ಡಾ ರಾಜ್‌ ಮೇಲೆ ನಡೆದಿತ್ತು ಆ್ಯಸಿಡ್ ದಾಳಿಗೆ ಯತ್ನ; ಕೇಸ್ ಹಾಕಿದ್ರು ವಿಲನ್ ರೋಲ್‌ ನಟ!

By Shriram Bhat  |  First Published May 13, 2024, 4:41 PM IST

ಡಾ ರಾಜ್‌ಕುಮಾರ್ ಅವರು 'ನೃಪತುಂಗ' ಎನ್ನುವ ಸಿನಿಮಾದಲ್ಲಿ ಕೂಡ ನಟಿಸಬೇಕಿತ್ತು ಎನ್ನಲಾಗಿದೆ. ಆದರೆ, ಅದು ಕೂಡ ಸಾಧ್ಯವಾಗಲೇ ಇಲ್ಲ. 70 ವರ್ಷ ಕಳೆದ ಬಳಿಕ ವಯೋಸಹಜ ಎನ್ನುವಂತೆ ಡಾ ರಾಜ್‌ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. 


ಡಾ ರಾಜ್‌ಕುಮಾರ್ (Dr Rajkumar) ಎಂದರೆ ಕನ್ನಡದ ಆಸ್ತಿ, ಕನ್ನಡಿಗರಿಗೆ ಅಣ್ಣವ್ರು. ವರನಟ ಡಾ ರಾಜ್‌ಕುಮಾರ್ ಅವರೆಂದರೆ ಅವರೊಬ್ಬ ವ್ಯಕ್ತಿಯಲ್ಲ ಶಕ್ತಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಡಾ ರಾಜ್‌ಕುಮಾರ್ ಅವರಿಗೂ ಶತ್ರುಗಳು ಇದ್ದರು, ಕಿಡಿಗೇಡಿಗಳಿಂದ ಅವರಿಗೂ ತೊಂದರೆ ಆಗುತ್ತಿತ್ತು. ಅವರ ಮೇಲೆ ಆಸಿಡ್ ದಾಳಿಗೆ ಕೂಡ ಪ್ರಯತ್ನ ನಡೆದಿತ್ತು ಎಂದರೆ ಅಚ್ಚರಿ ಎನಿಸಿದರು ನಂಬಲೇಬೇಕು. ಹೌದು, ಸಿಕ್ಕ ಮಾಹಿತಿಯ ಪ್ರಕಾರ, 'ಎರಡು ಕಸನು' ಸಿನಿಮಾ ಶೂಟಿಂಗ್ ವೇಳೆ ಡಾ ರಾಜ್‌ಕುಮಾರ್ ಮೇಲೆ ಆಸಿಡ್ ದಾಳಿಗೆ (Acid Attack) ಪ್ರಯತ್ನ ನಡೆದಿತ್ತು. 

1974ರಲ್ಲಿ ಎರಡು ಕನಸು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ಡಾ ರಾಜ್‌ಕುಮಾರ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಬಂದ 15 ಜನರ ತಂಡ ಮೇರನಟನ ಮೇಲೆ ಆಸಿಡ್ ದಾಳಿಗೆ ಮುಂದಾಗಿತ್ತು. ಇದನ್ನು ವಿರೋಧಿಸಿ ನಟ ವಜ್ರಮುನಿಯವರು ಒಂದು ಕೇಸ್‌ ಕೂಡ ದಾಖಲಿಸಿದ್ದರು ಎನ್ನಲಾಗಿದೆ. ಅದಾದ ಬಳಿಕ ಡಾ ರಾಜ್ ಅವರು ಎಲ್ಲೇ ಶೂಟಿಂಗ್ ಹೋದರೂ ಅವರ ರಕ್ಷಣೆಗಾಗಿ 30 ಜನರಿದ್ದ ತಂಡ ಸದಾ ಅವರ ಜೊತೆಯಲ್ಲಿ ಇರುತ್ತಿತ್ತು. ಒಟ್ಟೂ 30 ಜನರನ್ನೊಳಗೊಂಡ ಕೆಎಂ ನಾಗರಾಜ್ ಹಾಗೂ ಅವರ ಸ್ನೇಹಿತರ ತಂಡ ಡಾ ರಾಜ್‌ಕುಮಾರ್ ಅವರಿಗೆ ಎಲ್ಲಾ ಕಡೆ ಬೆಂಗಾವಲಾಗಿ ಇರುತ್ತಿತ್ತು ಎನ್ನಲಾಗಿದೆ. 

Tap to resize

Latest Videos

ಸಾನ್ಯಾ ಅಯ್ಯರ್ ಜೊತೆ ಬಿಎಂಎಸ್ ಕಾಲೇಜಿನಲ್ಲಿ ಲುಕ್ ಕೊಟ್ಟಿದ್ದೇಕೆ ಸಮರ್ಜಿತ್ ಲಂಕೇಶ್!

ಅಂದಹಾಗೆ, ಡಾ ರಾಜ್‌ಕುಮಾರ್ ಅವ್ರಿಗೆ ಯಾವಾಗ್ಲೂ ಒಂದು ಆಸೆ ಇತ್ತಂತೆ. ಅದನ್ನ ಯಾವಾಗ್ಲೂ ನಟಿ ಭಾರತಿ ಅವ್ರಿಗೆ ಹೇಳ್ತಾ ಇದ್ರಂತೆ. 'ನಂಗೆ ರಾಮಾಯಣ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇದೆ. ಅದ್ರಲ್ಲಿ ನಾನು ರಾಮನಾಗಿ, ನೀವು (ಭಾರತಿ) ಸೀತೆಯಾಗಿ ನಟಿಸ್ಬೇಕು' ಅಂದಿದ್ರಂತೆ ಡಾ ರಾಜ್‌ಕುಮಾರ್. ಆದ್ರೆ, ಕೊನೆಗೂ ಡಾ ರಾಜ್‌ ಅವ್ರ ಆ ಆಸೆ ಕೈಗೂಡ್ಲೇ ಇಲ್ಲ. ಅದಕ್ಕೆ ಭಾರತಿಯವ್ರು ಡಾ ರಾಜ್‌ಕುಮಾರ್ ಅವ್ರಿಗೆ 'ಅದು ದುರ್ದೈವ' ಎಂದಿದ್ದರಂತೆ. ಒಟ್ಟಿನಲ್ಲಿ, ಬಹಳಷ್ಟು ಚಿತ್ರಗಳಲ್ಲಿ ನಾಯಕ-ನಾಯಕಿಯರಾಗಿ ಮಿಂಚಿದ್ದ ಡಾ ರಾಜ್‌ಕುಮಾರ್ ಹಾಗೂ ಭಾರತಿ ಜೋಡಿ 'ರಾಮಾಯಣ' ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲೇ ಇಲ್ಲ. 

ರೋಲ್‌ಗೆ ಬ್ರಾಂಡ್‌ ಮಾಡುವ ಟ್ರೆಂಡ್ ಇದೆ, ಅಂಥ ಅನುಭವ ನನಗೂ ಆಗಿದೆ; ಹಿತಾ ಚಂದ್ರಶೇಖರ್!

ಡಾ ರಾಜ್‌ಕುಮಾರ್ ಅವರು 'ನೃಪತುಂಗ' ಎನ್ನುವ ಸಿನಿಮಾದಲ್ಲಿ ಕೂಡ ನಟಿಸಬೇಕಿತ್ತು ಎನ್ನಲಾಗಿದೆ. ಆದರೆ, ಅದು ಕೂಡ ಸಾಧ್ಯವಾಗಲೇ ಇಲ್ಲ. 70 ವರ್ಷ ಕಳೆದ ಬಳಿಕ ವಯೋಸಹಜ ಎನ್ನುವಂತೆ ಡಾ ರಾಜ್‌ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಮಂಡಿ ನೋವು ಅವರನ್ನು ಎಡೆಬಿಡದೇ ಕಾಡುತ್ತಿತ್ತು. ಜೀವನ ಚೈತ್ರ ಶೂಟಿಂಗ್ ವೇಳೆಯಲ್ಲೇ ಅವರಿಗೆ ಸಾಕಷ್ಟು ದಣಿವಾಗುತ್ತಿತ್ತು ಎನ್ನುವವರಿದ್ದಾರೆ. ಅದೇನೇ ಇರಲಿ, ಡಾ ರಾಜ್‌-ಭಾರತಿ ಜೋಡಿಯ ಚಿತ್ರವೊಂದು ಕನ್ನಡ ಪ್ರೇಕ್ಷಕರಿಗೆ ತಪ್ಪಿಹೋಯ್ತು ಎಂಬ ಕೊರಗು ಅವರಿಬ್ಬರ ಜೋಡಿಯ ಅಭಿಮಾನಿಗಳಿಗೆ ಯಾವತ್ತೂ ಇರಲಿದೆ. 

ವಿಜಯ್ ದೇವರಕೊಂಡ ಕೂಲ್ ಮ್ಯಾನ್, ರೌಡಿ ಅಲ್ಲ; ವೈರಲ್ ಆಯ್ತು ಮೃಣಾಲ್ ಠಾಕೂರ್ ಮಾತು!

click me!