'ಗಾಳಿಪಟ 2'ಗೆ ನಾಯಕಿಯರು ಬದಲಾದರು!

By Web Desk  |  First Published Oct 22, 2019, 10:34 AM IST

ನಿರ್ದೇಶಕ ಯೋಗರಾಜ್ ಭಟ್ ಅವರ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ಬದಲಾವಣೆ ಆಗಿದೆ. ಚಿತ್ರದ ನಿರ್ಮಾಪಕರು ಹಾಗೂ ನಾಯಕಿಯರು ಬದಲಾಗಿದ್ದಾರೆ.


ಗಣೇಶ್, ಪವನ್ ಕುಮಾರ್, ದಿಗಂತ್ ಚಿತ್ರದ ಹೀರೋಗಳು. ಇವರಿಗೆ ಈ ಹಿಂದೆ ಅದಿತಿ ಪ್ರಭುದೇವ, ಸೋನಾಲಿ ಮೊಂತೆರೋ, ಶರ್ಮಿಳಾ ಮಾಂಡ್ರೆ ಹಾಗೂ ಒಬ್ಬ ವಿದೇಶಿ ನಟಿಯನ್ನು ಕರೆತರುವ ಯೋಚನೆಯಲ್ಲಿದ್ದರು ಭಟ್ಟರು.

ಆದರೆ ಈಗ ನಟಿಯರಾದ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು ಹಾಗೂ ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಚಿತ್ರದ ನಾಯಕಿ ಯರಾಗಿ ಆಯ್ಕೆ ಆಗಿದ್ದಾರೆ.
ಇದಕ್ಕೂ ಮೊದಲು ಹೀರೋ ಬದಲಾದರು.

Tap to resize

Latest Videos

ಆಪ್ತಮಿತ್ರ ನಾನೇ ಮಾಡಬೇಕಿತ್ತು: ರವಿಚಂದ್ರನ್

ಹೀಗೆ ಪದೇ ಪದೇ ಬದಲಾವಣೆಯ ಗಾಳಿಗೆ ಒಡ್ಡಿಕೊಳ್ಳುತ್ತಿರುವ ಚಿತ್ರದ ಹೆಸರು ‘ಗಾಳಿಪಟ 2’. ಈ ಚಿತ್ರದ ನಿರ್ಮಾಪಕರಾಗಿ ಬಂದವರು ಮಹೇಶ್ ದಾನಣ್ಣನವರ್. ಈಗ ಇವರ ಜಾಗಕ್ಕೆ ರಮೇಶ್ ರೆಡ್ಡಿ ನಂಗ್ಲಿ ಬಂದಿದ್ದಾರೆ. ಇವರು ಈ ಹಿಂದೆ ‘ಪಡ್ಡೆಹುಲಿ’ ಚಿತ್ರವನ್ನು ನಿರ್ಮಿಸಿದವರು. ನಂತರ ರಮೇಶ್ ಅರವಿಂದ್ ನಟನೆ ಹಾಗೂ ನಿರ್ದೇಶನದಲ್ಲಿ ‘100’ ಹೆಸರಿನ ಚಿತ್ರ ಶುರು ಮಾಡಿದ್ದಾರೆ. ಇದರ ಶೂಟಿಂಗ್ ನಡೆಯುತ್ತಿರುವಾಗಲೇ ‘ಗಾಳಿಪಟ 2’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ನಟಿಯಾಗಲು ಅಮೆರಿಕ ಬಿಟ್ಟು ಬಂದ ಕರಾವಳಿ ಹುಡುಗಿ ಗಾನಾ ಭಟ್!

ಸೂರಜ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನವೆಂಬರ್ ತಿಂಗಳಿಂದ ಚಿತ್ರೀಕರಣ ಶುರುವಾಗಲಿದ್ದು, ನಿರ್ದೇಶಕರಾಗಿ ಯೋಗರಾಜ್ ಭಟ್ ಅವರೇ ಮುಂದುವರಿದಿದ್ದಾರೆ. ಅದ್ವೈತ್ ಗುರುಮೂರ್ತಿ ಕ್ಯಾಮೆರಾ, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. 
 

click me!