
ಮಹಾಮಾರಿ ಕೊರೋನಾ ವೈರಸ್ ಆರ್ಭಟದಿಂದ ಲಾಕ್‌ಡೌನ್ ಹಂತ ಹಂತವಾಗಿ ಮುಂದುವರೆಯುತ್ತಲೇ ಇದೆ. ಭಾರತ ಸರ್ಕಾರ ಕೊಂಚ ರಿಲೀಫ್ ನೀಡಿದ್ದರೂ ಕೆಲವೊಂದು ಪಾಲನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಈ ಸಮಯದಲ್ಲಿ ಹಸೆಮಣೆ ಏರುವ ಜೋಡಿಗಳು ಸರಳವಾಗಿ ಕೇವಲ 50 ಕುಟುಂಬಸ್ಥರ ಸಮ್ಮುಖದಲ್ಲಿ ಆಗಬೇಕಿದೆ.
ಜೋಡಿ ಮದುವೆಗೆ ನವೀನ್ ಸಾಕ್ಷಿ:
ಅರ್ಜುನ್ ಹಾಗೂ ನಂದಿನಿ 10 ವರ್ಷಗಳಿಂದ ಪ್ರೀತಿಸುತ್ತಿದ್ದು ಬೇರೆ ಬೇರೆ ಜಾತಿಗೆ ಸೇರಿದ ಕಾರಣ ಎರಡೂ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಇಬ್ಬರು ಸರಳ ಮದುವೆಗೆ ಸೈ ಎಂದಿದ್ದಾರೆ. ಮದುವೆಗೆ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ ಹಾಗೂ ಅನೇಕ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
'ದಿಗ್ಗಜರು', 'ರಾಯರ ಮಗ' ಚಿತ್ರದ ನಟಿ ಸಾಂಘವಿ ಹೇಗಿದ್ದಾರೆ, ಎಲ್ಲಿದ್ದಾರೆ?
ಈ ನವ ಜೋಡಿ ಮದುವೆಗೆ ಸಾಕ್ಷಿಯಾಗಿದ್ದು ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ.
ಪರಿಹಾರ ನಿಧಿ:
ಸರಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ನವೀನ್ ಕೃಷ್ಣ ಪರಿಹಾರ ನಿಧಿ ಚೆಕ್ ಸ್ವೀಕರಿಸಿ ನವ ಜೋಡಿಗಳ ಜೊತೆ ಜನರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ನವೀನ್ ಕೃಷ್ಣ ಈ ಚೆಕ್ ಅನ್ನು ಸರ್ಕಾರಕ್ಕೆ ತಲುಪಿಸಿದ್ದಾರೆ.
ನಿಲ್ಲದ ಸೋನು ಸೂದ್ ಮಾದರಿ ಕೆಲಸ, ವಲಸೆ ಕಾರ್ಮಿಕರಿಗೆ ಆಪತ್ಭಾಂಧವ .
ಸೆಲೆಬ್ರಿಟಿಗಳ ಸರಳ ಮದುವೆ:
ರಾಮನಗರದ ಜನತೆಯ ಆರ್ಶಿವಾದದೊಂದಿಗೆ ಅದ್ಧೂರಿಯಾಗಿ ಮದುವೆ ಆಗಬೇಕೆಂದುಕೊಂಡಿದ್ದ ನಿಖಿಲ್ ಹಾಗೂ ರೇವತಿ ಲಾಕ್‌ಡೌನ್‌ನಿಂದ ಏ.17ರಂದು ರಾಮನಗರದ ಫಾರ್ಮ್‌ಹೌನ್‌ನಲ್ಲಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಹಸೆಮಣೆ ಏರಿದ್ದರು.
'ಲಿಫ್ಟ್ ಕೊಡ್ಲಾ' ಅಂತ ಕೇಳಿ ದೊಡ್ಡ 'ಸರ್ಕಸ್'ನಲ್ಲಿ ಸಿಲುಕಿಕೊಂಡ ಕನ್ನಡದ ನಟಿ ಮಿಸ್ಸಿಂಗ್?
ಇನ್ನು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಪಿ ಅರ್ಜುನ್ ಮೇ.10ರಂದು ಬೆಂಗಳೂರಿನ ನಾಗರಬಾವಿಯಲ್ಲಿರುವ ನಿವಾಸದಲ್ಲಿ ಬಹು ದಿನಗಳ ಗೆಳೆತಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲಾಕ್‌ಡೌನ್ ಎಫೆಕ್ಟ್ ಕೇವಲ ಸ್ಯಾಂಡಲ್‌ವುಡ್‌ಗೆ ಮಾತ್ರವಲ್ಲ ತಮಿಳು ನಟ ನಿಖಿಲ್ ಸಿದ್ಧಾರ್ಥ್‌ಗೂ ತಟ್ಟಿದೆ.
ಹೌದು! ತಮಿಳು ನಟ ನಿಖಿಲ್ ಸಿದ್ಧಾರ್ಥ್ ಹಾಗೂ ಡಾಕ್ಟರ್ ಪಲ್ಲವಿ ಹೈದರಾಬಾದ್‌ನ ರೆಸಾರ್ಟ್‌ನಲ್ಲಿ ಸೋಷಿಯಲ್ ಡಿಸ್ಟೆಂಸಿಂಗ್ ಪಾಲಿಸಿ ಮದುವೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.