ಬಸ್ ಬೇಡ ಫ್ಲೈಟ್ ಬೇಕು, ಐರಾಷಾಮಿ ರೆಸಾರ್ಟ್‌ನಲ್ಲೇ ರೂಮ್ ಬೇಕು: 'ಗಾಳಿಪಟ' ಭಾವನಾ ಹೈ ಫೈ ಕಥೆ ಬಿಚ್ಚಿಟ್ಟ ಫ್ರೆಂಡ್ಸ್

By Vaishnavi Chandrashekar  |  First Published Mar 14, 2023, 3:59 PM IST

 ಹಲವು ವರ್ಷಗಳ ನಂತರ ಸ್ನೇಹಿತೆಯರನ್ನು ಭೇಟಿ ಮಾಡಿದ ನಟಿ ಭಾವನಾ. ವುಮೆನ್ಸ್‌ ಡೇ ಆಚರಣೆ ಮಾಡಲು ಹೋಗಿ ತಮ್ಮ ಹೈ ಫೈ ಕಥೆ ತೆರೆದಿಟ್ಟ ಸುಂದರಿಯರು.... 


2008ರಲ್ಲಿ ಗಾಳಿಪಟ ಚಿತ್ರದ ಮೂಲಕ ಪಾವನಿ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಭಾವನಾ ರಾವ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಸುಮಾರು 15 ವರ್ಷಗಳಿಂದ ಬಣ್ಣದ ಪ್ರಪಂಚದಲ್ಲಿ ಕೆಲಸ ಮಾಡುತ್ತಿರುವ ಭಾವನಾ ತಮ್ಮ ಆಪ್ತ ಸ್ನೇಹಿತೆಯರಾದ ನಟಿ ಸೋನು ಗೌಡ, ನಟಿ ಸಿಂಧು ಲೋಕನಾಥ್ ಮತ್ತು ನಿರೂಪಕಿ ಜಾನವಿ ಜೊತೆ ಸಣ್ಣ ಚಿಟ್‌ಚಾಟ್‌ ನಡೆಸಿದ್ದಾರೆ. ಮಾತುಕತೆ ವೇಳೆ ಯಾರು ಹೈ ಮೈಂಟೆನೆನ್ಸ್ ಯಾರು ಕಡಿಮೆ ಮೈಂಟೆನೆನ್ಸ್ ಎನ್ನುವ ವಿಚಾರ ಬಂದಾಗ ಪ್ರತಿಯೊಬ್ಬರೂ ಭಾವನಾ ಮೈಂಟೆನೆನ್ಸ್ ಮಾಡುವುದು ತುಂಬಾನೇ ಕಷ್ಟ ಎಂದಿದ್ದಾರೆ.

'ಭಾವನಾ ಹೈ ಮೈಂಟೆನೆನ್ಸ್ ಅಥವಾ ಲೋ-ಮೈಂಟೆನೆನ್ಸ್ ಎಂದು ನಾನು ಹೇಳುವೆ' ಎಂದು ಆರಂಭಿಸಿದ ಸೋನು ಗೌಡ ಚೆನ್ನೈನಲ್ಲಿ ನಡೆದ ಘಟನೆವೊಂದನ್ನು ನೆನಪಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಒಂದು ದಿನ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗಿ ಬರುವಾಗ ಕಾರ್ ಅಥವಾ ಫ್ಲೈಟ್ ಬೇಡ ನಾವು ಬಸ್‌ನಲ್ಲಿ ಪ್ರಯಾಣ ಮಾಡಿದರೆ ಚೀಪ್ ಎಂದು ಸೋನು ಸಲಹೆ ಕೊಡುತ್ತಾರೆ. ಅಗ ಭಾವನಾ ಇಲ್ಲ ಇಲ್ಲ ಏನೇ ಆದರೂ ನಾನು ವಿಮಾನದಲ್ಲಿ ಪ್ರಯಾಣ ಮಾಡುವುದು ಎಂದು ಹಠ ಮಾಡುತ್ತಾರಂತೆ. ಆರೋಗ್ಯದ ಕಾರಣ ವಿಮಾನ ಬೇಕು ಎಂದು ಹೇಳಿದೆ ಹೊರತು ನಾನು ಹಾಗೆ ಹಠ ಮಾಡುವುದಿಲ್ಲ ಎಂದು ಭಾವನಾ ಹೇಳಿದರೂ ಜಾನ್ವಿ, ಸಿಂಧು ಲೋಕನಾಥ್‌ ಮತ್ತು ಸೋನು ಒಪ್ಪಿಕೊಳ್ಳುವುದಿಲ್ಲ. 

Tap to resize

Latest Videos

ಬಾತ್‌ ಟಬ್ಬಲ್ಲಿ ಮೇಕಪ್‌ ಹಿಡಿದು ಪೋಸ್ ಕೊಟ್ಟ 'ಗಾಳಿಪಟ' ನಟಿ ಭಾವನಾ!

'ಒಂದು ಸಲ ಡ್ಯಾನ್ಸ್‌ ಟೀಮ ಅವರು ಟ್ರಿಪ್ ಹೋಗೋಣ ಎಂದು ಪ್ಲ್ಯಾನ್ ಮಾಡಿದ್ದರು. ಎಲ್ಲಿ ಹೋಗಬೇಕು ಎಂದು ಭಾವನ ಚೆಕ್ ಮಾಡ್ತೀನಿ ಎಂದು ಹೇಳಿ ಹೇಳಿ ಆ ಟ್ರಿಪ್ ಪ್ಲ್ಯಾನ್ ಆಗಲೇ ಇಲ್ಲ. ಸ್ಥಳ ನೋಡ್ತಾನಿ ಸೆಕ್ಯೂರಿಟಿ ನೋಡ್ತೀನಿ ಎಂದು ಭಾವನಾಗೆ ಯಾವ ಜಾಗವೂ ಇಷ್ಟ ಆಗಿಲ್ಲ. ವಾಟ್ಸಪ್‌ನಲ್ಲಿ ಒಂದು ಗ್ರೂಪ್‌ ಕೂಡ ಕ್ರಿಯೇಟ್ ಮಾಡಿದ್ದರು. ಭಾವನಾ ಪ್ಲ್ಯಾನ್ ಮಾಡಿಲ್ಲ ಅಂತ ಕೋಪ ಮಾಡಿಕೊಂಡರು. ಯಾರು ಏನೇ ಕಳುಹಿಸಿದ್ದರು ಚೆಕ್ ಮಾಡ್ತೀನಿ ಅಂತಾರೆ' ಎಂದು ಸಿಂಧು ಲೋಕನಾಥ್‌ ಹೇಳುತ್ತಾರೆ. 'ಇಲ್ಲ ಇಲ್ಲ ಸುಮ್ಮನೆ ಹೋಗುವುದಕ್ಕೆ ಆಗಲ್ಲ ಅ ಜಾಗದ ಬಗ್ಗೆ ತಿಳಿದುಕೊಳ್ಳಬೇಕು ಆ ಜಾಗದಲ್ಲಿ ಏನೆಲ್ಲಾ ಇದೆ ಎಂದು ವಿಚಾರಿಸಬೇಕು. ಪ್ಲ್ಯಾನ್ ಮಾಡಿಕೊಂಡು ಪ್ರಯಾಣ ಮಾಡಬೇಕು ಎನ್ನುತ್ತಾರೆ ಭಾವನಾ. ಅದಕ್ಕೆ ಎಲ್ಲರೂ ಮತ್ತೊಮ್ಮೆ ಭಾವಾನ ಹೈ ಮೆಂಟೆನೆನ್ಸ್‌ ಎನ್ನುತ್ತಾರೆ.

ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್

'ನಾವು ವರ್ಷಕ್ಕೆ ಒಂದು ಸಲ ಗೋವಾ ಟ್ರಿಪ್ ಮಾಡಬೇಕು. ಸಂಪೂರ್ಣ ಪ್ಲ್ಯಾನ್ ಮಾಡಿಕೊಂಡು ಇಡೀ ತಂಡ ಒಂದು ಕಡೆ ಇದ್ದರೆ ಭಾವನಾ ಮಾತ್ರ ಐಷಾರಾಮಿ ರೆಸಾರ್ಟ್‌ನಲ್ಲಿ ಒಬ್ಬರೇ ಉಳಿದುಕೊಳ್ಳುತ್ತಿದ್ದರು. ಸಮುದ್ರದ ಡದದಲ್ಲಿ ರಾತ್ರಿ ಪಾರ್ಟಿ ನಡೆಯುತ್ತಿತ್ತು ಆಗ ಭಾವನಾ ಒಂದು ಸ್ವಲ್ಪ ಹೊತ್ತು ಪಾರ್ಟಿ ಮಾಡಿ ಮತ್ತೆ ರೆಸಾರ್ಟ್‌ಗೆ ಹೋಗುತ್ತಿದ್ದರು' ಎಂದಿದ್ದಾರೆ. 'ಜನರು ಹೇಗೆ ಇದ್ದಕ್ಕಿದ್ದಂತೆ ಪ್ಲ್ಯಾನ್ ಮಾಡಿ ಪ್ರಯಾಣ ಮಾಡುತ್ತಾರೆ ನನಗೆ ಅರ್ಥ ಆಗುವುದಿಲ್ಲ. ನಾನು ಡೈಮೆಂಡ್‌ಗಿಂತ ಕೊಂಡ ದುಬಾರಿ. ನಾನು ಇರುವ ರೀತಿಗೆ ತುಂಬಾ ಖುಷಿ ಇದೆ' ಎಂದು ಭಾವನಾ ಹೇಳಿದ್ದಾರೆ. 

click me!