ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಕೊಟ್ಟ ಅಡ್ವೈಸ್‌ ನೋಡಿ!

By Suvarna News  |  First Published May 21, 2020, 4:26 PM IST

ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಹೆಸರು ವಾಸಿಯಾಗಿರುವ ರಶ್ಮಿಕಾ ಮಂದಣ್ಣ ಈಗ ಹೆಸರು ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಮಾಡಿದ ಕಾಮೆಂಟ್‌ ನೋಡಿದ್ರೆ ಶಾಕ್ ಆಗ್ತೀರಾ....


ಸ್ಯಾಂಡಲ್‌ವುಡ್‌ ಸೂಪರ್‌  ಹಿಟ್ ಸಿನಿಮಾ 'ಕಿರಿಕ್‌ ಪಾರ್ಟಿ' ಮೂಲಕ ಕರ್ನಾಟಕದ ಸ್ಟೇಟ್‌ ಕ್ರಶ್‌ ಆದ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತ ಚಿತ್ರರಂಗ ಹೈ ಪೇಡ್‌ ಡಿಮ್ಯಾಂಡ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ.  ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ರಶ್ಮಿಕಾ ಇದ್ದಕ್ಕಿದಂತೆ ಹೆಸರು ಬದಲಾಯಿಸಿಕೊಳ್ಳುವ ನಿರ್ಧಾರರ್ಕೆ ಬಂದಿರುವುದ್ಯಾಕೆ?

ಹೆಸರು ಏನಿರಬಹುದು?

Tap to resize

Latest Videos

ಇತ್ತೀಚಿಗೆ ಟ್ಟಿಟರ್‌ನಲ್ಲಿ ಅಭಿಮಾನಿಗಳ ಜೊತೆ ಸಂದರ್ಶಿಸಲು ರಶ್ಮಿಕಾ ತಮಾಷೆಯಾಗಿ ಒಂದು ಪ್ರಶ್ನೆ ಕೇಳುತ್ತಾರೆ. ' ಒಂದು ವೇಳೆ ನಾನು ಹೆಸರು ಬದಲಾಯಿಸಿಕೊಂಡರೆ ನೀವು ಯಾವ ಹೆಸರು ಸೂಚಿಸುತ್ತೀರಾ?' ಎಂದು ಪ್ರಶ್ನೆ ಕೇಳಿದಾಗ  ಅಭಿಮಾನಿಗಳು ನೀಡಿದ  ಪ್ರತಿಕ್ರಿಯೆ ನೋಡಿ ಶಾಕ್ ಆಗಿದ್ದಾರೆ.

 

Fun question: if I had to change my name - what would you want it to be? Be nice now! 🐒🐒😘

— Rashmika Mandanna (@iamRashmika)

ರಶ್ಮಿಕಾ ನೆಚ್ಚಿನ ಅಭಿಮಾನಿಗಳು ಈ ಹೆಸರು ಸೂಪರ್‌ ಆಗಿದೆ ಬದಲಾಯಿಸಿಕೊಳ್ಳುವುದು ಬೇಡ ಎಂದರೆ ಕೆಲ ನೆಟ್ಟಿಗರು ಕಾಲೆಳೆದಿದ್ದಾರೆ. 'ರಶ್ಮಿಕಾ ವಿಜಯ್ ದೇವರಕೊಂಡ ಮಾಡಿಕೊಳ್ಳಿ' ಎಂದರೆ ಇನ್ನು ಕೆಲವರು ಮೆಗಾ ಸ್ಟಾರ್ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ 'ರಶ್ಮಿಕಾ ಮಂಡುಕ' ಎಂದು ಮಾಡಿಕೊಳ್ಳಿ ಎಂದು ಹಾಸ್ಯ ಮಾಡಿದ್ದಾರೆ.  

ಆದರೆ ರಶ್ಮಿಕಾ ತನ್ನ ಪ್ರತಿ ಸಿನಿಮಾದಲ್ಲೂ ಪಾತ್ರಕ್ಕೆ ವಿಭಿನ್ನ ಹೆಸರುಗಳನ್ನು ನಿರ್ದೇಶಕರು ಆಯ್ಕೆ ಮಾಡುತ್ತಾರೆ. 

ಅನ್ನ ದಾಸೋಹಿ ರಶ್ಮಿಕಾ:

ರಶ್ಮಿಕಾ ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತುಕೊಂಡು ರಮ್ಮಿ ಆಡುತ್ತಿದ್ದಾರೆ ಎಂದು ಕೆಲವರು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು  ಯೋಧರಂತೆ ಸಹಾಯ ಮಾಡುತ್ತಿರುವ ಪೊಲೀಸರಿಗೆ ವಿರಾಜ್‌ಪೇಟೆಯಲ್ಲಿ ತಮ್ಮದೇ ಆದ ಸೆರಿನಿಟಿ ಹಾಲ್‌ನಲ್ಲಿ ದಿನಕ್ಕೆ ಒಂದು ಬಾರಿ ಊಟ ವ್ಯವಸ್ಥೆ ಮಾಡಿಸಿದ್ದಾರೆ. ರಶ್ಮಿಕಾ ತಂದೆ ಪ್ರತಿ ದಿನದ ವ್ಯವಸ್ಥೆ ನೋಡಿಕೊಳ್ಳುತ್ತಾರೆ.

ಕೊಡಗಿನ ಸೆರಿನಿಟಿ ಹಾಲ್‌ನಲ್ಲಿ ವಾರಿಯರ್ಸ್‌ಗೆ ಊಟದ ವ್ಯವಸ್ಥೆ; ರಶ್ಮಿಕಾ ಮಾನವೀಯತೆಯ ಕೆಲಸ!

ಪ್ರಾಣಿ ಪ್ರಿಯೆ:

ಇತ್ತೀಚಿಗೆ ಸಾಕು ನಾಯಿಗಳನ್ನು ಹೇಗೆ ನೋಡಿಕೊಳ್ಳಬೇಕೆಂದು ಅಭಿಮಾನಿಗಳಿಗೆ ಅಡ್ವೈಸ್  ಮಾಡಿದ ರಶ್ಮಿಕಾಳ ವಿರುದ್ಧ ಅನೇಕರು  ಗರಂ ಆದರೆ ಆದರೆ ಯಾರಿಗೂ ತಿಳಿದಿಲ್ಲ ರಶ್ಮಿಕಾ ಮನೆಯಲ್ಲಿ 8 ಸಾಕು ನಾಯಿಗಳು ಇದೆ ಎಂದು. ಪ್ರತಿ ದಿನವೂ ಒಂದೊಂದು ನಾಯಿಯನ್ನು ಮುದ್ದಾಡುತ್ತಾ ಫೋಟೋ ಶೇರ್ ಮಾಡುತ್ತಾರೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕುಟುಂಬಸ್ಥರು ಹಾಗೂ ಸಾಕು ನಾಯಿಗಳ ಜೊತೆ ಟೈಂ ಪಾಸ್  ಮಾಡುತ್ತಿದ್ದಾರೆ.

ಶ್ವಾನ ಪ್ರೇಮಿಗಳಿಗೆ ರಶ್ಮಿಕಾ ಕೊಟ್ಟ ಟಿಪ್ಸ್; ಮನೆಯಲ್ಲಿದೆ 8 ಸಾಕು ನಾಯಿಗಳು!

click me!