ಅಭಿಮಾನ ಇರ್ಬೇಕು ಅಂಧಾಭಿಮಾನ ಇರ್ಬಾರದು: ಕಿಚ್ಚ ಸುದೀಪ್‌ ಬಗ್ಗೆ ಅಸಮಾಧಾನ ಬಿಚ್ಚಿಟ್ಟ ಚಿತ್ರಾಲ್

Published : Mar 22, 2024, 12:45 PM IST
ಅಭಿಮಾನ ಇರ್ಬೇಕು ಅಂಧಾಭಿಮಾನ ಇರ್ಬಾರದು: ಕಿಚ್ಚ ಸುದೀಪ್‌ ಬಗ್ಗೆ ಅಸಮಾಧಾನ ಬಿಚ್ಚಿಟ್ಟ ಚಿತ್ರಾಲ್

ಸಾರಾಂಶ

ಬಿಗ್ ಬಾಸ್‌ನಲ್ಲಿ ಆಗಿದ ಅನ್ಯಾಯಕ್ಕೆ ಸುದೀಪ್ ಪ್ರಶ್ನೆ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ ಚಿತ್ರಾಲ್. 

ಕನ್ನಡ ಕಿರುತೆರೆ ಜನಪ್ರಿಯ ನಟಿ ಚಿತ್ರಾಲ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಬಿಗ್ ಬಾಸ್ ಆಫರ್‌ ಬಂದಿದ್ದಲ್ಲದೆ ವೇದಿಕೆ ಮೇಲೆ ರಿಜೆಕ್ಟ್‌ ಮಾಡಿದಕ್ಕೆ ಬೇಸರ ಹೊರ ಹಾಕಿದ್ದಾರೆ. 

' ಸುದೀಪ್ ಸರ್‌ ಅಕ್ಟಿಂಗ್‌ಗಿಂತ ಹೆಚ್ಚಾಗಿ ಅವರ ಇಂಟರ್‌ವ್ಯೂಗಳನ್ನು ನೋಡುತ್ತಿದ್ದೆ. ಅವ್ರು ಕೌಂಟರ್‌ ಕೊಡ್ತಾರೆ ಅಲ್ವಾ ಅದು ಇಷ್ಟ ಆಗುತ್ತಿತ್ತು. ನಾನು ಕೆಲವೊಂದು ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋಗಳಿಗೆ ಕೆಲವರು ಕಾಮೆಂಟ್ ಮಾಡಿದ್ದರು ಲೇಡಿ ಕಿಚ್ಚ ಅಂತ. ಅವರನ್ನು ಕಾಪಿ ಮಾಡುತ್ತಿಲ್ಲ ಆದರೆ ನಾನು ಮಾತನಾಡುವುದೇ ಹಾಗೆ ಆದರೆ ಇಂಟರ್‌ವ್ಯೂಗಳಲ್ಲಿ ಏನು ಮಾತನಾಡುತ್ತಾರೋ ಅದು ಸ್ವಲ್ಪ ರಿಯಾಲಿಟಿಯಲ್ಲೂ ಇದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ನನಗೆ ಇಷ್ಟ. ಪರ್ಸನಲ್ ಆಗಿ ಬಿಗ್ ಬಾಸ್ ಸ್ಟೇಜ್ ಮೇಲೆ ನನಗೆ ಏನು ಅನಿಸಿದ್ದು ಅಂದ್ರೆ ನಾನು ಅವರ ಅಭಿಮಾನಿ ನೀವು ಅಷ್ಟು ದೊಡ್ಡ ಹೀರೋ ಆಗಿ..ನೀವು ಯಾವುದಾದರೂ ದೊಡ್ಡ ಹೀರೋನ ಕೇಳಿದರೆ ನೆಗಲೆಕ್ಟ್‌ ಮಾಡೋಕೆ ಆಗುತ್ತಾ? ಈಗಲೂ ನನಗೆ ಉತ್ತರ ಸಿಕ್ಕಿಲ್ಲ ಯಾಕೆ ರಿಜಿಕ್ಷನ್‌ ಮಾಡೋಕೆ ನನ್ನನ್ನು ಆಯ್ಕೆ ಮಾಡಿದರು' ಎಂದು ಚಿತ್ರಾಲ್ ಖಾಸಗಿ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಚಡ್ಡಿ ಹಾಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು: ಚಿತ್ರಾಲ್ ರಂಗಸ್ವಾಮಿ

'ಅಷ್ಟು ದೊಡ್ಡ ಹೀರೋ ಆಗಿ ಯಾಕೆ ಈ ಹುಡುಗಿನ ಕರೆಸಿದ್ದರು ಯಾಕೆ ರಿಜಿಕ್ಟ್‌ ಮಾಡಿದ್ದರು?.....ವೇದಿಕೆ ಮೇಲೆ ನನ್ನ ವಿಡಿಯೋ ಹೇಗೆ ತೋರಿಸಿದ್ದಾರೆ ಅಂದ್ರೆ ನಾನು ಕಳುಹಿಸಿರುವ ಬಾಡಿ ಬಿಲ್ಡಿಂಗ್ ಫೋಟೋ ಮತ್ತು ವಿಡಿಯೋಗಳನ್ನು ಹಾಕಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಯಾವುದೋ ತೆಗೆದುಕೊಂಡು ಸಿಲ್ಲಿ ಆಗಿ ತೋರಿಸಿದ್ದಾರೆ. ರಾತ್ರಿ 3 ಗಂಟೆಯಲ್ಲಿ ಚಕ್ರಾಸನ ಮತ್ತು ಪುಶಪ್‌ ಮಾಡಿಸಿದ್ದಾರೆ. ಬಿಗ್ ಬಾಸ್‌ಗೆ ಹೋಗಲು ಆಗಿಲ್ಲ ಅಂತ ಹೀಗೆ ಮಾತನಾಡುತ್ತಿರುವುದು ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ ..ಅವ್ರು ಯಾರೀ ರಿಜೆಕ್ಟ್‌ ಮಾಡೋಕೆ? ನಮ್ಮಿಂದ ಅವರಿಗೆ ಕಂಟೆಂಟ್‌ ಸಿಗುತ್ತೆ ಮತ್ತು ಪ್ರೋಗ್ರಾಂ ಆಗುತ್ತೆ' ಎಂದು ಚಿತ್ರಾಲ್ ಹೇಳಿದ್ದಾರೆ.

ಸುದೀಪ್ ಸರ್ ಹೇಳ್ದಂಗೆ ನಡೆಯಲ್ವಾ?; ಕರೆದು ರಿಜೆಕ್ಟ್‌ ಮಾಡಿದ್ದಲ್ಲದೇ ಟೆಲಿಕಾಸ್ಟ್ ಮಾಡಿದ್ದರು: ಚಿತ್ರಾಲ್ ರಂಗಸ್ವಾಮಿ

'ಅಲ್ಲಿಂದ ಸುದೀಪ್ ಸರ್‌ i thought ಫ್ಯಾನ್ ಆಗಿ ಯಾರಿಗೂ ಇರ್ಬಾರ್ದು. ಏಕೆಂದರೆ ಫ್ಯಾನ್ ಆಗಿ ಇದ್ದೀವಿ ಅಂದ್ರೆ ನಮ್ಮ ಪರವಾಗಿ ಮಾತನಾಡುವ ತರ ಇರಬೇಕು. Influencer  ಆಗಿ ನಾನು ಆಲ್ಕೋಹಾಲ್, ಜ್ಯೋತೀಷ್ಯ ವಶೀಕರಣ, ಗೇಮಿಂಗ್ ಮತ್ತು ಟ್ರೇಡಿಂಗ್ ಆಪ್‌ಗಳನ್ನು ನಾನು ಪ್ರಮೋಟ್ ಮಾಡುವುದಿಲ್ಲ ನನಗೆ ಸ್ವಲ್ಪ ethics ಇದೆ. ನನಗೆ ಇಂಟರ್‌ವ್ಯೂಗಳಲ್ಲಿ ಕಂಡಂತ ಸುದೀಪ್ ಅವರು ....ಗೊತ್ತಿಲ್ಲ ಯಾಕೆ ಪ್ರಶ್ನೆ ಮಾಡಿಲ್ಲ ಅಂತ. ಸುದೀಪ್ ಅವರು ಇರುವ ಕರೆ iinjustice ಆಗಲ್ಲ ಅನ್ನೋದು ನನ್ನ ತಲೆಯಲ್ಲಿ ಇತ್ತು ಏಕೆಂದರೆ ಅವರ ಇಂಟರ್‌ವ್ಯೂಗಳನ್ನು ನೋಡಿ ನೋಡಿ ಆದರೆ ಅವರು ಏನೂ ಕೇಳಲಿಲ್ಲ. ನಮ್ಮನ್ನು ಅದಕ್ಕೆ ಕರೆಸಿದ್ದಾರೆ ಎಂದು ಅವರಿಗೂ ಗೊತ್ತಿರುವುದಿಲ್ಲ... ಪ್ರೋಗ್ರಾಂ ಆದ್ಮೇಲೆ ಅವರಿಗೂ ಇಷ್ಟು ಇಂಟರ್‌ವ್ಯೂಗಳು ರೀಚ್ ಆಗಿರುತ್ತದೆ ಅವರು ಪ್ರಶ್ನೆ ಮಾಡಬಹುದಿತ್ತು ಅಥವಾ ಈ ರೀತಿ ಆಗಿರುವುದಕ್ಕೆ ಅವರಿಗೆ ಏನಾದರೂ ಮಾಡಿ ಎಂದು ಹೇಳಬಹುದಿತ್ತು.ಈಗ ಲೈಫ್‌ನಲ್ಲಿ ನಾನು ಏನೆಂದುಕೊಂಡಿದ್ದೀನಿ ಅಂದ್ರೆ ಅಭಿಮಾನ ಇರಬೇಕು ಅಂಧಾಭಿಮಾನ ಯಾರ್ ಮೇಲೂ ಇರ್ಬಾರದು. ಅವರು ಕೂಡ ಮೇಕಪ್ ಹಾಕಿಕೊಂಡು ನಮ್ಮನ್ನು ಎಂಟರ್ಟೈನ್ ಮಾಡುತ್ತಿದ್ದಾರೆ ಅದು ಅವರ ಕೆಲಸ ಅಷ್ಟೆನೇ. ಅವರಿಗೂ ಪೇಮೆಂಟ್‌ ಸಿಗುತ್ತಿದೆ. ಯಾರೂ ಬಿಟ್ಟಿ ಎಂಟರ್ಟೈಮೆಂಟ್ ಮಾಡುತ್ತಿಲ್ಲ' ಎಂದಿದ್ದಾರೆ ಚಿತ್ರಾಲ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?