ಜನಾಂಗೀಯ ಸಂಘರ್ಷದ ಕಥೆ ಇರುವ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ‘ಇನಾಮ್ದಾರ್’ ಚಿತ್ರಕ್ಕೆ ಭೂಮಿ ಶೆಟ್ಟಿ ನಾಯಕಿ. ಈಗಾಗಲೇ ‘ವಸಂತಾ’ ಎಂಬ ಕಲಾತ್ಮಕ ಚಿತ್ರ, ‘ವನಜ’ ಎಂಬ ವೆಬ್‌ಸೀರೀಸ್‌ಗಳಲ್ಲಿ ಭೂಮಿ ಬ್ಯುಸಿ ಇದ್ದಾರೆ. ಈ ಕಡೆ ಟ್ರೈಬಲ್ ಗ್ಲಾಮರ್ ಪಾತ್ರದ ಮೂಲಕ ಇನಾಮ್ದಾರ್ ಚಿತ್ರದಲ್ಲೂ ಮಿಂಚಲಿದ್ದಾರೆ.
ಪ್ರಿಯಾ ಕೆರ್ವಾಶೆ
ಜನಾಂಗೀಯ ಸಂಘರ್ಷದ ಕಥೆ ಇರುವ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Ajri) ನಿರ್ದೇಶನದ ‘ಇನಾಮ್ದಾರ್’ (Inamdaar) ಚಿತ್ರಕ್ಕೆ ಭೂಮಿ ಶೆಟ್ಟಿ (Bhoomi Shetty) ನಾಯಕಿ. ಈಗಾಗಲೇ ‘ವಸಂತಾ’ ಎಂಬ ಕಲಾತ್ಮಕ ಚಿತ್ರ, ‘ವನಜ’ ಎಂಬ ವೆಬ್‌ಸೀರೀಸ್‌ಗಳಲ್ಲಿ ಭೂಮಿ ಬ್ಯುಸಿ ಇದ್ದಾರೆ. ಈ ಕಡೆ ಟ್ರೈಬಲ್ ಗ್ಲಾಮರ್ ಪಾತ್ರದ ಮೂಲಕ ಇನಾಮ್ದಾರ್ ಚಿತ್ರದಲ್ಲೂ ಮಿಂಚಲಿದ್ದಾರೆ.
undefined
* ಪಾತ್ರದ ಬಗ್ಗೆ?
ಇದು ಜನಾಂಗೀಯ ಸಂಘರ್ಷದ ಕಥೆ. ಇಡೀ ಸಂಘರ್ಷ ನನ್ನ ಪಾತ್ರದ ಸುತ್ತ ಇದ್ದರೂ, ನನ್ನದು ಬೇರೊಂದು ಬಗೆಯ ಹೋರಾಟ, ಹುಡುಕಾಟ. ಇಲ್ಲಿ ನನ್ನ ತಂದೆಯದು ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗ, ತಾಯಿಯದು ಪ್ರತಿಷ್ಠಿತ ಇನಾಮ್ದಾರ್ ವಂಶ. ಮಗುವಿದ್ದಾಗಲೇ ಕಾಡಿಗೆ ಬಂದ ಹುಡುಗಿಗೆ ತಾನು ತನ್ನ ಬುಡಕಟ್ಟಿನ ರಾಣಿಯಾಗುವ ಬಯಕೆ. ಇದರಲ್ಲಿ ನನ್ನದು ಡಿಗ್ಲಾಮ್ ಪಾತ್ರ ಅಲ್ಲ, ನಾನಿಲ್ಲಿ ಕಪ್ಪು ಸುಂದರಿಯಾಗಿ ಕಾಣಿಸಿಕೊಳ್ಳೋದಿಲ್ಲ. ಬದಲಿಗೆ ನನ್ನದು ಟ್ರೈಬಲ್ ಗ್ಲಾಮ್ ರೋಲ್ ಅನ್ನಬಹುದು. ಚಿತ್ರದಲ್ಲೆಲ್ಲೂ ಕಲರಿಸಂ ಇರಲ್ಲ. ಮೇಕಪ್, ಗ್ಲಾಮರ್ ಜೊತೆಗೇ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳಲಿದ್ದೇನೆ.
* ಸಿನಿಮಾದಲ್ಲಿ ಕುಂದಾಪ್ರ ಭಾಷೆ ಮಾತಾಡ್ತೀರಂತೆ?
ಹೌದು. ಆದರೆ ಕುಂದಾಪ್ರ ಭಾಷೆಯಲ್ಲೂ ವೈವಿಧ್ಯತೆ ಇದೆ. ಇಲ್ಲಿನ ಕೆಲವು ಸಮುದಾಯಗಳು ಭಾಷೆಯನ್ನು ಭಿನ್ನವಾಗಿ ಬಳಸುತ್ತಾರೆ. ಊರಿಂದ ಬೇರೆಯಾಗಿ ಕಾಡಿನಲ್ಲಿ ಬದುಕುವ ಬುಡಕಟ್ಟು ಜನರ ಭಾಷೆ ಕೊಂಚ ಬೇರೆ ಇರುತ್ತೆ. ಹಾಗಂತ ಬರೀ ಆ ಭಾಷೆಯಲ್ಲೇ ಮಾತಾಡಿದರೂ ಜನರಿಗೆ ಅರ್ಥ ಮಾಡ್ಕೊಳ್ಳೋದು ಕಷ್ಟ. ಈ ಬಗ್ಗೆ ನಿರ್ದೇಶಕರು ನಿರ್ಧಾರ ತಗೊಳ್ಳಬಹುದು.
ಗೋಡಂಬಿ ಫ್ಯಾಕ್ಟರಿಯಲ್ಲಿ Bhoomi Shettyಗೆ ಕೆಲಸ; ಡೀ-ಗ್ಲಾಮ್ ಲುಕ್ಕಲ್ಲಿ ಕಿನ್ನರಿ ನಟಿ!
* ಪಾತ್ರದ ಹೆಸರೇನು?
ಸದ್ಯಕ್ಕೆ ಭುವಿ ಅಂತಿದೆ.
* ಪ್ರಯೋಗಶೀಲ ಪಾತ್ರಗಳಿಗೆ ಹೆಚ್ಚು ಒತ್ತು ಕೊಡ್ತಿರೋ ಹಾಗಿದೆ?
ನಮ್ಮ ಪರ್ಫಾರ್ಮೆನ್ಸ್‌ಗೆ ಅವಕಾಶ ಇರುವ ಪಾತ್ರ ಸಿಕ್ಕಾಗ ಆಗುವ ಖುಷಿ, ಏನ್ ಚಂದ ಆ್ಯಕ್ಟ್ ಮಾಡಿದ್ದಾಳಲ್ಲಾ ಅಂತ ಜನ ಉದ್ಗರಿಸುವಾಗ ಆಗುವ ಹೆಮ್ಮೆಯನ್ನು ಮಾತಲ್ಲಿ ವಿವರಿಸೋದು ಕಷ್ಟ. ನನಗೆ ಗ್ಲಾಮರ್ ಪಾತ್ರಗಳು ಇಷ್ಟವಿಲ್ಲ ಅಂತಿಲ್ಲ. ಆದರೆ ನನ್ನ ಪ್ರತಿಭೆ ತೋರಿಸಲು ಅವಕಾಶ ಇರುವ ಪಾತ್ರವಾದರೆ ಭಾರೀ ಖುಷಿ.
* ಸದ್ಯ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರೋ ಹಾಗಿದೆ?
ಹೌದು. ‘ವಾಸಂತಿ’ ಅಂತ ಕಲಾತ್ಮಕ ಚಿತ್ರದಲ್ಲಿ ಮಾಡ್ತಿದ್ದೀನಿ. ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಹುಡುಗಿ, ಅವಳ ಬದುಕಿನ ಏರುಪೇರುಗಳು ಈ ಸಿನಿಮಾದಲ್ಲಿದೆ. ರಾಘವೇಂದ್ರ ಶಿರಿಯಾರ್ ನಿರ್ದೇಶಕರು. ಜೊತೆಗೆ ‘ಟಾಕೀಸ್’ ಅಂತ ಹೊಸ ಆ್ಯಪ್‌ಗೆ ‘ವನಜ’ ಅನ್ನುವ ವೆಬ್ ಸೀರೀಸ್ ಮಾಡುತ್ತಿದ್ದೇನೆ. ಆರು ಎಪಿಸೋಡ್‌ಗಳ ವೆಬ್ ಸೀರೀಸ್. ‘ಹೊಟೇಲ್ ವನಜ, ಮಾಂಸಹಾರಿ’ ಓನರ್ ಅವಳು. ಸ್ವಾಭಿಮಾನಿ, ಗಟ್ಟಿಗಿತ್ತಿ ಹೆಣ್ಮಗಳು. ಈ ಎರಡೂ ಸ್ತ್ರೀ ಪ್ರಧಾನ ಚಿತ್ರಗಳೇ.
Ladakh ಬೈಕ್ ಟ್ರಿಪ್, ಕಿರುತೆರೆಯಿಂದ ಬ್ರೇಕ್; ನಟಿ ಭೂಮಿ ಶೆಟ್ಟಿ ಲೈಫಲ್ಲಿ ಏನಾಗುತ್ತಿದೆ!
* ಸದ್ಯ ಯಾವ ಸಿನಿಮಾ ನೋಡಿದ್ರಿ?
ಗರುಡ ಗಮನ ವೃಷಭ ವಾಹನ, ರತ್ನನ್ ಪ್ರಪಂಚ ಇತ್ಯಾದಿ ಸುಮಾರು ಸಿನಿಮಾ. ರಾಜ್ ಶೆಟ್ಟಿಅವರ ಲುಕ್, ಮ್ಯಾನರಿಸಂ, ಡಾಲಿ ಅವರ ನಗು, ಅವರು ಸ್ಕ್ರಿಪ್ಟ್ ಆರಿಸಿಕೊಳ್ಳೋ ರೀತಿ ಎಲ್ಲ ಬಹಳ ಇಷ್ಟಆಯ್ತು.