ಭೀಕರ ಅಪಘಾತದಿಂದ ಮೂರ್ನಾಲ್ಕು ಅಪರೇಷನ್‌ಗೆ ಒಳಗಾದ ನಟಿ ನಭಾ ನಟೇಶ್

Published : Jan 10, 2023, 02:58 PM IST
 ಭೀಕರ ಅಪಘಾತದಿಂದ ಮೂರ್ನಾಲ್ಕು ಅಪರೇಷನ್‌ಗೆ ಒಳಗಾದ ನಟಿ ನಭಾ ನಟೇಶ್

ಸಾರಾಂಶ

ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದಕ್ಕೆ ಕಾರಣ ತಿಳಿಸಿದ ನಭಾ ನಟೇಶ್. ಅಭಿಮಾನಿಗಳು ಗಾಬರಿ ಆಗುವ ಅಗತ್ಯವಿಲ್ಲ...  

2015ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಭಾ ನಟೇಶ್‌ ಕಾಲಿಟ್ಟರು. ಅನಂತರ ಲೀ, ಸಾಹೇಭಾ ಚಿತ್ರದಲ್ಲಿ ನಟಿಸಿದ ನಂತರ ನನ್ನನ್ನು ದೋಚುಕುಂದುವಟೆ ಸಿನಿಮಾ ಸಹಿ ಮಾಡಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಿಗೆ ಸಹಿ ಮಾಡುವ ಮೂಲಕ ಕನ್ನಡ ಚಿತ್ರರಂಗದಿಂದ ದೂರ ಉಳಿದುಬಿಟ್ಟರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಭಾ ಈಗ ಬರೆದುಕೊಂಡಿರುವ ಫೋಟೋ ವೈರಲ್ ಆಗುತ್ತಿದೆ...

'ಹಲವು ದಿನಗಳಿಂದ ನಾನು ಯಾರಿಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ ನಾನು ಹೇಗೆ ನಿಮ್ಮನ್ನು ಮಿಸ್ ಮಾಡಿಕೊಂಡೆ ಹಾಗೇ ನೀವು ಕೂಡ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಭಾವಿಸಿರುವೆ. ಕಳೆದ ವರ್ಷ ನನ್ನ ಜೀವನದ ಕಷ್ಟ ಸಮಯ ಎದುರಾಗಿತ್ತು. ಭೀಕರ ಅಪಘಾತಕ್ಕೆ ಒಳಗಾಗಿ ನಾನು ನನ್ನ ಎಡ ಭುಜದ ಮೂಳೆ ಫ್ರ್ಯಾಕ್ಚರ್ ಆಗಿದೆ. ಇದರಿಂದ ನಾನು ಮೂರ್ನಾಲ್ಕು ಆಪರೇಷನ್ ಮಾಡಿಸಿಕೊಂಡಿರುವೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ನೋವು ಅನುಭವಿಸಿರುವೆ. ಈಗ ಗಾಯದಿಂದ ನಾನು ಚೇತರಿಸಿಕೊಳ್ಳುತ್ತಿರುವೆ, ಒಂದು ಹೆಜ್ಜೆ ಹಿಂದೆ ಇಟ್ಟು ಸಿನಿಮಾ ಕೆಲಸದಿಂದ ಹೊರ ಬಂದಿರುವೆ, ನಾನು ಅತಿ ಹೆಚ್ಚು ಇಷ್ಟ ಪಡುವಂತ ಕೆಲಸವಿದು' ಎಂದು ನಭಾ ನಟೇಶ್ ಬರೆದುಕೊಂಡಿದ್ದಾರೆ. 

'ಪ್ರೀತಿಯಿಂದ ನನಗೆ ಧೈರ್ಯ ಮಾಡಿ ಕಮ್ ಬ್ಯಾಕ್ ಮಾಡಲು ಸಾಧ್ಯವಾಗುತ್ತಿರುವುದು. ನಾನು ಮಾಡಿರುವ ಕೆಲಸಕ್ಕೆ ನೀವು ಕೊಟ್ಟಿರುವ ಪ್ರೀತಿ ಅಪಾರ. ಈಗ ನಾನು ಚೇತರಿಸಿಕೊಂಡಿರುವೆ ಎಂದು ಖುಷಿಯಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಮೊದಲಿಗಿಂತ ಗಟ್ಟಿಯಾಗಿ ನಿಂತಿರುವೆ, ನಿಂತುಕೊಳ್ಳುವೆ. 2023 ನಾನು ಫುಲ್ ರೆಡಿಯಾಗಿರುವೆ' ಎಂದು ನಭಾ ಹೇಳಿದ್ದಾರೆ. 

ಪರಭಾಷೆಯಲ್ಲಿ ಒಂದೇ ಚಿತ್ರಕ್ಕೆ ಸ್ಟಾರ್‌ ಆದ ಕನ್ನಡ ನಟಿಯರು!
 
ಸಂಭಾವನೆ 1 ಕೋಟಿ:

ನಭಾ ನಟೇಶ್‌ ಮೊದಲೆರಡು ಚಿತ್ರಗಳಲ್ಲಿ ಅಷ್ಟೇನು ಯಶಸ್ಸು ಕಾಣದಿದ್ದರೂ ಮೂರನೇ ಚಿತ್ರ ಪೂರಿ ಜಗನ್ನಾಥ್‌ ನಿರ್ದೇಶನದ ‘ಐ-ಸ್ಮಾರ್ಟ್‌ ಶಂಕರ್‌’ ಗೆದ್ದಿದ್ದರಿಂದ ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಹೊಸ ಚಿತ್ರಕ್ಕಾಗಿ ಒಂದು ಕೋಟಿ ಸಂಭಾವನೆ ಕೇಳಿದ್ದು, ಚಿತ್ರತಂಡ ಕೊಡಲು ನಿರ್ಧರಿಸಿದೆ. ಚಿತ್ರದಲ್ಲಿ ಸಾಕಷ್ಟುಗ್ಲಾಮರ್‌ ದೃಶ್ಯಗಳಿವೆ, ಸಿಕ್ಕಾಪಟ್ಟೆಹಾಟ್‌ ಆಗಿ ಕಾಣಿಸಿಕೊಳ್ಳುವ ಅಗತ್ಯವಿದೆ ಎಂದು ಅರಿತ ನಭಾ, ಒಂದು ಕೋಟಿಯ ಬೇಡಿಕೆ ಇಟ್ಟಿದ್ದಾರೆ ಎಂಬುದು ಟಾಲಿವುಡ್‌ ಮಂದಿ ಹೊಸ ಟಾಂಗ್‌. ಇದ್ಯಾವುದಕ್ಕೂ ಕೇರ್‌ ಮಾಡದ ಕನ್ನಡದ ಪಟಾಕ, ಪರಭಾಷೆಯಲ್ಲಿ ಕೋಟಿ ನಾಯಕಿ ಎನಿಸಿಕೊಂಡಿದ್ದಾರೆ.

18 ವರ್ಷಕ್ಕೆ ಸಿನಿ ಜರ್ನಿ ಆರಂಭಿಸಿದ ನಭಾ ನಟೇಶ್‌ ಮೂಲತಃ ಶೃಂಗೇರಿ ಅವರು. ಇನ್‌ಫಾರ್ಮೇಷನ್‌ ಟೆಕ್ನಾಲಜಿ ವ್ಯಾಸಂಗ ಮಾಡಿರುವ ನಭಾ ಪ್ರಕಾಶ್‌ ಬೆಳವಾಡಿ ಆಕ್ಟಿಂಗ್‌ ಸ್ಕೂಲ್‌ನಲ್ಲಿ ನಟನೆ ತರಬೇತಿ ಪಡೆದುಕೊಂಡಿದ್ದಾರೆ. ಬಾಲ್ಯದಿಂದಲ್ಲೂ ಭರತನಾಟ್ಯ ಕಲಿತು ಅನೇಕ ಡ್ಯಾನ್ಸ್‌ ಕಾರ್ಯಕ್ರಮ ನಿರ್ದೇಶನ ಮಾಡಿದ್ದಾರೆ. 2013ರಲ್ಲಿ ನಡೆದ ಫೆಮಿನಾ ಮಿಸ್‌ ಇಂಡಿಯಾ 11ನೇ ಸ್ಪರ್ಧಿಯಾಗಿದ್ದರು.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ