ಶಿಳ್ಳೆ ಹೊಡೆದ ವಿದ್ಯಾರ್ಥಿಗೆ 'ಯಾರೋ ಅದು' ಎಂದು ಅವಾಜ್ ಹಾಕಿದ ರಚಿತಾ ರಾಮ್!

Published : Dec 04, 2023, 04:37 PM ISTUpdated : Dec 04, 2023, 04:42 PM IST
 ಶಿಳ್ಳೆ ಹೊಡೆದ ವಿದ್ಯಾರ್ಥಿಗೆ 'ಯಾರೋ ಅದು' ಎಂದು ಅವಾಜ್ ಹಾಕಿದ ರಚಿತಾ ರಾಮ್!

ಸಾರಾಂಶ

ಮಕ್ಕಳ ಜೊತೆ ಮಕ್ಕಳಾಗಿ ವೇದಿಕೆ ಮೇಲೆ ಎಂಜಾಯ್ ಮಾಡಿದ ರಚಿತಾ ರಾಮ್... ಎಲ್ಲೆಡೆ ಗುಳಿ ಕೆನ್ನೆ ಚೆಲುವೆ ಫೋಟೋ ವೈರಲ್.... 

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ವಿದ್ಯಾ ಸಂಸ್ಥೆಗಳು ನಡೆಸಿದ ಭ್ರಮರ- ಇಂಚರ ನುಡಿ ಹಬ್ಬದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಲ್ಲಿನ ಸ್ಕೂಲ್ ಮತ್ತು ಕಾಲೇಜ್‌ ಮಕ್ಕಳ ಜೊತೆ ಮಾತನಾಡಿ ಎಂಜಾಯ್ ಮಾಡಿದ್ದಾರೆ. 

'ಪ್ರತಿ ವರ್ಷ ಕಟೀಲು ಶ್ರೀದುರ್ಗಾಪರಮೇಶ್ವರೀ ದರ್ಶನ್ ಪಡೆಯಲು ನಾನು ಬರುತ್ತೀನಿ ಖುಷಿಯಿಂದ ಈ ಸ್ಥಳಕ್ಕೆ ಬರುತ್ತೀನಿ. ಕಾಲೇಜ್‌ ಅಂದ್ಮೇಲೆ ಪ್ರಿನ್ಸಿಪಲ್‌ ಎಲ್ಲಾ ರೀತಿ ಬುದ್ಧಿ ಕೇಳಿರುತ್ತಾರೆ ನಾವು ಏನು ಹೇಳಲು ಆಗಲ್ಲ. ಒಂದು ವಿಚಾರ ಹೇಳುತ್ತೀನಿ...ನಿಮ್ಮ ಎಲ್ಲ ಗುರುಗಳಿಗೆ ಮರ್ಯಾದೆ ಕೊಡಿ. ಅವರು ಎದುರು ಇದ್ದಾಗ ಗೌರವ ಕೊಡುವುದು ಹೊರಟ ಮೇಲೆ ಮತ್ತೊಂದು ರೀತಿ ಗೌರವ ಕೊಡುವುದು ತಪ್ಪು. ನಮ್ಮ ತಾಯಿ ಮೊದಲು ಗುರು, ಎರಡನೇ ಗುರುಗಳು ನಮ್ಮ ಮೇಷ್ಟ್ರು. ನಮಗೆ ಶಿಕ್ಷಣ ನೀಡುವ ಪ್ರತಿಯೊಬ್ಬರೂ ಗುರುಗಳು. ತಂದೆ -ತಾಯಿ ಮೇಲೆ ಗೌರವ ಹೆಚ್ಚಿರಲಿ' ಎಂದು ರಚಿತಾ ರಾಮ್ ವೇದಿಕೆ ಮೇಲೆ ಮಾತನಾಡಿದ್ದಾರೆ.

ಮೈಸೂರ್ ಸಿಲ್ಕ್‌ ಸೀರೆಯಲ್ಲಿ ಮಿಂಚಿದ ಚಾರು; ಸೊಂಟದ ಮೇಲೆ ನೆಟ್ಟಿಗರ ಕಣ್ಣು!

'ದಯವಿಟ್ಟು ಪೋಷಕರಿಗೆ ನೋವು ಕೊಡಬೇಡಿ...ನಮ್ಮ ಕನಸು ಅವರ ಕನಸಾಗಿರುತ್ತದೆ. ಫ್ರೆಂಡ್ಸ್‌ನ ಚೆನ್ನಾಗಿ ನೋಡಿಕೊಳ್ಳು ಮುಂದೆ ಚೆನ್ನಾಗಿದ್ದು ಹಿಂದೆ ಕುಚ್ಚುವುದು ಮಾಡಬೇಡಿ. ದಾರಿ ತಪ್ಪುತ್ತಿರುವ ಸ್ನೇಹಿತರನ್ನು ಸರಿ ದಾರಿಗೆ ತೆಗೆದುಕೊಂಡು ಬಂದೆ. ಕೆಟ್ಟ ಕೆಲಸ ಮಾಡುತ್ತಿದ್ದರೆ ಅವರ ತಂದೆ ತಾಯಿಗೆ ನೇರವಾಗಿದೆ ಹೇಳಿ. ಒಂದು ಸಲ ಫ್ರೆಂಡ್ಸ್‌ ಅಂದ್ಮೇಲೆ ಸಾಯುವವರೆಗೂ ಫ್ರೆಂಡ್ಸ್‌ ಮನಸ್ಸಿನಲ್ಲಿ ಇಟ್ಟುಕೊಂಡು ಪ್ರೀತಿ ಮಾಡಿ' ಎಂದು ರಚಿತಾ ರಾಮ್ ಹೇಳಿದ್ದಾರೆ.

ಕಾಸ್ಟ್ಯೂಮ್ ಡಿಸೈನರ್‌ ಆಗಿ ಬದಲಾದ ರೇಖಾ ದಾಸ್ ಪುತ್ರಿ; ಫೋಟೋ ವೈರಲ್!

ರಚ್ಚು ವೇದಿಕೆ ಮೇಲೆ ಮಾತನಾಡುವಾಗ ಗುಂಪಿನಲ್ಲಿದ್ದ ಹುಡುಗರು ಸಿಳ್ಳೆ ಹೊಡೆದರು ಆಗ ಯಾರೋ ಅದು ಸಿಳ್ಳೆ ಹೊಡೆದಿದ್ದು ಎಂದು ಖಡಕ್ ಆಗಿ ಅವಾಜ್ ಹಾಕಿದ್ದಾರೆ. ವಿದ್ಯಾ ಸಂಸ್ಥೆಯಲ್ಲಿರುವ ಮೂರು ಮಕ್ಕಳ ರಚಿರಾ ರಾಮ್ ಚಿತ್ರ ಬಿಡಿದ್ದಾರೆ. ಅವರನ್ನು ವೈಯಕ್ತಿಕವಾಗಿ ವೇದಿಕೆ ಮೇಲೆ ಕರೆದು ತಬ್ಬಿಕೊಂಡು ರಚಿತಾ ರಾಮ್ ಮಾತನಾಡಿಸಿದ್ದಾರೆ. ಅಲ್ಲದೆ ಗುಂಪಿನಲ್ಲಿರುವ ವಿದ್ಯಾರ್ಥಿಗಳನ್ನು ಕರೆದು ಹಾಡು ಅಥವಾ ಡ್ಯಾನ್ಸ್ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಪುಟ್ಟ ಮಕ್ಕಳಿನಿಂದ ಕಾಲೇಜ್‌ ವಿದ್ಯಾರ್ಥಿಗಳು ಹಾಡಿದ್ದಾರೆ. ಎಲ್ಲರಿಗೂ ದೊಡ್ಡ ವೇದಿಕೆ ಸಿಗುವುದಿಲ್ಲ ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಆಗಾಗ ಸಲಹೆ ನೀಡಿದ್ದಾರೆ ರಚ್ಚು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?