
ಹಿರಿಯ ನಟಿ ಉಮಾಶ್ರೀ (Umashree) ಅವರದು ತುಂಬಾ ಕಷ್ಟ ಪಟ್ಟಿರುವ ಜೀವ ಎಂಬುದು ಬಹುತೇಕರಿಗೆ ಗೊತ್ತು. ತಮ್ಮ ಜೀವನದ ಗೋಳನ್ನು ಅವರೇ ಅದೆಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಕುಡುಕ ಗಂಡ ಬಿಟ್ಟು ಹೋಗಿದ್ದು, ಚಿಕ್ಕ ಮಕ್ಕಳನ್ನು ಅವರೊಬ್ಬರೇ ಕಷ್ಟಪಟ್ಟು ದುಡಿದು ಸಾಕಿದ್ದು, ಒಂದೇ ಎರಡೇ.. ಆದರೆ, ಅವರಿಗೆ ಇರುವ ನಟನೆಯ ಪ್ರತಿಭೆ ನಾಟಕ ಹಾಗೂ ಸಿನಿಮಾರಂಗದ ಮೂಲಕ ಅವರಿಗೆ ಊಟ ಕೊಟ್ಟಿದೆ, ಬದುಕು ಬರೆದಿದೆ.
ಹೌದು ನಟಿ ಉಮಾಶ್ರೀ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ಮೊದಲು ನಾಟಕಗಳಲ್ಲಿ, ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಬಳಿಕ ಸಿನಿಮಾರಂಗಕ್ಕೆ ಕಾಲಿಟ್ಟವರು. ಎಲ್ಲಾ ಕಡೆ ನಟಿ ಉಮಾಶ್ರೀ ಅವರು ತಮ್ಮ ಛಾಪು ಒತ್ತಿದ್ದಾರೆ. ಅಷ್ಟೇ ಏಕೆ, ಇತ್ತೀಚೆಗೆ ಯಕ್ಷಗಾನದಲ್ಲಿಯೂ ಕುಣಿದು ಸೈ ಎನ್ನಿಸಿಕೊಂಡು, ವಿವಾದವನ್ನೂ ಎದುರಿಸಿದ್ದಾರೆ. ಅಷ್ಟೇ ಅಲ್ಲ, ಅವರದು ತುಂಬಾ ಹೋರಾಟದ ಬದುಕು. ಅದೆಷ್ಟು ಅನುಭವಿಸಿದ್ದಾರೆ ಗೊತ್ತಾ?
ಶಾಲಿನಿಗೆ ತಾಳಿ ಕಟ್ಟೋ ಮೊದ್ಲು ಅಜಿತ್‌ಗೆ ಹೀರಾ ಜೊತೆ ಲವ್ ಬ್ರೇಕಪ್, ವಿಲನ್ ಯಾರು ಗೊತ್ತಾ..?
ಹೌದು, ನಟಿ ಉಮಾಶ್ರೀ ಹಾಗೂ ಸಹನಟ ಎನ್‌ಎಸ್ ರಾವ್ ಸ್ನೇಹ-ಸಂಬಂಧದ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಕಟ್ಟಿದರು. ಆದರೂ ಹೆದರದ ನಟಿ ಉಮಾಶ್ರೀ, ಡಾ ವಿಜಯಮ್ಮ ಎನ್ನುವ ಹಿತೈಷಿ ಮೂಲಕ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ (Puttanna Kanagal) ಭೇಟಿ ಮಾಡಿದರು. ಆರಂಭದಲ್ಲಿ ಪುಟ್ಟಣ್ಣನವರು ರಂಗಭೂಮಿಯವರಿಗೆ ಅವಕಾಶ ನಿರಾಕರಿಸಿದರೂ ಬಳಿಕ ಕೊಟ್ಟರು. ಕಾಶೀನಾಥ್ 'ಅನುಭವ' ಚಿತ್ರದ ಮೂಲಕ ನಟಿ ಉಮಾಶ್ರೀ ಕನ್ನಡ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಆಗಿನ ಕಾಲದಲ್ಲಿ ಎನ್‌ಎಸ್ ರಾವ್ ಹಾಗೂ ಉಮಾಶ್ರೀಯವರ ಜೋಡಿ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಆಗ ಹೆಚ್ಚು ಕಾಲ ನಟಿ ಉಮಾಶ್ರೀಯವರು ಎಸ್‌ಎಸ್ ರಾವ್ ಮನೆಯಲ್ಲೇ ಕಾಲ ಕಳೀತಾ ಇದ್ರು. ಅವರಿಬ್ಬರ ಫ್ಯಾಮಿಲಿ ಸಂಬಂಧ ತುಂಬಾ ಅನ್ಯೋನ್ಯವಾಗಿತ್ತು. ಆದರೆ, ಅವರಿಬ್ಬರ ಜೋಡಿಯ ಸಕ್ಸಸ್ ಸಹಿಸದ ಆಗಿನ ಕಾಲದ ಪ್ರಮುಖ ನಟರೇ ಅವರಿಬ್ಬರ ಸಂಬಂಧಕ್ಕೆ ಅನೈತಿಕ ಬಣ್ಣ ಹಚ್ಚಿ ಅಪಪ್ರಚಾರ ಮಾಡಿಬಿಟ್ಟರು.
ವ್ಯಾಲೆಂಟೈನ್ ಡೇ ಸಿಕ್ಕಿಬಿದ್ದ ಯಶ್-ರಾಧಿಕಾ ಜೋಡಿ, ಗಂಡ-ಹೆಂಡತಿ ಅಷ್ಟೇ ಅಲ್ಲ, ಇನ್ನೇನೋ ಅಂತೆ..!
ಉಮಾಶ್ರೀ ಹಾಗೂ ಎನ್‌ಸಾರ್ ಜೋಡಿ ಕಾಮಿಡಿ ಅದೆಷ್ಟು ಜನಪ್ರಿಯವಾಗಿತ್ತು ಎಂದರೆ, ಅವರಬ್ಬರನ್ನೂ ನೋಡಲು ಪ್ರೇಕ್ಷಕರು ಮುಗಿಬೀಳುತ್ತಿದ್ದರು. ಆದರೆ, ನಟ ಎನ್‌ಎಸ್ ರಾವ್ ಅವರು ನಿಧನರಾದ ಬಳಿಕ ನಟಿ ಉಮಾಶ್ರೀ ಅವರಿಗೆ ಅದೆಷ್ಟೋ ಕಾಲ ಯಾರೂ ಅವಕಾಶವನ್ನೇ ಕೊಟ್ಟಿರಲಿಲ್ಲ. ಅಗ ಮತ್ತೆ ಕೈ ಹಿಡಿದಿದ್ದು ನಾಟಕ, ರಂಗಭೂಮಿ. ಆದರೆ, ಮತ್ತೆ ಉಮಾಶ್ರೀ ಸಿನಿಮಾದಲ್ಲಿ ನಟನೆಗೆ ಚಾನ್ಸ್ ಪಡೆದರು, ಸೀರಿಯಲ್ ಅವರ ಕೈ ಹಿಡಿದಿದೆ. ರಾಜಕೀಯ, ಬಣ್ಣದ ಬದುಕು ಎಲ್ಲವನ್ನೂ ನಿಭಾಯಿಸುತ್ತ ನಟಿ ಉಮಾಶ್ರೀ ಈಗ ಗೌರವದ ಬದುಕು ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.