
'ಮನಮೆಚ್ಚಿದ ಹುಡುಗಿ' ಖ್ಯಾತಿಯ ನಟಿ ಸುಧಾರಾಣಿ (Sudharani) ಅವರು ಸಂದರ್ಶನವೊಂದರಲ್ಲಿ ಈ ಸಂಗತಿ ಹೇಳಿಕೊಂಡಿದ್ದಾರೆ. ತಾವು ಒಮ್ಮೆ ಕೊಲ್ಕತ್ತಾದ ಬೀದಿಯಲ್ಲಿ ಓಡಾಡುವಾಗ ಅಲ್ಲಿ 'ಕೆಜಿಎಫ್ ಚಾಪ್ಟರ್-1' ಕನ್ನಡ ಸಿನಿಮಾದ ಪೋಸ್ಟರ್ ನೋಡಿ ಖುಷಿಯಿಂದ ಕಣ್ಣೀರು ಬಂತು. ಆನಂದಭಾಷ್ಪ ತಮಗರಿವಿಲ್ಲದಂತೆ ಕೆನ್ನೆಯ ಮೇಲೆ ಇಳಿಯಿತು ಎಂದಿದ್ದಾರೆ ಅಚ್ಚಕನ್ನಡದ ನಟಿ ಸುಧಾರಾಣಿ. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸದ, ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ನಟಿ ಸುಧಾರಾಣಿ ಹೇಳಿರುವ ಮಾತಿದು!
ಸುಧಾರಾಣಿ ಹಾಗು ಶಿವರಾಜ್‌ಕುಮಾರ್ ನಟನೆಯ 'ಆನಂದ್' ಚಿತ್ರವು 1986ರಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಅಲ್ಲಿಂದ ಶುರುವಾಯ್ತು ಕನ್ನಡದ ಹುಡುಗಿ ಸುಧಾರಾಣಿ ನಾಯಕಿಯಾಗಿ ಸ್ಯಾಂಡಲ್‌ವುಡ್ ಅಂಗಳದಲ್ಲಿನ ಪ್ರಯಾಣ. ಅದಕ್ಕೂ ಮೊದಲು ಅವರು ಹಲವು ಜಾಹೀರಾತುಗಳಲ್ಲಿ ಹಾಗೂ ಬಾಲನಟಿಯಾಗಿ ನಟಿಸಿದ್ದರು. ಆದರೆ, ಪೂರ್ಣ ಪ್ರಮಾಣದ ನಾಯಕಿಯಾಗಿ 1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದರು.
ಪುನೀತ್ 'ಜಾಕಿ' ನಟಿ ಭಾವನಾ ಮೆನನ್ ಕಂಬ್ಯಾಕ್ ಸಿನಿಮಾ ಯಾವುದು, ಆಮೇಲೇನಾಯ್ತು?
ನಟಿ ಸುಧಾರಾಣಿ ಅವರು 150ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿಯೇ ಅವರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕಿರುತೆರೆಯಲ್ಲಿ ಕೂಡ ತಮ್ಮ ನಟನೆ ಮುಂದುವರೆಸಿದ್ದಾರೆ. 'ಶ್ರೀರಸ್ತು ಶುಭಮಸ್ತು' ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸುಧಾರಾಣಿ ಕಿರುತೆರೆ ವೀಕ್ಷಕರ ಪ್ರೀತಿ-ಅಭಿಮಾನವನ್ನೂ ಸಹ ಗಳಿಸಿಕೊಂಡಿದ್ದಾರೆ. ಹಿತಮಿತವಾದ ಮಾತು, ಇಷ್ಟವಾದುವ ನಡತೆ ನಟಿ ಸುಧಾರಾಣಿಯವರದ್ದು ಎನ್ನುತ್ತಾರೆ ಅವರನ್ನು ಬಲ್ಲವರು.
ಆನಂದ್, ಮನಮೆಚ್ಚಿದ ಹುಡುಗಿ, ಅದೇ ರಾಗ ಅದೇ ಹಾಡು, ಪಂಚಮವೇದ, ಮೈಸೂರು ಮಲ್ಲಿಗೆ ಸೇರಿದಂತೆ ನಟಿ ಸುಧಾರಾಣಿಯವರ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ತುಂಬಾ ದೊಡ್ಡದಿದೆ. ಪಂಚಮವೇದ ಹಾಗೂ ಮೈಸೂರು ಮಲ್ಲಿಗೆ ಸಿನಿಮಾಗಳಿಗೆ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ಸಹ ಪಡೆದಿದ್ದಾರೆ ನಟಿ ಸುಧಾರಾಣಿ.
ಯಶ್ ಮೇಲೆ ಮುಗಿಬಿದ್ದ ಪ್ರಕೃತಿ ಪ್ರಿಯರು; ರಾಕಿಭಾಯ್ 'ಪುಷ್ಪರಾಜ್' ಆಗ್ಬಿಟ್ರಾ ಅಂತ ಕೋಪ!
ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು, ಮೆಚ್ಚುಗೆಗಳ ಮಹಾಪೂರ ನಟಿ ಸುಧಾರಾಣಿಯವರ ಪಾಲಿಗಿದೆ. ಆದರೂ, ಏನೇ ಸಾಧನೆ ಮಾಡಿದ್ದರೂ ಅವರಿಗೆ ಯಾವುದೇ ಅಹಂಕಾರವಿಲ್ಲ, ತಲೆ ಕತ್ತಿನ ಮೇಲೆಯೇ ಇದೆ, ಅದೇ ಎಲ್ಲಕ್ಕಿಂತ ದೊಡ್ಡ ಸಾಧನೆ ಎನ್ನುತ್ತಾರೆ ಅವರ ಅಭಿಮಾನಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.