
ಬೆಂಗಳೂರಿನ ಸಿನಿಮಾ ನಗರಿ ಎಂದೇ ಗುರುತಿಸಿಕೊಂಡಿರುವ ಗಾಂಧಿನಗರದಲ್ಲಿ ಹೊಸದಾಗಿ ಸಿನಿಮಾ ಕಛೇರಿ ತೆರೆದಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ನೂತನ ಸಿನಿಮಾ ವಿತರಣಾ ಕಛೇರಿಯನ್ನು ಉದ್ಘಾಟನೆ ಮಾಡಿದರು.
ರಾಜ್ ಮೊಮ್ಮಗನ ಜೊತೆ ’ಬಾಕ್ಸರ್’ ಹೊಡೆದ ಆಶಿಕಾ ರಂಗನಾಥ್ ಅಕ್ಕ!
ಆರ್ಕಿಟೆಕ್ ಉಲ್ಲಾಸ್ ಅವರು ರೂಪಿಸಿರುವ ಈ ಕಛೇರಿಯ ವಿನ್ಯಾಸವನ್ನು ಬಂದಿದ್ದ ಗಣ್ಯರು ಮೆಚ್ಚಿಕೊಂಡರು. ಗಾಂಧಿನಗರದಲ್ಲಿರುವ ಫ್ರೀಡಂ ಪಾರ್ಕ್ ಎದುರುಗಿನ ವೆಟ್ರಾ ಹೌಸ್‌ನ ಮೂರನೇ ಮಹಡಿಯಲ್ಲಿ ಈ ನೂತನ ಕಛೇರಿ ಆರಂಭಗೊಂಡಿಸಿದೆ.
ನಟರಾದ ನಿಖಿಲ್‌ಕುಮಾರ್, ಶರಣ್, ವಿನಯ್ ರಾಜ್ ಕುಮಾರ್, ಹಿರಿಯರಾದ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಹೇಮಂತ್ ರಾವ್, ಸಿಂಪಲ್ ಸುನಿ, ವಿತರಕ ಜಯಣ್ಣ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿ ಪುಷ್ಕರ ಅವರ ಸಿನಿಮಾ ವಿತರಣೆ ಸಂಸ್ಥೆಗೆ ಶುಭ ಕೋರಿದರು. ಸದ್ಯಕ್ಕೆ ಪುಷ್ಕರ್ ಹಾಗೂ ರಕ್ಷಿತ್ ಶೆಟ್ಟಿ ಅವರ ಕಾಂಬಿನೇಷನ್ನ ಚಿತ್ರಗಳ ಪೈಕಿ ‘ಅವನೇ ಶ್ರೀಮನ್ನಾರಾಯಣ’ ಇದೇ ವರ್ಷ ತೆರೆಗೆ ಬರುತ್ತಿದೆ. ಆ ನಂತರ ‘ಭೀಮಸೇನಾ ನಳಮಹಾರಾಜ’, ‘ಅವತಾರಪುರುಷ’, ವಿನಯ್ ರಾಜ್‌ಕುಮಾರ್ ನಟನೆಯ ಚಿತ್ರ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.