ಕೈಯಲ್ಲಿ ಬೇವು ಹಿಡಿದು ಬೆಲ್ಲಿ ಡ್ಯಾನ್ಸ್ ಮಾಡಿದ ನಟಿ ಶ್ವೇತಾ ಕಾಲೆಳೆದ ನೆಟ್ಟಿಗರು?

Suvarna News   | Asianet News
Published : Apr 26, 2021, 04:29 PM IST
ಕೈಯಲ್ಲಿ ಬೇವು ಹಿಡಿದು ಬೆಲ್ಲಿ ಡ್ಯಾನ್ಸ್ ಮಾಡಿದ ನಟಿ ಶ್ವೇತಾ ಕಾಲೆಳೆದ ನೆಟ್ಟಿಗರು?

ಸಾರಾಂಶ

ನಟಿ ಶ್ವೇತಾ ಶ್ರೀವಾತ್ಸವ್ ಇತ್ತೀಚಿಗೆ ಶೇರ್ ಮಾಡಿಕೊಂಡಿರುವ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಮೆಂಟ್ಸ್‌ ಹೇಗಿವೆ ನೋಡಿ.....

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ರೀತಿಯ ಲವ್ ಸ್ಟೋರಿ ಟ್ರೆಂಡ್ ಕ್ರಿಯೇಟ್ ಮಾಡಿರುವ ನಟಿ ಶ್ವೇತಾ ಶ್ರೀವಾತ್ಸವ್‌, ಮದರ್‌ವುಡ್‌ ಎಂಜಾಯ್‌ ಮಾಡಿ ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸ್ಕಿನ್ ಕೇರ್, ಹೇರ್ ಕೇರ್, ಫಿಟ್ನೆಸ್‌ ಎಂದೆಲ್ಲಾ ಕಾಳಜಿ ವಹಿಸುವ ನಟಿ ಸೋಷಿಯಲ್ ಮೀಡಿಯಾದಲ್ಲಿ  ಎಲ್ಲಾ ವಿಷಯಗಳ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ.

ನಟಿ ಶ್ವೇತಾ ಶ್ರೀವಾತ್ಸವ್ ಮನೆಯಲ್ಲಿ ಹಾವು; ಗಾಬರಿಗೊಂಡ ಪುತ್ರಿ ವರ್ಣಿಸಿದ್ದು ಹೀಗೆ! 

'ಹೋಪ್‌' ಚಿತ್ರದ ಮೂಲಕ ಕಮ್‌‌ಬ್ಯಾಕ್ ಮಾಡುತ್ತಿರುವ ಶ್ವೇತಾ ಕೆಎಎಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕೆ ಬೇಕಾದ ಫಿಟ್ನೆಸ್ ತಯಾರಿಯನ್ನು ಮನೆಯಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಮಗಳ ಜೊತೆ ಯೋಗ ಹಾಗೂ ಮನೆಯಲ್ಲಿಯೇ ಜಿಮ್ ಸೆಟ್ ಇರುವ ಕಾರಣ ಕೊಂಚ ವರ್ಕೌಟ್ ಹಾಗೂ ಫುಲ್ ಡಯಟ್ ಮಾಡುತ್ತಿದ್ದಾರೆ. ಈ ವೇಳೆ ಯುಗಾದಿ ಹಬ್ಬದ ದಿನ ರೆಕಾರ್ಡ್ ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.

ದೀಪಾವಳಿಗೆ ಮಗಳ ಜೊತೆ ಫೋಟೋಶೂಟ್‌ ಮಾಡಿಸಿದ ಶ್ವೇತಾ ಶ್ರೀವಾತ್ಸವ್! 

ಹಳದಿ ಸೀರೆ ತೊಟ್ಟು ಹಿಂದಿ ಮ್ಯೂಸಿಕ್‌ಗೆ ಸ್ಟೆಪ್ ಹಾಕಿದ ಶ್ವೇತಾ, ಬೇವಿನ ಎಲೆ ಹಿಡಿದು ಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು 'ಬೆಲ್ಲಿ ಡ್ಯಾನ್ಸ್ ವಿತ್ ಬೇವು ಇನ್ ಹ್ಯಾಂಡ್', 'ನೀವು ನೋಡೋಕೆ ಬಾಲಿವುಡ್ ತಬ್ಬು ತರ ಕಾಣಿಸುತ್ತಿದ್ದೀರಾ', 'ಮದುವೆ ಆದರೂ ಇಷ್ಟೊಂದು ಹಾಟ್ ಹೇಗೆ?' ಎಂದು ನೆಟ್ಟಿಗರು ನಾನ್ ಸ್ಟಾಪ್ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮತ್ತೊಂದು ಹಿಂದಿ ಹಾಡಿಗೆ ಕನ್ನಡಿ ಮುಂದೆ ನಿಂತು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. 'ಹವ್ಯಾಸ  ಮತ್ತೆ ಶುರು ಮಾಡಲು ವಯಸ್ಸಿದೆಯೇ?' ಎಂದು ಪ್ರಶ್ನೆ ಮಾಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2016ರ ಮಧುರ ನೆನಪುಗಳನ್ನು ಬಿಚ್ಚಿಟ್ಟ ಮೇಘನಾ ರಾಜ್… Miss You Chiru ಅಂದ್ರು ಫ್ಯಾನ್ಸ್
ಸ್ಟೇಜ್ ಮೇಲೇನೇ ಸಿಟ್ಟಿಗೆದ್ದ ರಚಿತಾ ರಾಮ್ 'ಫ*..' ಅಂದೇಬಿಟ್ರು!.. ಅಂಥಾ ಸಿಟ್ಟು 'ಲೇಡಿ ಬಾಸ್‌'ಗೆ ಯಾಕ್ ಬಂತು?