Prajwal Devaraj: ಡೈನಾಮಿಕ್ ಪ್ರಿನ್ಸ್ ಹೊಸ ಚಿತ್ರಕ್ಕೆ ಪನ್ನಗ ಭರಣ ಆಕ್ಷನ್ ಕಟ್

By Suvarna NewsFirst Published Jan 18, 2022, 10:41 PM IST
Highlights

ಸ್ಯಾಂಡಲ್‌ವುಡ್‌ನ ಬೇಡಿಕೆಯ ಹೀರೋಗಳಲ್ಲಿ ಪ್ರಜ್ವಲ್ ದೇವರಾಜ್ ಕೂಡ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಹೊಸದೊಂದು ಹೆಸರಿಡದ ಹೊಸ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಚಾಲನೆ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ (Sandalwood) ಬೇಡಿಕೆಯ ಹೀರೋಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj)  ಕೂಡ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಅವರ ನಟನೆಯ 'ಅರ್ಜುನ್ ಗೌಡ' (Arjun Gowda) ಸಿನಿಮಾ ತೆರೆಕಂಡಿದೆ. ಹಾಗೂ ಅವರ ಅಭಿನಯದ  'ಗಣ' (Gana) ಚಿತ್ರಕ್ಕೂ ಇತ್ತೀಚೆಗೆ ಮುಹೂರ್ತ (Muhurtha) ನೇರವೇರಿದೆ. ಈ ಮಧ್ಯೆ ಹೊಸದೊಂದು ಹೆಸರಿಡದ ಹೊಸ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಚಾಲನೆ ನೀಡಿದ್ದಾರೆ. ಇಂದು ನಗರದ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಸಮಾರಂಭವು ಸರಳವಾಗಿ ನಡೆದಿದೆ. 

ಈ ಚಿತ್ರವನ್ನು ಫಿಲ್ಮಿ ಫೆಲೋ ಸ್ಟುಡಿಯೋಸ್ ಅರ್ಪಿಸುತ್ತಿದ್ದು, ಆಲ್ ಓಶನ್ ಮಿಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ್ಸ್​ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಬಾಲಿವುಡ್‌ನ (Bollywood) ಅಧಿರ್‌ ಭಟ್ (Adhir Bhatt) ಬರೆದಿರುವ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಕಥೆಗೆ ಪನ್ನಗಭರಣ (Pannaga Bharana) ಮೊದಲ ಬಾರಿಗೆ ಪ್ರಜ್ವಲ್‌ ದೇವರಾಜ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇನ್ನೂ ಫೈನಲ್​ ಆಗಿಲ್ಲ. ಸದ್ಯ ಪ್ರಜ್ವಲ್ 'ಮಾಫಿಯಾ', 'ಗಣ' ಚಿತ್ರಗಳಲ್ಲಿ ತೊಡಗಿಕೊಂಡಿದ್ದು, ಇವುಗಳನ್ನು ಮುಗಿಸಿದ ನಂತರ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ.

Prajwal Devaraj: ಡೈನಾಮಿಕ್ ಪ್ರಿನ್ಸ್ ನಟನೆಯ 'ಗಣ' ಚಿತ್ರಕ್ಕೆ ಮುಹೂರ್ತ

ವಾಸುಕಿ ವೈಭವ್ (Vasuki Vaibhav) ಸಂಗೀತ ಸಂಯೋಜನೆ, ವಿರಾಜ್‌ಸಿಂಗ್ ಕ್ಯಾಮರಾ ಕೈಚಳಕ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರವೀಣ್‌ ಯಾದವ್ ಅವರು ನಿರ್ವಹಿಸುತ್ತಿದ್ದಾರೆ. ಉಳಿದಂತೆ ತಾರಾಗಣ, ತಂತ್ರಜ್ಞರ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಚಿತ್ರತಂಡವು ಹೇಳಿಕೊಂಡಿದೆ. ಒಂದು ವರ್ಷದ ಹಿಂದೆಯೇ ಪನ್ನಗಭರಣ ಜೊತೆ ಚಿತ್ರ ಮಾಡಬೇಕೆಂದು ಚರ್ಚಿಸಿದ್ದೆ, ಆದರೆ ಕೋವಿಡ್ (Covid19) ಇದ್ದ ಕಾರಣ ಪ್ರಾಜೆಕ್ಟ್ ವಿಳಂಬವಾಗಿತ್ತು ಎಂದು ಪ್ರಜ್ವಲ್ ಹೇಳಿದ್ದಾರೆ. ಸದ್ಯ ಪನ್ನಗಭರಣ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಮೇಘನಾ ರಾಜ್ (Meghana Raj) ಹೊಸ ಚಿತ್ರವನ್ನು ಪನ್ನಗ ನಿರ್ಮಾಣ ಮಾಡುತ್ತಿದ್ದು, ಸಿನಿಮಾದಲ್ಲಿ ಅವರು ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.



ಇನ್ನು ಪ್ರಜ್ವಲ್ ದೇವರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ 'ಗಣ' ಚಿತ್ರದ ಮುಹೂರ್ತ ನೇರವೇರಿದ್ದು, ಈ ಚಿತ್ರವನ್ನು ಹರಿ ಪ್ರಸಾದ್‌ ಜಕ್ಕ (Hari Prasad Jakka) ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಹರಿಪ್ರಸಾದ್ ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ. ಆಕ್ಷನ್‌ ಥ್ರಿಲ್ಲರ್‌ ಕತೆಯನ್ನು ಹೊಂದಿರುವ ಈ ಚಿತ್ರವನ್ನು ಚರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ (Anoop Seelin) ಸಂಗೀತ, ಜೈ ಆನಂದ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ‌‌. ಪ್ರಜ್ವಲ್ ಅವರಿಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ಸಾರಾ ಹರೀಶ್ (Sarah Harish) (ಭರತ ಬಾಹುಬಲಿ ಖ್ಯಾತಿ) ನಟಿಸುತ್ತಿದ್ದಾರೆ. 

Mafia: ಪ್ರಜ್ವಲ್ ದೇವರಾಜ್-ಅದಿತಿ ಪ್ರಭುದೇವ ಹೊಸ ಚಿತ್ರಕ್ಕೆ ಮುಹೂರ್ತ

ಈ ಹಿಂದೆ ಪ್ರಜ್ವಲ್ 'ಮಾಫಿಯಾ' (Mafia) ಸಿನಿಮಾಕ್ಕೆ ಚಾಲನೆ ಕೊಟ್ಟಿದ್ದರು. 'ಮಮ್ಮಿ' ಖ್ಯಾತಿಯ ಲೋಹಿತ್ (Lohith) ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಬೆಂಗಳೂರು ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 40-50% ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ಇದರ ಜೊತೆಗೆ 'ವೀರಂ' (Veeram) ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ. ಪ್ರಜ್ವಲ್‌ಗೆ ನಾಯಕಿಯಾಗಿ ರಚಿತಾ ರಾಮ್ (Rachita Ram) ಕಾಣಿಸಿಕೊಂಡಿದ್ದಾರೆ. 'ಖದರ್' ಕುಮಾರ್ ಚಿತ್ರದ ನಿರ್ದೇಶಕರು. ಹಾಗೂ ರಾಮ್ ನಾರಾಯಣ್ ನಿರ್ದೇಶನದಲ್ಲಿ 'ಅಬ್ಬರ' (Abbara) ಸಿನಿಮಾದಲ್ಲೂ ಪ್ರಜ್ವಲ್ ನಟಿಸಿದ್ದಾರೆ. ಇವೆರಡೂ ಸಿನಿಮಾಗಳ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿ, ರಿಲೀಸ್‌ಗೆ ಸಿದ್ಧತೆ ನಡೆಯುತ್ತಿದೆ.

click me!