ಸೀರೆ ಉಡುಸ್ತೀನಿ ಅಂದೋರು ಕೈ ಕೊಟ್ರು ಹೋದ್ರು, ಆಮೇಲೆ ಹೀಗೆಲ್ಲಾ ಆಯ್ತು; ತನಿಷಾ ಕುಪ್ಪಂಡ!

By Shriram Bhat  |  First Published Jan 12, 2025, 6:14 PM IST

ನಾನು ಕಾಲೇಜಿಗೆ ಹೋಗುವಾಗ ಒಂದು ಕಡೆ ಆಂಕರಿಂಗ್ ಮಾಡಿ 300 ರೂಪಾಯಿ ಸಂಪಾದನೆ ಮಾಡ್ತಿದ್ದೆ. ಹಾಗೂ, ಕಾಲೇಜು ಹುಡುಗಿಯರಿಗೆ ಮೆಹಂದಿ ಹಾಕ್ತಾ ಇದ್ದೆ. ನಾನು, ನನ್ ಫ್ರ್ರಂಡ್ ಸೇರಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೆಹಂದಿನ ಹತ್ತು ರೂಪಾಯಿಗೆ ಹಾಕ್ತಾ ಇದ್ವಿ. ಯಾಕೆ ಅಂದ್ರೆ ನಮ್ಗೆ ಆಗ ಮನೆಲ್ಲಿ..


ಬಿಗ್ ಬಾಸ್ ಕನ್ನಡ ಖ್ಯಾತಿಯ ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಹಳೆಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಮ್ಮ ಕಾಲೇಜು ದಿನಗಳು, ಅಲ್ಲಿ ಸಂಪಾದನೆಗೆ ಕಂಡುಕೊಂಡಿದ್ದ ದಾರಿ, ಮಾಡುತ್ತಿದ್ದ ಸಂಪಾದನೆ ಹೀಗೆ ಎಲ್ಲ ಸೀಕ್ರೆಟ್‌ಗಳನ್ನೂ ನಟಿ ತನಿಷಾ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ 'ಪಾರಿಜಾತ'ದ ದಿಗಂತ್ ತಂಗಿ ತನಿಷಾ ಅದೇನು ಹೇಳಿದ್ದಾರೆ ಅಂತ ನೋಡಿ..

'ಸ್ಟ್ರಗಲ್ಸ್‌ ಎಲ್ಲಾ ಈ ಟೈಮ್‌ಗೆ ತುಂಬಾ ಸಣ್ಣದಾಗಿ ಕಾಣ್ಸುತ್ತೆ.. ಆದ್ರೆ ಆ ಟೈಮ್‌ಗೆ ಆಗ 'ಛೇ ನಂಗೆ ಹಾಗ್ ಮಾಡ್ಬಿಟ್ರು, ನಂಗೆ ಹೀಗ್ ಮಾಡ್ಬಿಟ್ರು ಅಂತ ಅಂದ್ಕೊಂಡಿದ್ದು ಈಗ ಯೋಚ್ನೆ ಮಾಡಿದ್ರೆ ತುಂಬಾ ಸಿಲ್ಲಿ ಅನ್ಸುತ್ತೆ.. ಅದಕ್ಕೆ ನಾನು ಅಷ್ಟೊಂದು ಅತ್ತಿದ್ನಾ? ಅಷ್ಟೊಂದ್ ಬೇಜಾರು ಮಾಡ್ಕೊಂಡಿದ್ನ ಅಂತ ಈಗ ಅನ್ಸುತ್ತೆ ಅದನ್ನ ನೆನಪಿಸಿಕೊಂಡಾಗ. ಆದ್ರೆ ಆವಾಗ ಅದು ತುಂಬಾ ದೊಡ್ಡದು ಅನ್ನಿಸ್ತಾ ಇತ್ತು..' ಎಂದಿದ್ದಾರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ. 

Tap to resize

Latest Videos

ಮೈಯೋಸಿಟಿಸ್ ಮುಗಿಸಿ ಮತ್ತೊಂದು ಮಹಾ ಕಾಯಿಲೆಗೆ ತುತ್ತಾದ ಸಮಂತಾ; ಏನಿದು ಕರ್ಮ?

ನಾನು ಕಾಲೇಜಿಗೆ ಹೋಗುವಾಗ ಒಂದು ಕಡೆ ಆಂಕರಿಂಗ್ ಮಾಡಿ 300 ರೂಪಾಯಿ ಸಂಪಾದನೆ ಮಾಡ್ತಿದ್ದೆ. ಹಾಗೂ, ಕಾಲೇಜು ಹುಡುಗಿಯರಿಗೆ ಮೆಹಂದಿ ಹಾಕ್ತಾ ಇದ್ದೆ. ನಾನು, ನನ್ ಫ್ರ್ರಂಡ್ ಸೇರಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೆಹಂದಿನ ಹತ್ತು ರೂಪಾಯಿಗೆ ಹಾಕ್ತಾ ಇದ್ವಿ. ಯಾಕೆ ಅಂದ್ರೆ ನಮ್ಗೆ ಆಗ ಮನೆಲ್ಲಿ ಸಿಗ್ತಾ ಇದ್ದಿದ್ದೇ ಕೇವಲ ಹತ್ತು ರೂಪಾಯಿ. ಹೀಗಾಗಿ ಈ ರೀತಿಯಲ್ಲಿ ಸಂಪಾದನೆ ಮಾಡ್ತಾ ಇದ್ವಿ. ಆಗಿನ ಕಾಲದಲ್ಲಿ ಅದೇ ಹೆಚ್ಚು ಅನ್ಬಹುದು. 

ಕಾಲೇಜು ಮುಗಿದ ಮೇಲೆ ಮೂರು ಸುಮಾರು ತಿಂಗಳು ಕೆಲಸ ಮಾಡಿದ್ದೆ.. ಆದ್ರೆ ನನ್ನ ಆಸೆ, ಕನಸು ಬೇರೆ ಇದ್ದಿದ್ದರಿಂದ ಕೆಲಸ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದೆ. ಕೆಲಸ ಮಾಡಿದ ಮೊದಲ ಸಿನಿಮಾ ಹಾಯ್. ಆ ಬಳಿಕ ಪಾರಿಜಾತ. ಆದರೆ ಈ ಸಿನಿಮಾಗಳು ಬಿಡುಗಡೆ ಆಗಿರೋ ಪಾಟರ್ನ್ ಬೇರೆ ಇದೆ ಎಂದಿದ್ದಾರೆ ನಟಿ ತನಿಷಾ ಕುಪ್ಪಂಡ. ಪಾರಿಜಾತ ಸಿನಿಮಾದಲ್ಲಿ ದಿಗಂತ್ ತಂಗಿಯಾಗಿ ಕಾಣಿಸಿಕೊಂಡಿದ್ದೇನೆ. ಅದರಲ್ಲಿ ನಾನು ಸಂಭಾವನೆಯನ್ನು ಸಹ ಪಡೆದಿದ್ದೇನೆ. 

ಆದರೆ, ಅದಕ್ಕಿಂತ ಮುಖ್ಯವಾಗಿ ಅಲ್ಲಿ ಆಗಿರೋ ಕೆಲವು ಅನುಭವಗಳು ನನಗೆ ತುಂಬಾ ಮುಖ್ಯ ಎನ್ನಿಸುತ್ತವೆ. ಅವೆಲ್ಲಾ ಈಗಲೂ ನನಗೆ ನೆನಪಾಗುತ್ತವೆ. ಅದರಲ್ಲಿ ಒಂದು ಘಟನೆ 'ಸೀರೆ'ದು. ನನಗೆ ಆಗ ಸೀರೆ ಉಡೋಕೆ ಬರ್ತಾ ಇರ್ಲಿಲ್ಲ. ನಾನು ಅಲ್ಲದ್ದವ್ರರಲ್ಲಿ ಒಬ್ರ ಸಹಾಯ ಕೇಳಿದ್ದೆ. ಅವ್ರು ಓಕೆ ಅಂತ ರೂಮಿಗೆ ಬಂದ್ರೂ ಕೂಡ ಅವರು ಸೀರೆ ಉಟ್ಕೊಂಡು ಹಾಗೇ ಹೋಗ್ಬಿಟ್ರು.. ನನಗೆ ನಿಜವಾಗಿಯೂ ಆಗ ಬೇಜಾರು ಹಾಗೂ ಶಾಕ್ ಅಗ್ಬಿಟ್ಟಿತ್ತು. 

ಹೇಳಲೇಬಾರದ ದೀಪಿಕಾಗೆ ಮೂಡ್ ತರಿಸುವ ಗುಟ್ಟು ಹೇಳಿದ ರಣವೀರ್ ಸಿಂಗ್; ಅದೀಗ ವೈರಲ್!

ಆದರೆ ಆ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ನಾನು ಮನೆಗೆ ಬಂದವಳೇ ಅಮ್ಮನ ಹಳೆಯ ಹಳೆಯ ಸೀರೆಯನ್ನು ತೆಗೆದುಕೊಂಡು ಉಟ್ಕೊಂಡು, ಮತ್ತೆ ಮತ್ತೆ ಪ್ರಾಕ್ಟೀಸ್ ಮಾಡಿ ಫುಲ್ ಎಕ್ಸ್‌ಪರ್ಟ್ ಆಗ್ಬಿಟ್ಟೆ. ಆಮೇಲೆ ನಾನು ಎಲ್ಲೇ ಹೋಗ್ಲಿ 'ಸಾರಿ ಕ್ವೀನ್' ಅಂತ್ಲೇ ನನ್ನ ಕರಿತಾ ಇದ್ರು. ಅಂತಹ ಬಿರುದು ಪಡೆದೆ, ಅಂದ್ರೆ ಅಷ್ಟು ಚೆಂದವಾಗಿ ಸೀರೆ ಉಟ್ಕೋತೀನಿ ಈಗ. 'ನಮ್ಗೆ ಆದ ಯಾವುದೋ ಕೆಟ್ಟ ಅನುಭವದಿಂದ ನಾವು ಪಾಠ ಕಲಿತು ಇನ್ನೂ ಚೆನ್ನಾಗಿ ಬೆಳಿಬೇಕು ಅನ್ನೋದು ನನ್ನ ಅನಿಸಿಕೆ' ಎಂದಿದ್ದಾರೆ ತನಿಷಾ ಕುಪ್ಪಂಡ. 

click me!