ಅಪ್ಪು ಕೊನೆಯ ಚಿತ್ರದ ಟ್ರೈಲರ್ ರಿಲೀಸ್. ಕರ್ನಾಟಕದ ಯುವರತ್ನನನ್ನು ನೋಡಿ ಕಣ್ಣು ತುಂಬಿಸಿಕೊಂಡ ಅಭಿಮಾನಿಗಳು.
ಕನ್ನಡ ಚಿತ್ರರಂಗದ ಮುತ್ತು ರತ್ನ ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ ತುಂಬಾ ಇಷ್ಟ ಪಟ್ಟು ಪ್ರೀತಿಯಿಂದ ಮಾಡಿರುವ ಕೊನೆಯ ಸಿನಿಮಾ ಗಂಧದ ಗುಡಿ ಟ್ರೈಲರ್ ಇಂದು ಅದ್ಧೂರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರಗಳಲ್ಲಿ ಡಾ.ರಾಜ್‌ಕುಮಾರ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಭಿಮಾನಿಗಳ ಜೊತೆ ಸೇರಿಕೊಂಡು ರಿಲೀಸ್ ಮಾಡಿದ್ದಾರೆ.
ಅಪ್ಪು ಸ್ಥಾಪಿಸಿದ ಸಂಸ್ಥೆ ಪಿಆರ್‌ಕೆ ಗಂಧದ ಗುಡಿ ನಿರ್ಮಾಣ ಉಸ್ತುವಾರಿ ಹೊತ್ತಿಕೊಂಡಿದೆ. ಇಂದು ಬೆಳಕ್ಕೆ 9.45ಕ್ಕೆ ಅಭಿಮಾನಿಗಳ ಜೊತೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ, 10 ಗಂಟೆಗೆ ಪಿಆರ್‌ಕೆ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿದೆ.ಅಮೋಘವರ್ಷ ನಿರ್ದೇಶನದ ಈ ಚಿತ್ರವು ರಾಜ್ಯದ ವನ್ಯ-ಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ತೆರೆ ಮೇಲೆ ತರಲಿದೆ. ಸದ್ಯಕ್ಕೆ ಚಿತ್ರದ ಹೊಸ ಪೋಸ್ಟರ್ ಜತೆಗೆ ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದ್ದು, ಪುನೀತ್ ಅವರ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಾಗಿದೆ.
'ಇಲ್ಲಿ ಏನಾದರೂ ಬೇರೆ ತರ ಪಕ್ಷಿ ತೋರ್ಸೋಕೆ ಕರ್ಕೊಂಡು ಬಂದಿದ್ದೀರಾ ಸಮುದ್ರದ ಹತ್ರ' ಎಂದು ಜೀಪ್‌ನಲ್ಲಿ ಅಪ್ಪು ಕುಳಿತುಕೊಂಡು ಮಾತನಾಡುತ್ತಿರುವ ದೃಶ್ಯದ ಮೂಲಕ ಟ್ರೈಲರ್ ಆರಂಭವಾಗುತ್ತದೆ. 'ಇಲ್ಲ ಇಲ್ಲೊಂದು ಸ್ಪೆಷಲ್ ಐಲ್ಯಾಂಡ್ ಇದೆ' ಎಂದು ಅಮೋಘ್ ಹೇಳಿದಾಗ ಅಪ್ಪು ತುಂಬಾನೇ ಖುಷಿಯಿಂದ 'ಓ ಜುರಾಸಿಕ್ ಪಾರ್ಕ್' ಎಂದು ಹೇಳುತ್ತಾರೆ.
Gandhada Gudi: ಕ್ಯಾಮರಾ ಹಿಡಿದು ನಗುನಗ್ತಾ ಶೂಟಿಂಗ್ ಮಾಡಿದ್ದ ಅಪ್ಪು ನೋಡಿ ಫ್ಯಾನ್ಸ್ ಭಾವುಕ
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಮತ್ತು mudsipper ಜಂಟಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಟ್ರೈಲರ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಕಾಡನ್ನು ಇಷ್ಟೊಂದು ಅದ್ಭುತವಾಗಿ ತೋರಿಸಬಹುದು ಎಂದು ಎಂದೂ ಅಂದುಕೊಂಡಿರಲಲ್ಲ ಎನ್ನುತ್ತಾರೆ ಸಿನಿ ರಸಿಕರು. ಕಾಡಿನ ಜನರು ಹೇಗೆ ಜೀವನ ಮಾಡುತ್ತಾರೆ, ಯಾವ ರೀತಿ ಪ್ರಾಣಿ ಪಕ್ಷಿಗಳನ್ನು ದಿನ ನೋಡುತ್ತಾರೆ ಎಂದು ಮಕ್ಕಳ ರೀತಿ ಪದೇ ಪದೇ ಪ್ರಶ್ನೆ ಕೇಳಿದ್ದಾರೆ. ಅಪ್ಪು innocenceಗೆ ಎಲ್ಲರೂ ಮನಸೋತ್ತಿದ್ದಾರೆ.
ಈ ಟ್ರೈಲರ್‌ನ ಮತ್ತೊಂದು ವಿಶೇಷತೆ ಏನೆಂದರೆ ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರನ್ನು ಜನರಿಗೆ ಪರಿಚಯಿಸಿಕೊಟ್ಟಿದ್ದಾರೆ. 'ನಮ್ಮ ಊರಿನ ಪಕ್ಕ ಇಷ್ಟು ದೊಡ್ಡ ಬೆಟ್ಟ ಇದೆ ಅಂತ ನನಗೆ ಗೊತ್ತಿರಲಿಲ್ಲ' ಎಂದು ಹೇಳಿದ್ದಾರೆ. ಪ್ರತಿ ಸಲ ಊರಿಗೆ ಹೋದಾಗಲೂ ಅಪ್ಪು ದೊಡ್ಡ ಆಲದ ಮರಕ್ಕೆ ಭೇಟಿ ನೀಡುತ್ತಾರೆ ಆ ಮರವನ್ನು ಕೂಡ ಅಮೋಘವಾಗಿ ತೋರಿಸಲಾಗಿದೆ.
Gandhada Gudi: ಪುನೀತ್ ಇಲ್ಲದೆ ಅರಣ್ಯಕ್ಕೆ ಕಾಲಿಟ್ಟ ಗಂಧದ ಗುಡಿ ಟೀಮ್!
ರಾಘಣ್ಣ ಟ್ವೀಟ್:
ಟೀಸರ್ ರಿಲೀಸ್ ದಿನ ಅಪ್ಪು ಜೊತೆಗಿರುವ ಫೋಟೋ ಹಂಚಿಕೊಂಡು ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿದ್ದಾರೆ. 'ಅಪ್ಪು ಮಗನೇ ನೀನೆ ನನ್ನನ್ನು ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವೆ ಎಂಬ ಭಾವನೆ' ಎಂದು ರಾಘಣ್ಣ ಬರೆದುಕೊಂಡಿದ್ದಾರೆ. ಈ ಫೋಟೋದ ಮತ್ತೊಂದು ವಿಶೇಷತೆ ಏನೆಂದರೆ ಅಪ್ಪು ಹೃದಯದ ಬಳಿ ಗೋಲ್ಡನ್ ಹಾರ್ಟ್ ಹಾಕಿದ್ದಾರೆ.
ಟೀಸರ್‌ಗೆ ಮಿಲಿಯನ್ ವೀಕ್ಷಣೆ.:
ನಟ ಪುನೀತ್‌ರಾಜ್‌ಕುಮಾರ್(Puneeth Rajkumar) ಅವರ ಬಹುದೊಡ್ಡ ಕನಸು ‘ಗಂಧದಗುಡಿ’(Gandhada gudi) ಸಾಕ್ಷ್ಯ ಚಿತ್ರ. ಇದರ ಟೈಟಲ್ ಟೀಸರ್(Title teaser) ಮಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ.Based on true Events ಎಂದು ಆರಂಭದಲ್ಲಿ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಟಾರ್ಚ್ ಆನ್ ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಆನಂತರ ಗನ್ ಲೋಡ್ (Gun Load) ಮಾಡಿಕೊಳ್ಳುವುದು, ಬುಡು ಬುಡುಕೆಯವರು ಏನೋ ಪೂಜೆ ಮಾಡುವುದು... ಹೀಗೆ ಒಂದಾದ ಮೇಲೊಂದು ದೃಶ್ಯಗಳು ಅದ್ಭುತವಾಗಿದೆ. ಚಲಿಸುತ್ತಿರುವ ಮೋಡಿಗಳು, ಹಸಿರು ಬಣ್ಣದ ಹಾವು, ಕೊಡಲಿ ಹಿಡಿದುಕೊಂಡು ನಡೆಯುತ್ತಿರುವ ಅರಣ್ಯ ಅಧಿಕಾರಿಗಳು...ಪದೇ ಪದೇ ಈ ಟೈಟಲ್ ಟೀಸರ್ ನೋಡಬೇಕು ಎಂದೆನಿಸುವುದರಲ್ಲಿ ಅನುಮಾವಿಲ್ಲ.