತಿ ಪ್ರಭುದೇವ 'ತೋತಾಪುರಿ' ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದಾರೆ. ಈ ನಡುವೆ ಮನೆಯಲ್ಲಿ ಅದ್ಧೂರಿಯಾಗಿ ವಿಜಯ ದಶಮಿ ಆಚರಿಸಿದ್ದಾರೆ. ಪಕ್ಕಾ ಮನೆ ಹುಡುಗಿ ಫೀಲ್ ಕೊಡುವ ಅದಿತಿ ಮನೆಯಲ್ಲಿ ಏನೆಲ್ಲಾ ಕೆಲಸ ಮಾಡುತ್ತಾರೆ, ಪ್ರತಿಯೊಂದರಲ್ಲೂ ನೇಟ್‌ನೆಸ್‌ ನಿರೀಕ್ಷೆ ಮಾಡುವ ಅದಿತಿ ಬಾಳ ಸಂಗಾತಿ ಕೂಡ ಇಷ್ಟೇ ನೀಟ್ ಆಗಿದ್ದಾರಾ? ಇದರ ಬಗ್ಗೆ ಸ್ವತಃ ಅದಿತಿನೇ ಮಾತನಾಡಿದ್ದಾರೆ.

'ಹಬ್ಬದ ಸಮಯದಲ್ಲಿ ನಾನು ಮನೆಯಲ್ಲಿ ಇರುವೆ. ಸಾಮಾನ್ಯವಾಗಿ ನನಗೆ ಸಹಾಯ ಮಾಡಲು ಅಮ್ಮ ಇರುತ್ತಾರೆ ಅದರೆ ಈ ದಸರ ಸಮಯದಲ್ಲಿ ಅವರು ಊರಿಗೆ ಹೋಗಿದ್ದಾರೆ. ಚಿಕ್ಕ ಹುಡುಗಿ ಇದ್ದಾಗಿನಿಂದ ನೀನೇ ಕೆಲಸ ಮಾಡು ಅಂತ ಬಿಟ್ಟಿದ್ದಾರೆ ಯಾಕಂದ್ರೆ ನನಗೆ ನಾನೇ ಮಾಡಿದ್ದರೆ ಸಮಾಧಾನ. ನನಗೆ ಒಂದು ಸಮಸ್ಯೆ ಇದೆ. ಯಾವ ವಸ್ತು ಎಲ್ಲಿ ಇರಬೇಕು ಅಲ್ಲೇ ಇರಬೇಕು. ಎಲ್ಲೆಲ್ಲೋ ಇದ್ರೆ ಇಷ್ಟ ಆಗೋಲ್ಲ ಈ ರೀತಿ ಕ್ಯಾರೆಕ್ಟ್‌ ನನಗೆ ಮಾತ್ರವಲ್ಲ ನನ್ನ ಸುತ್ತಮುತ್ತಲು ಇರುವವರಿಗೂ ಕಷ್ಟ ಆಗುತ್ತೆ' ಎಂದು ನೀಟ್‌ನೆಟ್‌ ಬಗ್ಗೆ ಅದಿತಿ ಮಾತನಾಡಿದ್ದಾರೆ.

'ಕೆಲವೊಂದು ವಿಚಾರದಲ್ಲಿ ನಾನು ತುಂಬಾನೇ ನೀಟ್. ಕೆಲವೊಂದರಲ್ಲಿ ಕಾಂಪ್ರಮೈಸ್ ಆಗುವೆ. ಅನ್ನಕ್ಕೆ ಚಟ್ನಿಪುಡಿ ಹಾಕೊಂಡು ತಿನ್ನು ಅಂದ್ರೆ ತಿಂದು ಬಿಡುತ್ತೀನಿ. ಅದಾದ ಮೇಲೆ ತಟ್ಟೆನ ನೀಟ್ ಆಗಿ ತೊಳೆದು ಅದೇ ಜಾಗದಲ್ಲಿ ಇಡಬೇಕು. ಈ ತರ ಸಣ್ಣ ಪುಟ್ಟ ಸಮಸ್ಯೆಗಳು ತುಂಬಾ ಇದೆ ನನಗೆ. ಜೊತೆಗಿರುವವರಿಗೆ ಕಷ್ಟ ಆಗಬಹುದು ಆದರೆ ನಮ್ಮ ಫಿಗರ್ ನಮ್ಮ ತರನೇ ಇದೆ ಅದಿಕ್ಕೆ ಏನೂ ಸಮಸ್ಯೆ ಇಲ್ಲ' ಎಂದು ಅದಿತಿ ಯೂಟ್ಯೂಬನ ಖಾಸಗಿ ವಾಹಿನಿಯೊಂದಕ್ಕ ನೀಡಿರುವ ಸಂದರ್ಶನ ಟ್ರೆಂಡಿಂಗ್ ಆಗಿದ್ದು, ಅದರಲ್ಲಿ ಹೀಗೆ ಹೇಳಿದ್ದಾರೆ.

ಸಮಾಜದ ಬಗ್ಗೆ ಯೋಚನೆ ಮಾಡೋ ತರ ಮಾಡುತ್ತೆ ತೋತಾಪುರಿ ಸಿನಿಮಾ: ಅದಿತಿ ಪ್ರಭುದೇವ

ಅದಿತಿ ಡಯಟ್:

'ನಾನು ಡಯಟ್ ವಿಚಾರಲ್ಲಿ ಎಲ್ಲರಿಗೂ ಒಂದು ವಿಚಾರ ಹೇಳಬೇಕು. ಈ ಡಯಟ್‌ ಮತ್ತು ವರ್ಕೌಟ್‌ ಕೇವಲ 20% ಮಾತ್ರ ನಾವು ಎನು ತಿನ್ನುತ್ತೀವಿ ಅದು ಹೆಚ್ಚು ಮ್ಯಾಟರ್ ಆಗುತ್ತೆ. ನಾವು ಏನು ತಿನ್ನುತ್ತೀನಿ ಅದು ನನ್ನ ಮೈಯಲ್ಲಿ ಹರಿದುತ್ತದೆ. ನನ್ನ ದಿನ ಹೇಗಿರುತ್ತದೆ ನನ್ನ ದೇಹ ಎಷ್ಟು ಖುಷಿಯಾಗಿರುತ್ತದೆ ಅದಿಕ್ಕೆ ನಾವು ತಿನ್ನುವ ಆಹಾರ ಮುಖ್ಯವಾಗುತ್ತದೆ. ನಮ್ಮ ಸೌತ್ ಇಂಡಿಯನ್‌ ಫುಡ್‌ ಮೋಸ್ಟ್‌ ಬ್ಯೂಟಿಫುಲ್‌ ಫುಡ್‌. ರೊಟ್ಟಿ -ಪಲ್ಯ, ಸೊಪ್ಪು ತುಂಬಾ ಒಳ್ಳೆಯದು. ನಿಮಗೆ ದೇಹದ ತೂಕ ಇಳಿಸಬೇಕು ಅಂದ್ರೆ ಮನೆಯಲ್ಲಿ ಮಾಡುವ ಪಲ್ಯವನ್ನು ದೊಡ್ಡ ಪಾತ್ರೆಯಲ್ಲಿ ತಿನ್ನಿ ಮನೆಯಲ್ಲಿರುವ ತರಕಾರಿಯನ್ನು ಮೊದಲು ತಿನ್ನಿ. ನಾನು ನಾನ್‌ವೆಚ್‌ ವಿರುದ್ಧಿ ಅಲ್ಲ...ಆದರೆ ಅದರಲ್ಲಿ ಪ್ರೋಟಿನ್‌ ಮುಂಚಿನ ರೀತಿ ಇಲ್ಲ ಅದರಲ್ಲೂ ಕೆಲವರು ಜಾಸ್ತಿ ಕಾರ ಜಾಸ್ತಿ ಮಸಾಲೆ ಇರುತ್ತದೆ. ಮನೆಯಲ್ಲಿ ನೀವೇ ಅಡುಗೆ ಮಾಡಿ ತಿನ್ನಿ ಹೊರಗಡೆ ಬೇಡ. ಇದು ದೇಹಕ್ಕೆ ಹಿಂಸೆ ಕೊಡುತ್ತೆ. ಈ ರೀತಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆನೇ ಒಳ್ಳೆಯದಾಗುವುದು.ಒಂದು ದಿನ ಮಾಡಿ ನಾಳೆ ಬದಲಾವಣೆ ಆಗಬೇಕು ಅಂತ ನಿರೀಕ್ಷೆ ಮಾಡಬೇಡಿ' ಎಂದು ಡಯಟ್‌ ಟಿಪ್ಸ್ ಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ