ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್

By Web DeskFirst Published Mar 8, 2019, 12:12 PM IST
Highlights

‘Women have an unique power of beingable to look at the world's problems and discover solutions that transform lives and make the world a better place’
 

ಕನ್ನಡ ಅಥವಾ ತಮಿಳು ಅಂತಲ್ಲ ಪ್ರತಿ ಚಿತ್ರೋದ್ಯಮವೂ ಒಂದೇ. ಅದರಲ್ಲೇನು ವ್ಯತ್ಯಾಸ ಇಲ್ಲ. ನಟಿಯರಿಗೆ ಇಲ್ಲಿ ಮಾತ್ರ ಸುರಕ್ಷಿತ, ಅಲ್ಲಿ ಸುರಕ್ಷಿತವೇ ಇಲ್ಲ ಅಂತಲ್ಲ. ನಾವು ಎಲ್ಲೇ ಇದ್ದರೂ, ಯಾವುದನ್ನು ಹೇಗೆ ಸ್ವೀಕರಿಸುತ್ತೇವೆ, ಯಾವುದಕ್ಕೆ ಹೇಗೆ ಆಸಕ್ತಿ ವಹಿಸುತ್ತೇವೆ ಎನ್ನುವುದರ ಮೇಲೆ ಸುರಕ್ಷಿತೆ ಎನ್ನುವ ಪ್ರಶ್ನೆ ಉದ್ಭವಾಗುತ್ತೆ.

ನಾನು ಚಿತ್ರೋದ್ಯಮಕ್ಕೆ ಬಂದು ಹಲವು ವರ್ಷಗಳೇ ಕಳೆದು ಹೋದವು. ಈ ತನಕ ಅಂತಹ ಅನುಭವ ಆಗಿಲ್ಲ. ಪ್ರತಿ ಸಿನಿಮಾದಲ್ಲೂ ಒಳ್ಳೆಯ ಸ್ನೇಹಿತರು, ಸ್ನೇಹಿತೆಯರು ಸಿಕ್ಕಿದ್ದಾರೆ. ಇದು ಸಾಧ್ಯವಾಗಿದ್ದು ಒಳ್ಳೆಯ ವಾತಾವರಣ ಇದ್ದ ಕಾರಣಕ್ಕೆ. ಪ್ರತಿ ಕ್ಷೇತ್ರಗಳಲ್ಲಿ ಕೆಟ್ಟವರು, ಒಳ್ಳೆಯವರು ಇದ್ದ ಹಾಗೆಯೇ ಇಲ್ಲೂ ಇದ್ದಾರೆ. ಕೆಟ್ಟವರಿಗೆ ಒಬ್ಬರ ಸಲುಗೆಗಳೇ ನೆಪವಾಗುತ್ತವೆ. ಅಂತಹ ಸಂದರ್ಭಗಳನ್ನು ನಾವು ಧೈರ್ಯದಿಂದ ಎದುರಿಸಬೇಕು. ಸ್ಥಳದಲ್ಲೇ ಉತ್ತರ ನೀಡಬೇಕು. ಆಗ ಮಾತ್ರ ಕೆಟ್ಟ ಅನುಭವಗಳಿಂದ ದೂರ ಉಳಿಯಲು ಸಾಧ್ಯ.

click me!