ಅಪ್ಪನನ್ನು ಅರ್ಥ ಮಾಡಿಕೊಳ್ಳದ ಮಗ ಹಾಗೂ ಮಗನನ್ನು ಅರ್ಥ ಮಾಡಿಕೊಳ್ಳದ ಅಪ್ಪ: ಸಂತೋಷ್

Published : Mar 22, 2024, 11:02 AM IST
ಅಪ್ಪನನ್ನು ಅರ್ಥ ಮಾಡಿಕೊಳ್ಳದ ಮಗ ಹಾಗೂ ಮಗನನ್ನು ಅರ್ಥ ಮಾಡಿಕೊಳ್ಳದ ಅಪ್ಪ: ಸಂತೋಷ್

ಸಾರಾಂಶ

ಹೊಸಪೇಟೆಯಲ್ಲಿ ಯುವ ಪ್ರೀ-ರಿಲೀಸ್ ಕಾರ್ಯಕ್ರಮ. ಮಾರ್ಚ್‌ 22 ಪ್ರೀ- ರಿಲೀಸ್‌...29ಕ್ಕೆ ತೆರೆಗೆ.

ಸಂತೋಷ್‌ ಆನಂದ್‌ರಾಮ್‌ ಹಾಗೂ ಯುವ ರಾಜ್‌ಕುಮಾರ್‌ ಕಾಂಬಿನೇಶನ್‌ನ ‘ಯುವ’ ಸಿನಿಮಾ ಮಾರ್ಚ್‌ 29ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. 350 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಮೆಚ್ಚುಗೆ ಗ‍ಳಿಸಿದೆ. ಇದು ಯುವ ರಾಜ್‌ಕುಮಾರ್‌ ಅವರ ಪ್ರಥಮ ಸಿನಿಮಾ. ಹೊಂಬಾಳೆ ಫಿಲಮ್ಸ್‌ ನಿರ್ಮಾಣ. ಹೀಗಾಗಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್‌ ಹಾಗೂ ಚಿತ್ರದ ನಾಯಕ ಯುವ ರಾಜ್‌ಕುಮಾರ್‌ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಸಂತೋಷ್‌ ಆನಂದ್‌ರಾಮ್‌ ಮಾತನಾಡಿ, ‘ಯುವರತ್ನ ಚಿತ್ರದ ಸಮಯದಲ್ಲಿ ಈ ಚಿತ್ರದ ಕತೆ ಹೊಳೆಯಿತು. ಆಗಿನಿಂದ ಎಂಟು ತಿಂಗಳ ಕಾಲ ಕತೆ ಮೇಲೆ ಕೆಲಸ ಮಾಡಿದೆ. ಕೊನೆಗೆ ಯುವ ರಾಜ್‌ಕುಮಾರ್‌ ಅವರಿಗೆ ಹೇಳಿದೆ. ರೆಗ್ಯೂಲರ್‌ ಹೀರೋ ಬಿಲ್ಡಪ್‌ ಇಲ್ಲದ ಸಿನಿಮಾ. ಅಪ್ಪನನ್ನು ಅರ್ಥ ಮಾಡಿಕೊಳ್ಳದ ಮಗ ಹಾಗೂ ಮಗನನ್ನು ಅರ್ಥ ಮಾಡಿಕೊಳ್ಳದ ಅಪ್ಪ ಈ ಎರಡೂ ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ. ಪಕ್ಕಾ ಫ್ಯಾಮಿಲಿ ಸಿನಿಮಾ’ ಎಂದರು.

ಹೊಂಬಾಳೆ ಫಿಲಂಸ್‌ 'ಯುವ' ಚಿತ್ರದ 'ಅಪ್ಪುಗೆ' ಹಾಡು ಲಾಂಚ್ ಮಾಡಿದ ಪುನೀತ್ ಪುತ್ರಿ ವಂದಿತಾ

ಯುವ ರಾಜ್‌ಕುಮಾರ್‌ ಮಾತನಾಡಿ, ‘ಇದು ಅಪ್ಪ, ಮಗನ ಸಂಘರ್ಷದ ಕತೆ ಹೇಳುವ ಸಿನಿಮಾ. ನಾನು ಇಲ್ಲಿ ಫುಡ್‌ ಡೆಲಿವರಿ ಬಾಯ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತಂದೆ ಮತ್ತು ಮಗನ ನಂಟಿನಲ್ಲಿ ಪ್ರೀತಿ, ಸಂಘರ್ಷ ಎರಡೂ ಇದೆ. ‘ಯುವ’ ಸಿನಿಮಾ ರೆಗ್ಯೂಲರ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಅಲ್ಲ. ಆದರೆ, ಪ್ರೇಕ್ಷಕರು ಏನನ್ನ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಗಳಿಗೆ ಬರುತ್ತಾರೋ ಅದು ಈ ಚಿತ್ರದಲ್ಲಿದೆ’ ಎಂದರು ಹೇಳಿದರು.

ಹೊಸಪೇಟೆಯಲ್ಲಿ ಪ್ರೀ- ರಿಲೀಸ್‌ ಈವೆಂಟ್‌

ಹೊಸಪೇಟೆಯಲ್ಲಿ ಇಂದು(ಮಾರ್ಚ್‌ 22) ಅದ್ದೂರಿಯಾಗಿ ಪ್ರೀ-ರಿಲೀಸ್‌ ಈವೆಂಟ್‌ ನಡೆಯಲಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಹೊಸಪೇಟೆಯಲ್ಲೇ ಕಾರ್ಯಕ್ರಮ ಮಾಡಲಾಗುತ್ತಿದೆ. ‘ಟಗರು’ ಚಿತ್ರದ ನಂತರ ಹೊಸಪೇಟೆಯಲ್ಲಿ ಸಿನಿಮಾ ಈವೆಂಟ್‌ ಮಾಡಿಲ್ಲ. ಹೀಗಾಗಿ ಅಲ್ಲಿ ಈವೆಂಟ್‌ ಆಯೋಜಿಸಲಾಗಿದೆಯಂತೆ. ನಟಿಯರಾದ ನಿಶ್ವಿಕಾ ನಾಯ್ಡು, ಭಾವನಾ ರಾವ್‌ ಡ್ಯಾನ್ಸ್‌ ಕಾರ್ಯಕ್ರಮ ನೀಡಲಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?