ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ವರದಿಗೆ ಸ್ಪಂದಿಸಿದ ರಾಜ್ ಕುಟುಂಬ : ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಹೆಸರು ನಾಮಕರಣ!

Published : Aug 30, 2022, 09:52 AM ISTUpdated : Aug 30, 2022, 09:59 AM IST
ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ವರದಿಗೆ ಸ್ಪಂದಿಸಿದ ರಾಜ್ ಕುಟುಂಬ : ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಹೆಸರು ನಾಮಕರಣ!

ಸಾರಾಂಶ

ಅಭಿಮಾನಿ ಮಗುವಿಗೆ ನಾಮಕರಣ ಮಾಡಿದ ರಾಘಣ್ಣ ಕುಟುಂಬ. ಗದಗದಿಂದ ಬಂದ ಸಹಾಯಗಳೆಷ್ಟು? ಜನರ ಪರ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ಟೀಂ......

ಗದಗ : ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರೋ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ ಪುನೀತ್ ರಾಜಕುಮಾರ್ ಅಂತಾ ನಾಮಕರಣ ಮಾಡಲಾಗಿದೆ.. 

ಅಪ್ಪು ಅಭಿಮಾನಿ ಮಾರುತಿ ಬಯಕೆಯಂತೆ ಬೆಂಗಳೂರಿನ ಸದಾಶಿವ ನಗರದಲ್ಲಿರೋ ತಮ್ಮ ನಿವಾಸಕ್ಕೆ ಕರೆಸಿಜೊಂಡ ರಾಘವೇಂದ್ರ ರಾಜಕುಮಾರ್ ಅವರು ತಾವೇ ಹೆಸರಿಟ್ಟು ಹರಿಸಿದ್ದಾರೆ.. 'ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು  ಅಂತಾ ಮಾರುತಿ ತಮ್ಮ ಬಯಕೆಯನ್ನ ಹೇಳಿಕೊಂಡಿದ್ದರು.ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವೆಬ್‌ನಲ್ಲಿ ಆಗಸ್ಟ್ 19ಕ್ಕೆ ಅಪ್ಪು ಅಭಿಮಾನಿಯ ವಿಶಿಷ್ಟ ಬಯಕೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಸುದ್ದಿ ಗಮನಿಸಿದ್ದ ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರಾದ ರಾಮು ಬಳ್ಳಾರಿ, ರೇಖಾ ಬಂಗಾರಶೆಟ್ಟರ್, ಮಂಜು ಕೊಟ್ಟೂರು, ಚಂದ್ರಶೇಖರಗೌಡ ರಾಜ್ ಕುಟುಂಬದ ಗಮನಕ್ಕೆ ತಂದಿದಾರೆ. ಅಲ್ದೆ, ರಾಘಣ್ಣ ಅವರ ಗಮನಕ್ಕೆ ತಂದು ಆಗಸ್ಟ್ 29 ಕ್ಕೆ ಸದಾಶಿವ ನಗರದ ರಾಘಣ್ಣ ನಿವಾಸದಲ್ಲಿ ನಾಮಕರಣ ಕಾರ್ಯಕ್ರಮ ಫಿಕ್ಸ್ ಮಾಡಿಸಿದ್ದಾರೆ. ನರಗುಂದದಿಂದ ಚಂದ್ರಶೇಖರ ಗೌಡ ಪಾಟೀಲ ವಾಹನ ವ್ಯವಸ್ಥೆ ಮಾಡಿದ್ದರು. ಸದಾಶಿವ ನಗರದ ರಾಘವೇಂದ್ರ ರಾಜಕುಮಾರ್ ನಿವಾಸದಲ್ಲೇ  ಕುಟುಂಬಸ್ಥರ ಸಮ್ಮುಖದಲ್ಲೆ ರಾಗಣ್ಣ ಮಗುವಿಗೆ ಅಪ್ಪು ಹೆಸರಿಟ್ಟಿದ್ದಾರೆ. 

ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು : ಗದಗದಿಂದ ಅಭಿಮಾನಿಯ ವಿಶಿಷ್ಟ ಬಯಕೆ!

ಅಪ್ಪು ಬದುಕಿದ್ದಾಗಲೇ ಮೊದಲ ಮಗುವಿಗೆ ಪುನೀತ್ ರಾಜಕುಮಾರ್ ಅಂತಾ ಹೆಸರಿಡ್ಬೇಕೆಂದು ಮಾರುತಿ ಅಂದುಕೊಂಡಿದ್ದರು. ಮೊದಲ ಮಗು ಹೆಣ್ಣು ಮಗು ಆಗಿದ್ದರಿಂದ ಪುನೀತ್ ಹೆಸರು ಇಡುವುದಕ್ಕೆ ಆಗಿರಲಿಲ್ಲ ಹೀಗಾಗಿ ಎರಡನೇ ಮಗುವಿಗೆ ಅಪ್ಪು ಅವರಿಂದಲೇ ಪುನಿತ್ ರಾಜಕುಮಾರ್ ಹೆಸರಿಡಿಸಬೇಕು ಅಂತಾ ಮೂರು ವರ್ಷದ ಹಿಂದೆಯೇ ಮಾರುತಿ ಅನ್ಕೊಂಡಿದ್ದರು. ಅಪ್ಪು ಅಕಾಲಿಕ ನಿಧನದಿಂದ ಮಾರುತಿಗೆ ತೀವ್ರ ನೋವಾಗಿತ್ತು. ಪುನೀತ್ ತೀರಿಹೋದಾಗಲೇ ಮಾರುತಿ ಅವರ ಪತ್ನಿ ಗರ್ಭಿಣಿಯಾಗಿರೋದು ಗೊತ್ತಾಗುತ್ತೆ. ಈ ಬಾರಿ ಗಂಡು ಮಗು ಹುಟ್ಟಿದ್ರೆ ಪುನೀತ್ ಕುಟುಂಬಸ್ಥರ ಸಮ್ಮುಖದಲ್ಲಿ ಅಪ್ಪು ಹೆಸರಿಡೋಣ ಅಂತಾ ಅನ್ಕೊಂಡಿದರಂತೆ. ಮಾರುತಿ ಆಸೆಯಂತೆ ಈಗ ರಾಘವೇಂದ್ರ ರಾಜಕುಮಾರ್ ಅವರೇ ಮಗುವಿಗೆ ಹೆಸರಿಟ್ಡಿದ್ದಾರೆ.

ಅನಾರೋಗ್ಯದ ಮಧ್ಯಯೂ ಮಾರುತಿ ಕುಟುಂಬವನ್ನ ಭೇಟಿಯಾದ ರಾಗಣ್ಣ, ಹೆಸರಿಟ್ಟು ಮಗುವಿಗೆ ಶುಭಹಾರೈಸಿದ್ದಾರೆ. ರಾಘಣ್ಣ ಆಗಮನಕ್ಕೂ ಮುಂಚೆ ಯುವ ರಾಜಕುಮಾರ್ ಆಗಮಿಸಿ ಮಗುವನ್ನ ಎತ್ತಿ ಮುದ್ದಾಡಿದ್ದಾರಂತೆ. ಪುನೀತ್ ರಾಜಕುಮಾರ್ ಅವರ ಮೇಲಿರೋ ಅಭಿಮಾನ ಕಂಡು ಯುವ ರಾಜಕುಮಾರ್ ಭಾವುಕರಾಗಿದ್ದಾರೆ. ಯುವ ರಾಜಕುಮಾರ್ ಅವರಲ್ಲೇ ಅಪ್ಪುವಿನ ರೂಪ ಕಂಡು ಮಾರುತಿ ಸಂತಸ ಪಟ್ಟಿದ್ದಾರೆ. ನಂತರ ಯುವರತ್ನನ ಸ್ಮರಣೆಯೊಂದಿಗೆ ನಾಮಕರಣ ಕಾರ್ಯಕ್ರಮ ನಡೆದಿದೆ. 

ಅಭಿಮಾನಿಯ ಆಸೆ ತೀರಿಸಿದ ಸಂತೃಪ್ತಿ ರಾಜ್ ಅಭಿಮಾನಿ ಸಂಘದ ಚಂದ್ರಶೇಖರ್ ಗೌಡ ಅವರಿಗಿದೆ. ದೊಡ್ಮನೆ ಕುಟುಂಬಸ್ಥರನ್ನ ಭೇಯಾಗೋದಕ್ಕೆ ಹೊನ್ನೆಗೌಡ, ಖಾದರ್ ಪಾಷಾ, ಉಮೇಶ್ ಕುರಿ ಅವರೂ ಸ್ಪಂದಿಸಿದರಂತೆ. ಜೊತೆಗೆ ಸುದ್ದಿ ಮಾಡಿ ಅಭಿಮಾನಿಯ ಮನದಾಳದ ಅಸೆ ರಾಜಕುಟುಂಬಕ್ಕೆ ತಲುಪಿಸುವ ಕೆಲಸ ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ಟೀಮ್ ಗೆ ಮಾರುತಿ ಹಾಗೂ ಚಂದ್ರಶೇಖರ್ ಗೌಡ ಧನ್ಯವಾದ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಲವೇ ಸತ್ಯ ಹೇಳುತ್ತದೆ, ಸಮಯವೇ ಉತ್ತರಿಸುತ್ತದೆ'.. ನಟ ದರ್ಶನ್ ಮೆಸೇಜ್‌ಗೆ 'ಡೆವಿಲ್' ಉತ್ತರ ಕೊಟ್ಟಿದೆಯೇ!
ಕಿರುತೆರೆಯಿಂದ ಹಿರಿತೆರೆಗೆ ಬಂದ ರಾಕಿಂಗ್ ಸ್ಟಾರ್ ಯಶ್‌ ನನಗೆ ಸ್ಫೂರ್ತಿ: ನಿಹಾರ್‌ ಮುಖೇಶ್‌