ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ ನಟಿ ಅದಿತಿ ಪ್ರಭುದೇವ. ರೈತನೇ ಬೇಕು ಎಂದು ಕನಸು ಕಟ್ಟಿದ್ದ ನಟಿ.....
ಕನ್ನಡ ಚಿತ್ರರಂಗದ (Sandalwood) ಮಹಾಲಕ್ಷ್ಮಿ ಅದಿತಿ ಪ್ರಭುದೇವ (Aditi Prabhudeva) ಡಿಸೆಂಬರ್ 26ರಂದು ಕಾಫಿ ಎಸ್ಟೇಟ್ (Coffe planter) ಮಾಲೀಕ ಮತ್ತು ಉದ್ಯಮಿ ಯಶಸ್ (Yashas) ಜೊತೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಬಹು ಬೇಡಿಕೆಯ ನಟಿ engaged ಎಂದು ಗೊತ್ತಾಗುತ್ತಿದ್ದಂತೆ ಪಡ್ಡೆ ಹುಡುಗರ ಹಾರ್ಟ್ ಬ್ರೇಕ್ (Heart Break) ಆಗಿದೆ, ಆದರೆ ಮಿಸ್ ಮಾಡದೆ ನಿಮ್ಮ ಸಿನಿಮಾ ನೋಡಿದ್ತೀವಿ ಎಂದಿದ್ದಾರೆ.
'ಇದು ಎಲ್ಲರಿಗೂ ಸರ್ಪ್ರೈಸ್ (Surprise news) ಆಗಿರುತ್ತದೆ ಎಂದು ಗೊತ್ತಿದೆ. ಆದರೆ ಇದು ಸಡನ್ ಆಗಿ ತೆಗೆದುಕೊಂಡ ನಿರ್ಧಾರವಲ್ಲ. ಈವರೆಗೂ ನನ್ನ ಪೋಷಕರು ಮದುವೆ ಆಗಲು ಯಾವುದೇ ರೀತಿ ಒತ್ತಾಯ ಮಾಡಿಲ್ಲ. ಆದರೆ ನನಗೆ ಸಂಬಂಧ ಹುಡುಕುತ್ತಿದ್ದರು. ಆದರೆ ಅವರು ತೋರಿಸಿದ ಸಂಬಂಧ ಇಷ್ಟವಾದರೆ ನಾನು ಒಪ್ಪಿಕೊಳ್ಳುವೆ, ಎಂದು ಮೈಂಡ್ ಮಾಡಿಕೊಂಡಿದ್ದೆ. ನಾವು ಅಂದುಕೊಂಡ ರೀತಿಯಲ್ಲಿ ಎಲ್ಲಾ ನಡೆಯಿತು. ಹೀಗಾಗಿ ಕ್ರಿಸ್ಮಸ್ ವೀಕೆಂಡ್‌ನಲ್ಲಿ (Christmas weekend) ನಾವು ಹಾಸನದಲ್ಲಿರುವ (Hassan) ಸಂಬಂಧಿಕರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ನಾನು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವೆ. ಹೀಗಾಗಿ ನನ್ನ ನೈಟ್ ಶೂಟಿಂಗ್ (Night Shoot) ಸ್ಥಳಕ್ಕೆ ಯಶಸ್ ಅವರೇ ಡ್ರಾಪ್ ಮಾಡಿದ್ದರು,' ಎಂದು ಅದಿತಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
'ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ (Arranged Marriage), ಮೊದಲು ಪೋಷಕರು ಭೇಟಿ ಮಾಡಿದ್ದರು ಆನಂತರ ನಾನು ಪ್ರೀತಿಸಲು ಶುರು ಮಾಡಿದೆ. ನಟಿಯಾಗಿ ಇದು ನನಗೆ ಡಿಮ್ಯಾಂಡಿಂಗ್ ಪ್ರೊಫೆಷನ್ (Demanding Profession). ನನಗೆ ಪ್ರಕೃತಿ, ಪ್ರಾಣಿ ಅಂದ್ರೆ ತುಂಬಾನೇ ಇಷ್ಟ. ನಾನು ಹೋಮ್ ಬರ್ಡ್ ಆಗಿರುವ ಕಾರಣ ಯಶಸ್ ಅವರು ಕೂಡ ನನ್ನದೇ ಇಷ್ಟ ಹಂಚಿಕೊಳ್ಳುವವರು. ಅವರು ಕೂರ್ಗ್‌ನಲ್ಲಿರುವ (Coorg) Patlaದವರು. ಅವರಿಗೆ ಫ್ಯಾಮಿಲಿ ಅಂದ್ರೆ ತುಂಬಾನೇ ಇಷ್ಟ, ಎಮೋಷನಲ್ (Emotional) ಮತ್ತು ಪ್ರಾಣಿ ಪ್ರೇಮಿ. ಕಾಫಿ ಪ್ಲಾಂಟರ್ ಆಗಿರುವ ಕಾರಣ ಪ್ರಕೃತಿ ಜೊತೆಗಿರುವುದು ಅವರಿಗೆ ಎರಡನೇ ಸ್ಕಿನ್ ಇದ್ದಂತೆ. ನನ್ನ ಹುಡುಗನಲ್ಲಿ ಇರಬೇಕಾದ ಎಲ್ಲಾ ಗುಣಗಳು ಅವರಲ್ಲಿದೆ,' ಎಂದು ಅದಿತಿ ಹೇಳಿದ್ದಾರೆ.
Aditi Prabhudeva ಮನಗೆದ್ದ ರೈತರ ಮಗ... ಕಾಫಿ ನಾಡಿನ ಹುಡುಗ!ಪರ್ಫೆಕ್ಟ್ ಗರ್ಲ್ (Perfect Girl) ಹಾಡಿನಲ್ಲಿ ಅದಿತಿ ಅವರನ್ನು ನೋಡಿ ಅಂದಿನಿಂದಲೂ ಯಶಸ್ ಅವರಿಗೆ ಇಷ್ಟವಿತ್ತಂತೆ. 'ಅವರ ಕುಟುಂಬ ಹುಡುಕಲು ಶುರು ಮಾಡಿದ್ದಾಗ ಅವರಿಗೆ ನನ್ನ ಪೋಷಕರು ಹುಡುಕುತ್ತಿರುವ ವಿಚಾರ ತಿಳಿದು ಬಂತು. ಮೊದಲು ಮನೆಯ ಹಿರಿಯರು ಭೇಟಿ ಆದರು. ಆನಂತರ ನಾವು ಭೇಟಿ ಮಾಡಿದೆವು. ಯಶಸ್ ಅವರಿಗೆ ಇದು ಲವ್ ಮ್ಯಾಚ್ (Love Match). ನನಗೆ ಇದು ಅರೇಂಜ್ಡ್ ಮ್ಯಾಚ್ (Arranged Match)' ಎಂದಿದ್ದಾರೆ.
'ಮದುವೆ ದಿನಾಂಕದ (Big Day) ಬಗ್ಗೆ ಮಾತನಾಡಿಲ್ಲ. ಸದ್ಯಕ್ಕೆ ನನ್ನ ಗಮನ ಸಂಪೂರ್ಣವಾಗಿ ಸಿನಿಮಾದ ಕಡೆ. ನನ್ನ ವೃತ್ತಿ ಜೀವನಕ್ಕೆ ಯಶಸ್ ಅವರ ಕುಟುಂಬದಿಂದ ಸಂಪೂರ್ಣ ಬೆಂಬಲವಿದೆ. ನಾವು ಅಫೀಶಿಯಲ್ ಆಗಿ ಅನೌನ್ಸ್ ಮಾಡಿದ ಕಾರಣ ಏನೆಂದರೆ ನಮ್ಮ ಬಗ್ಗೆ ಎಲ್ಲಿಯೂ ಗಾಸಿಪ್ ಆಗುವುದು ಬೇಡ ಎಂದು. Making things official was a respectable way to do things. ಈಗ ನಾನು ಡೇಟಿಂಗ್ ಫೇಸ್ ಎಂಜಾಯ್ ಮಾಡುವೆ,' ಎನ್ನುತ್ತಾರೆ ದಾವಣಗೆರೆ ಬ್ಯೂಟಿ.