ನೀನು ನನ್ನೊಳಗಿದ್ದೀ ಚಿರು, I Love You: ಅಗಲಿದ ಪತಿಗೆ ಮೇಘನಾ ಪತ್ರ

Suvarna News   | Asianet News
Published : Jun 18, 2020, 12:28 PM ISTUpdated : Jun 19, 2020, 10:23 AM IST
ನೀನು ನನ್ನೊಳಗಿದ್ದೀ ಚಿರು, I Love You: ಅಗಲಿದ ಪತಿಗೆ ಮೇಘನಾ ಪತ್ರ

ಸಾರಾಂಶ

ನಟ ಚಿರಂಜೀವಿ ಸರ್ಜಾ ನೆನಪಿನಲ್ಲಿ ಪತ್ನಿ ಮೇಘನಾ ರಾಜ್‌ ಬರೆದ ಸಾಲುಗಳು ಮನಕಲಕುವಂತಿದೆ. ತಮ್ಮ ಪುಟ್ಟ ಕಂದಮನಲ್ಲಿ ನಿನ್ನನ್ನು ಕಾಣುವ ಹಂಬಲ ಎಂದು ಹೇಳಿದ್ದಾರೆ.....

ಜೂನ್‌ 7ರಂದು ಬಾರದ ಲೋಕಕ್ಕೆ ಪಯಣ ಮಾಡಿದ ಚಿರಂಜೀವಿ ಸರ್ಜಾ ತನ್ನ ಮುಗುಳುನಗೆಯಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ಪತಿಯ ಅಗಲಿಕೆಯಿಂದ ಮೌನಿಯಾಗಿದ್ದ ಮೇಘನಾ ರಾಜ್‌ ಬರೆದ ಸಾಲುಗಳು ಓದುಗರಿಗೂ ಕಣ್ಣೀರು ಬರಿಸುತ್ತದೆ.

ಶಿಳ್ಳೆ ಹೊಡೆದು 'ಸಿಂಗ'ನ ಮನಸ್ಸು ಕದ್ದ ಮೇಘನಾ ರಿಯಲ್ ಲೈಘ್‌ ಇರೋದೇ ಹೀಗೆ!

ಬರೆದಿರುವ ಸಾಲುಗಳು:
'ಚಿರು, ನಿನಗೆ ಏನೇನು ಹೇಳಬೇಕು ಅಂತ ಬಯಸಿದೆನೋ ಅದನ್ನೆಲ್ಲಾ ಅಕ್ಷರಗಳನ್ನು ಮೂಡಿಸಲು ತುಂಬಾ ಪ್ರಯತ್ನ ಪಟ್ಟು ಸೋತು ಹೋದೆ. ನೀನು ನನಗೆ ಏನು ಅನ್ನುವುದನ್ನು ವಿವರಿಸಲು ಯಾವ ಪದಗಳಿಗೂ ಶಕ್ತಿ ಇಲ್ಲ. ನೀನು ನನ್ನ ಗೆಳೆಯ, ನನ್ನ ಪ್ರೀತಿ, ನನ್ನ ಸಂಗಾತಿ, ನನ್ನ ಕಂದ, ನನ್ನ ವಿಶ್ವಾಸ, ನನ್ನ ಗಂಡ - ಇವೆಲ್ಲಕ್ಕಿಂತಲೂ ಹೆಚ್ಚು ನೀನು. ನೀನು ನನ್ನ ಆತ್ಮದ ಒಂದು ಭಾಗ ಚಿರು.

ಪ್ರತೀ ಸಲ ಬಾಗಿಲ ಬಳಿ ನೋಡುವಾಗಲೂ ಒಂದು ಅರ್ಥೈಸಲಾಗದ ನೋವು ನನ್ನನ್ನು ಕಾಡುತ್ತದೆ. ಯಾಕೆಂದರೆ ಅಲ್ಲಿ ನಾನು ಮನೆಗೆ ಬಂದೆ ಅಂತ ಹೇಳಲು ನೀನಿರುವುದಿಲ್ಲ. ಪ್ರತಿದಿನ ಪ್ರತಿಕ್ಷಣ ನಿನ್ನನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ ಎಂದು ನೆನೆದಾಗೆಲ್ಲಾ ಹೃದಯ ಚೂರುಚೂರಾದ ಭಾವ. ನೂರು ಸಾವು ಒಮ್ಮೆಲೇ ನಿಧನಿಧಾನವಾಗಿ ಜರುಗಿದಂತೆ, ನೋವು ಕತ್ತರಿಸಿದಂತೆ ಭಾಸವಾಗುತ್ತದೆ. ಆಮೇಲೆ ಇದ್ದಕ್ಕಿದ್ದಂತೆ ಜಾದೂ ಜರುಗುತ್ತದೆ. ನೀನು ನನ್ನ ಸುತ್ತ ಸುತ್ತುತ್ತಿರುವಂತೆ ಅನ್ನಿಸುತ್ತದೆ. ನನ್ನ ದುರ್ಬಲ ಕ್ಷಣಗಳಲ್ಲಿ ನೀನು ನನ್ನ ಕಾಯುವ ದೇವತೆಯಂತೆ ನನ್ನ ಪಕ್ಕವೇ ಇದ್ದೀಯ.

ನೀನು ನನ್ನನ್ನು ಎಷ್ಟುಪ್ರೀತಿಸಿದೆ ಎಂದರೆ ನನ್ನನ್ನು ಒಬ್ಬಳನ್ನೇ ಯಾವತ್ತೂ ಬಿಟ್ಟುಹೋಗಲೇ ಇಲ್ಲ. ಅಲ್ವಾ? ನಮ್ಮ ಪುಟ್ಟಕಂದ ನೀನು ನನಗೆ ಕೊಟ್ಟಅಮೂಲ್ಯ ಕೊಡುಗೆ. ನಮ್ಮ ಪ್ರೇಮದ ಸಂಕೇತ. ಈ ಸಿಹಿಯಾದ ವಿಸ್ಮಯವನ್ನು ನನಗೆ ದಯಪಾಲಿಸಿದ್ದಕ್ಕೆ ನಾನು ಯಾವತ್ತಿಗೂ ನಿನಗೆ ಋುಣಿ.

ನಿನ್ನನ್ನು ಈ ಜಗತ್ತಿಗೆ ಮತ್ತೆ ವಾಪಸ್‌ ತರುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ನಿನ್ನನ್ನು ಮತ್ತೆ ಹಿಡಿದುಕೊಳ್ಳಲು ಬಯಸುತ್ತಿದ್ದೇನೆ. ಮತ್ತೆ ನಿನ್ನ ನಗುವನ್ನು ನೋಡಲು ಹಂಬಲಿಸುತ್ತಿದ್ದೇನೆ. ಕೋಣೆಯನ್ನು ಬೆಳಗುವಂತೆ ಇರುವ ನಿನ್ನ ನಿಷ್ಕಲ್ಮಶ ಮಂದಹಾಸವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದೇನೆ. ನಾನು ಇಲ್ಲಿ ನಿನಗಾಗಿ ಕಾಯುತ್ತಾ ಇರುತ್ತೇನೆ, ಬಹುಶಃ ಅಲ್ಲಿ ನೀನು ನನಗಾಗಿ ಕಾಯುತ್ತಿ ಎಂದುಕೊಳ್ಳುತ್ತೇನೆ.

ನನ್ನ ಉಸಿರು ಇರುವವರೆಗೂ ನೀನು ಜೀವಂತ.

ನೀನು ನನ್ನೊಳಗಿದ್ದಿ ಚಿರು, ಐ ಲವ್‌ ಯೂ.'

'ಚಿರು, ನೀನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಬಾಗಿಲಲ್ಲಿ  ನಿಂತು 'I am home'ಎಂದು ಹೇಳುತ್ತಿದ್ದೆ. ಈಗ ಅದೇ ಬಾಗಿಲನ್ನು ನೋಡುತ್ತಾ  ಮೌನಿಯಾಗುತ್ತಿರುವೆ . ಆ ದುಃಖ ಹೇಳಿಕೊಳ್ಳಲು ಆಗುತ್ತಿಲ್ಲ.  ನಿನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನೆನೆದರೆ ಪ್ರತಿ ಕ್ಷಣ ಹೃದಯ ಮುರಿದಂತಾಗುತ್ತದೆ.'

    

ಈ ಪತ್ರಕ್ಕೆ ಚಿತ್ರರಂಗದ ಅನೇಕರು ಕಾಮೆಂಟ್ ಮೂಲಕ ಸಾಂತ್ವನ ಹೇಳಿ ಧೈರ್ಯ ತುಂಬುತ್ತಿದ್ದಾರೆ. 

 

ಇನ್‌ಸ್ಟಾಗ್ರಾಂನಲ್ಲಿ ಮೇಘನಾ ಸರ್ಜಾ ಬರೆದಿರುವ ಸಾಲುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಜೂನ್‌ 17ರಂದು ಚಿರಂಜೀವಿ ಸರ್ಜಾ 11ನೇ ದಿನದ ಕಾರ್ಯ ಮಾಡಲಾಗಿತ್ತು. ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?