ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಮ್ಯಾ; ಮತ್ತೆ ಚಿತ್ರರಂಗಕ್ಕೆ ಮೋಹಕತಾರೆ ವಾಪಾಸ್

Published : Aug 31, 2022, 11:37 AM ISTUpdated : Aug 31, 2022, 01:57 PM IST
ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಮ್ಯಾ; ಮತ್ತೆ ಚಿತ್ರರಂಗಕ್ಕೆ ಮೋಹಕತಾರೆ ವಾಪಾಸ್

ಸಾರಾಂಶ

ರಮ್ಯಾ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಮತ್ತೆ ವಾಪಾಸ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಮದಲ್ಲಿ ಬಹಿರಂಗ ಪಡಿಸಿದ್ದಾರೆ. ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಮೂಲಕ ಇನ್ಮುಂದೆ ಸಿನಿಮಾ ಮತ್ತು ವೆಬ್ ಸೀರಿಸ್ ನಿರ್ಮಾಣ ಮಾಡುವುದಾಗಿ ರಮ್ಯಾ ಬಹಿರಂಗ ಪಡಿಸಿದ್ದಾರೆ. 

ಮೋಹಕತಾರೆ ರಮ್ಯಾ ಗಣೇಶ ಹಬ್ಬಕ್ಕೆ ಗುಡ್ ನ್ಯಾಸ್ ನೀಡುವುದಾಗಿ ಬಹಿರಂಗ ಪಡಿಸಿದ್ದರು. ರಮ್ಯಾ ನೀಡುವ ಸಿಹಿ ಸುದ್ದಿ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಕೊನೆಗೂ ರಮ್ಯಾ ಗುಡ್ ನ್ಯೂಸ್ ಏನು ಎನ್ನುವುದು ಬಹಿರಂಗವಾಗಿದೆ. 'ನಾಳೆ ಬೆಳಗ್ಗೆ 11.15ಕ್ಕೆ ಸುದ್ದಿ ಬರುತ್ತೆ. ಅದು ಅಫೀಶಿಯಲ್ ವಿಚಾರ' ಎಂದಿದ್ದರು ರಮ್ಯಾ. ಹೀಗಾಗಿ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಜೊತೆಗೆ ರಮ್ಯಾ ಮತ್ತೆ ಸಿನಿಮಾ ಮಾಡ್ತಾರೆ ಎನ್ನುವ ಸುಳಿವು ಅಭಿಮಾನಿಗಳಿಗೆ ಸಿಕ್ಕಿತ್ತು. ಆದರೀಗ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೌದು ರಮ್ಯಾ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಮತ್ತೆ ವಾಪಾಸ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಮದಲ್ಲಿ ಬಹಿರಂಗ ಪಡಿಸಿದ್ದಾರೆ. ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಮೂಲಕ ಇನ್ಮುಂದೆ ಸಿನಿಮಾ ಮತ್ತು ವೆಬ್ ಸೀರಿಸ್ ನಿರ್ಮಾಣ ಮಾಡುವುದಾಗಿ ರಮ್ಯಾ ಬಹಿರಂಗ ಪಡಿಸಿದ್ದಾರೆ. 

ರಮ್ಯಾ ಮತ್ತೆ ಯಾವಾಗ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೋಹಕ ತಾರೆ ಕೊನೆಗೂ ಸಿನಿಮಾರಂಗದಲ್ಲಿ ಸಕ್ರೀಯವಾಗಿರುವುದನ್ನು ನೋಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ರಮ್ಯಾ ನಿರ್ಮಾಣದ ಸಂಸ್ಥೆಯಿಂದ ಯಾವ ರೀತಿಯ ಸಿನಿಮಾಗಳು ಬರಲಿದೆ ಎಂದು ಅಭಿಮಾನಿಗಳು ಕುತೂಹಲ ಹೆಚ್ಚಾಗಿದೆ.



ಈ ಕಾರಣಕ್ಕೆ ಮದುವೆಯಾಗಿಲ್ಲ ಎಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

ಅಂದಹಾಗೆ ತನ್ನ ನಿರ್ಮಾಣ ಸಂಸ್ಥೆಯ ಹೆಸರು 'ಆಪಲ್ ಬಾಕ್ಸ್' ಎಂದರೇನು ಎನ್ನುವುದನ್ನು ವಿವರಿಸಿದ್ದಾರೆ. 'ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದ್ದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಲ್ಲದೇ ಇದ್ದಾಗ ಅಥವಾ ಕ್ಯಾಮರಾ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾದ ಈ ಆಪಲ್ ಬಾಕ್ಸ್ ನೆರವಿಗೆ ಒಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಫೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ' ಎಂದು ರಮ್ಯಾ ತನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಬಗ್ಗೆ ವಿವರಿಸಿದ್ದಾರೆ.

Ramya Divya Spandana: ನಾಳೆ ಬೆಳಗ್ಗೆ 11.15ಕ್ಕೆ ಗುಡ್‌ ನ್ಯೂಸ್‌ ಕೊಡಲಿರುವ ರಮ್ಯಾ!

ಅಂದಹಾಗೆ ಈಗಾಗಲೇ ಹೋಂ ಬ್ಯಾನರ್ ನಲ್ಲಿ ಈಗಾಗಲೇ ಎರಡು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗಳನ್ನು ಈ ಸಿನಿಮಾಗಳನ್ನು ಕೆಆರ್ ಜೆ ಸಂಸ್ಥೆ ವಿತರಣೆ ಮಾಡಲಿದೆ ಎಂದು ಬಹಿರಂಗ ಪಡಿಸಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ಮಾಡುವುದಾಗಿಯೂ ಹೇಳಿದ್ದಾರೆ. ಈ ಮೂಲಕ ಒಟಿಟಿಗೂ ಎಂಟ್ರಿ ಕೊಡುವುದಾಗಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ತನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಕುಟುಂಬಕ್ಕೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ನಿರ್ಮಾಪಕರಾದ ವಿಜಯ್ ಕಿರಗಂದೂರು. ಯೋಗಿ ಜಿ ರಾಜ್, ಜಯಣ್ಣ, ಕಾರ್ತಿಕ್ ಗೌಡಗೆ ಮೋಹಕತಾರೆ ಧನ್ಯವಾದ ತಿಳಿಸಿದ್ದಾರೆ. 

ನಟಿ ರಮ್ಯಾ ಕೊನೆಯದಾಗಿ ನಗರಹಾವು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ 2016ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದ ಚಿತ್ರೀಕರಣ ಮುಗಿಸಿ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದಿತ್ತು. ಬಳಿಕ ರಮ್ಯಾ ಮತ್ತೆ ತೆರೆಮೇಲೆ ಬಂದಿಲ್ಲ. ರಮ್ಯಾ ಅವರನ್ನು ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಅನೇಕ ವರ್ಷಗಳ ಬಳಿಕ ನಿರ್ಮಾಪಕಿಯಾಗಿ ಮತ್ತೆ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್