ಮೇಘನಾ ಮುಂದೆ ಗಟ್ಟಿ ಆಗಿರ್ಬೇಕು ಅಳ್ಬಾರದು; ಅಳಿಯನನ್ನು ನೆನೆದು ಕಣ್ಣೀರಿಟ್ಟ ಪ್ರಮೀಳಾ ಜೋಷಾಯ್

Published : May 14, 2024, 04:18 PM IST
ಮೇಘನಾ ಮುಂದೆ ಗಟ್ಟಿ ಆಗಿರ್ಬೇಕು ಅಳ್ಬಾರದು; ಅಳಿಯನನ್ನು ನೆನೆದು ಕಣ್ಣೀರಿಟ್ಟ ಪ್ರಮೀಳಾ ಜೋಷಾಯ್

ಸಾರಾಂಶ

ಅಳಿಯನನ್ನು ನೆನೆದು ಭಾವುಕರಾದ ಪ್ರಮೀಳಾ ಜೋಷಾಯ್. ಜೀವನ ನಿಜಕ್ಕೂ ಕಷ್ಟ ಆಯ್ತು ಆದರೆ ಮೇಘನಾ ತುಂಬಾ ಸ್ಟ್ರಾಂಗ್.....  

ಕನ್ನಡ ಚಿತ್ರರಂಗದ ಅದ್ಭುತ ನಟಿ ಪ್ರಮೀಳಾ ಜೋಷಾಯ್ ಮತ್ತು ಪುತ್ರಿ ಮೇಘನಾ ರಾಜ್ ಇತ್ತೀಚಿಗೆ ತಮಿಳು ಯುಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ, ಫ್ಯಾಮಿಲಿ, ಮನೆ ಮತ್ತು ಜವಾಬ್ದಾರಿಗಳ ಬಗ್ಗೆ ಚರ್ಚೆ ಮಾಡುವಾಗ ಅಳಿಯನನ್ನು ನೆನಪಿಸಿಕೊಂಡು ಪ್ರಮೀಳಾ ಭಾವುಕರಾಗಿದ್ದಾರೆ. 

'ನನ್ನ ಮಗಳು ತಾಯಿ ಆಗುತ್ತಿರುವ ವಿಚಾರ ಕೇಳಿ ಖುಷಿ ಆಯ್ತು ಆದರೆ ಅದೇ ಸಮಯಕ್ಕೆ ನೋವು ಕೂಡ ಇತ್ತು. ಮುಂದಕ್ಕೆ ಜೀವನ ಹೇಗೆ ಎಂಬ ಯೋಚನೆ ಬಂತು. ಎದುರಿಸಲು ತುಂಬಾ ಕಷ್ಟವಾಗಿತ್ತು ಈಗ ಧೈರ್ಯದಿಂದ ಫೇಸ್‌ ಮಾಡಿದ್ದೀವಿ ಆದರೂ ನೆನಪು ಬಂದಾಗ ನೋವಾಗುತ್ತದೆ ಕಷ್ಟವಾಗುತ್ತದೆ. ಆಕೆ ಪ್ರೆಗ್ನೆಂಟ್ ಆಗಿದ್ದ ಕಾರಣ ನೆನಪು ಜಾಸ್ತಿನೇ ಬರುತ್ತದೆ ಆದರೆ ಆಕೆ ಗಟ್ಟಿಯಾಗಿ ನಿಂತು ಎದುರಿಸಿದ್ದಾರೆ ಏನೇ ನೋವಿದ್ದರೂ ನಮ್ಮ ಜೊತೆ ಹಂಚಿಕೊಂಡಿಲ್ಲ' ಎಂದು ಪ್ರಮೀಳಾ ಜೋಷಾಯ್ ಮಾತನಾಡಿದ್ದಾರೆ.  

ತೂಕದ ಬಗ್ಗೆ ಮಾತನಾಡಿದರೆ ನೋವಾಗುತ್ತೆ ಅಂದ್ರೂ ಕಾಮೆಂಟ್ ಮಾಡ್ತೀರಾ: ಮೇಘನಾ ರಾಜ್

ಆಕೆ ಮುಂದೆ ನಾವು ಸ್ಟ್ರಾಂಗ್ ಆಗಿ ಇರಬೇಕು ನಾವು ಬೇಸರ ಮಾಡಿಕೊಳ್ಳುವುದು ಅಥವಾ ಅಳುವುದು ಮಾಡಬಾರದು ಎಂದು ಸುಂದರ್ ರಾಜ್ ಹೇಳುತ್ತಿದ್ದರು. ಮೊದಲು ನಾನು ತುಂಬಾ ಸ್ಟ್ರಾಂಗ್ ಆಗಿರುವ ವ್ಯಕ್ತಿ ಆಗಿದ್ದ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ಆ ಶಕ್ತಿ ಎಲ್ಲಿ ಹೋಗಿದೆ ಗೊತ್ತಿಲ್ಲ ಎಂದು ಪ್ರಮೀಳಾ ಹೇಳಿದ್ದಾರೆ. 

ಗರ್ಭಿಣಿಯರು ತುಂಬಾ ನೋವಿನಲ್ಲಿದ್ದಾಗ ವಿಶೇಷ ಹಾರ್ಮೋನ್ ರಿಲೀಸ್ ಆಗುತ್ತೆ: ಮಗ ಕೊಟ್ಟ ಶಕ್ತಿ ಬಗ್ಗೆ ಮೇಘನಾ ರಾಜ್

ರಾಯನ್ ಹುಟ್ಟಿದಾಗ ಮೊದಲು ಎತ್ತಿಕೊಂಡಿದ್ದು. ಆಪರೇಷನ್‌ ರೂಮ್‌ನಲ್ಲಿ ಮೇಘನಾ ಜೊತೆ ನಿಂತುಕೊಂಡಿದ್ದೆ ಆಗ ತುಂಬಾ ಖುಷಿ ಆಯ್ತು. ಮಗುವನ್ನು ಕ್ಲೀನ್ ಕೂಡ ಮಾಡಿರಲಿಲ್ಲ ಅಷ್ಟು ಬೇಗ ಎತ್ತುಕೊಂಡು ಮುದ್ದಾಡಿದೆ. ಮೊಮ್ಮಗ ರಾಯನ್ ಸೇಮ್ ಚಿರು ರೀತಿ ಇದ್ದಾನೆ. ರಾಯನ್ ನಡೆಯುವ ಸ್ಟೈಲ್ ಕೂಡ ಚಿರು ರೀತಿ, ರಾಯನ್ ಮಾತನಾಡುವ ಸ್ಟೈಲ್, ನೋಡಲು ಇರುವುದು...ಪ್ರತಿಯೊಂದು ಚಿರು ರೀತಿ. ಕಣ್ಣು ಮಾತ್ರ ನನ್ನ ಮಗಳ ರೀತಿ ಇರುವುದು. ಡೈಲಾಗ್ ಹೇಳುವುದಾಗಲಿ ಅಥವಾ ಜೀನ್ಸ್‌ ಧರಿಸಿ ನಡೆದುಕೊಂಡು ಬರುವುದನ್ನು ನೋಡಿದಾಗ ವಾ! ಚಿರುನೇ ಬಂದಿದ್ದಾನೆ ಅನಿಸುತ್ತದೆ. ಅವನಲ್ಲಿ ಸಂಪೂರ್ಣವಾಗಿ ಚಿರು ಇದ್ದಾನೆ ಎಂದಿದ್ದಾರೆ ಪ್ರಮೀಳಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪತ್ನಿ ವಜ್ರದೋಲೆ ಕಳೆದಾಗ ಹುಡುಕಿ ಕೊಟ್ಟಿದ್ದ ಕೊರಗಜ್ಜ: ರೋಚಕ ಘಟನೆ ನೆನೆದ ವಿಜಯ ರಾಘವೇಂದ್ರ
Dr Rajkumar fans protest: ಅಣ್ಣಾವ್ರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ನಟ ಚೇತನ್ ಗಡಿಪಾರಿಗೆ ಹೆಚ್ಚಿದ ಒತ್ತಡ, ರಾಜ್ಯಾದ್ಯಂತ ಡಾ ರಾಜ್ ಫ್ಯಾನ್ಸ್ ಪ್ರತಿಭಟನೆ!