
ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾವೊಂದು ಸಖತ್ ಸೌಂಡ್ ಮಾಡತೊಡಗಿದೆ. ಟೀನೇಜ್ ನಲ್ಲಿ ಎಕ್ಸಾಮ್ ಮುಗಿದು ರಿಸಲ್ಟ್ ಗೆ ಕಾಯೋದೇ ಒಂಥರಾ ಥ್ರಿಲ್ ಬಿಡಿ.ಇನ್ನೇನು ರಿಸಲ್ಟ್ ಬರುವಾಗ ಎದೆಯಲ್ಲಿ ಶುರುವಾಗೋ ಗಿಟಾರ್ ಸೌಂಡ್ ಅಂತೂ ಅಬ್ಬಬ್ಬಾ. ರಿಸಲ್ಟ್ ಬಂದ ಬಳಿಕ ಫಸ್ಟ್ ಬಂದ್ರೆ ಓಕೆ. . ‘ಜಸ್ಟ್ ಪಾಸ್‘ ಆದ್ರೆ ಮಾತ್ರ ಅಯ್ಯೋಯ್ಯೋ ಅನ್ನೋ ತರಹದ ವೇದನೆ. ಇಂತಹದ್ದೇ ಒಂದು ಥ್ರಿಲ್ಲಿಂಗ್ ಸಬ್ಜೆಕ್ಟ್ ಇರೋ 'ಜಸ್ಟ್ ಪಾಸ್' ಅನ್ನೋ ಟೈಟಲ್ ಮೂಲಕವೇ ಸಿನಿಮಾವೊಂದು ನಿಮ್ಮನ್ನ ಭರ್ಜರಿಯಾಗಿ ರಂಜಿಸಲು ಬರುತ್ತಿದೆ.
ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧವಾಗುತ್ತಿರುವ 'ಜಸ್ಟ್ ಪಾಸ್ (Just Pass)ಸಿನಿಮಾದ ಈಗಾಗಲೇ ಸಿಕ್ಕಾಪಟ್ಟೆ ಟಾಕ್ ಶುರುವಾಗಿದೆ. ಸಿನಿಮಾ ಕೆಲಸ ಕಂಪ್ಲೀಟ್ ಆಗಿದ್ದು ಇನ್ನೇನು ತೆರೆಗೆ ಬರಲು ರೆಡಿಯಾಗಿದೆ. ‘ಜಸ್ಟ್ ಪಾಸ್’ ಸಿನಿಮಾದಲ್ಲಿ ಕೂದಲೆಳೆ ಅಂತರದಲ್ಲಿ ಪಾಸ್ ಆದವರಿಗಂತಲೇ ಕಾಲೇಜು ತೆರೆಯಲಾಗಿದೆ. ಜತೆಗೆ ಈ ಕಾಲೇಜ್ ಸೇರಿಕೊಂಡರೆ, ಹಾಸ್ಟೆಲ್ ಕೂಡ ಉಚಿತವಂತೆ. ಎಲ್ಲಾ ಕಡೆ Rank ಬಂದ ಸ್ಟೂಡೆಂಟ್ ಗಳಿಗೆ ಎಲ್ಲವೂ ಉಚಿತವಾದರೆ ಈ ಸಿನಿಮಾದಲ್ಲಿ ಜಸ್ಟ್ ಪಾಸ್ ಆದವರಿಗೆ ಆದ್ಯತೆ ಇರುತ್ತೆ. ಅದು ಹೇಗೆ ಮತ್ತು ಯಾಕೆ ಅನ್ನೋದನ್ನ ತೆರೆ ಮೇಲೆ ಸಿನಿಮಾ ಬಂದ ಮೇಲೆ ನೋಡಿ ಎಂಜಾಯ್ ಮಾಡೋಣ ಏನಂತೀರಾ. .?
ಕೆರೆಬೇಟೆ ಮೂಲಕ ಮಿಂಚಲು ಹೊರಟ ಗೌರಿಶಂಕರ್; ಸಾಥ್ ನೀಡಿದ ಡಾಲಿ ಧನಂಜಯ್
ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ‘ಜಸ್ಟ್ ಪಾಸ್’ ಚಿತ್ರಕ್ಕೆ 'ಇರುವುದೆಲ್ಲವ ಬಿಟ್ಟು', 'ಗಜಾನನ ಗ್ಯಾಂಗ್' ಸಿನಿಮಾ ಖ್ಯಾತಿಯ ನಟ ಶ್ರೀ ಮಹದೇವ್ (Shri Mahadev)ನಾಯಕ ನಟನಾಗಿ ನಟಿಸುತ್ತಿದ್ದಾರೆ. ತರ್ಲೆ ವಿಲೇಜ್, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಜಸ್ಟ್ ಪಾಸ್ ಸಿನಿಮಾ ಮೂಲಕ ಸಖತ್ ಮನರಂಜನೆ ನೀಡಲು ಸಿದ್ಧವಾಗಿದ್ದಾರೆ.
ಲೆಜೆಂಡ್ ಈಸ್ ಬ್ಯಾಕ್, ವಿಕ್ಟರಿ ಗ್ಯಾರಂಟಿ; ಸೈಂಧವ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ!
ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಶೈನ್ ಆಗಲು ರೆಡಿಯಾಗಿದ್ದಾರೆ. ರಂಗಾಯಣ ರಘು ಅವರೊಂದಿಗೆ ಸಾಧು ಕೋಕಿಲ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ದಾನಪ್ಪ, ಗೋವಿಂದೇ ಗೌಡ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕುಂಟುತ್ತ ರಾಮಾಚಾರಿ ಮನೆಗೆ ಬಂದ ಕಿಟ್ಟಿ; ಚಾರು ಮೈ-ಕೈ ಮುಟ್ಟಲು ಕಿಟ್ಟಿಗೆ ಶಾಕ್!
ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ. ವಿ. ಶಶಿಧರ್ ನಿರ್ಮಿಸುತ್ತಿರುವ ಜಸ್ಟ್ ಪಾಸ್’ ಸಿನಿಮಾಕ್ಕೆ ಕೆ. ಎಂ. ರಘು ನಿರ್ದೇಶನವಿರೋ ವಿಚಾರ ನಿಮಗೆ ಗೊತ್ತಿದೆ ಸಿನಿಮಾದ ಹಾಡುಗಳಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದು, ಸುಜಯ್ ಕುಮಾರ್ ಛಾಯಾಗ್ರಹಣವಿದೆ. ಒಟ್ಟಿನಲ್ಲಿ, ಹೊಸಬರ ಸಿನಿಮಾ ಆಗಿದ್ದರೂ ಬಿಡುಗಡೆಗೆ ಮೊದಲೇ ಸಖತ್ ಸೌಂಡ್ ಮಾಡುತ್ತಿರುವ ಸುದ್ದಿ ಸ್ಯಾಂಡಲ್‌ವುಡ್ ಉದ್ಯಮಕ್ಕೆ ಸಂತಸ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.