
ನಾನು ಚಿತ್ರೋದ್ಯಮಕ್ಕೆ ಬಂದು 11 ವರ್ಷ. ನಟಿಯರಿಗೆ ಇಲ್ಲಿ ಸಿಗುವ ಗೌರವ ಮತ್ತೆಲ್ಲೂ ಸಿಗಲ್ಲ. ಹೊಸಬರಾಗಲಿ, ಹಳಬರಾಗಲಿ ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಾರೆ. ನನಗಂತೂ ಪ್ರತಿ ಸಿನಿಮಾದ ಚಿತ್ರೀಕರಣ ಒಂದು ಫ್ಯಾಮಿಲಿ ವಾತಾವರಣದ ಹಾಗೆಯೇ ಕಂಡಿದೆ. ಮೇಲಾಗಿ ಇಲ್ಲಿನ ನಟ-ನಟಿಯರಿಗೆ ಅಹಂಕಾರಗಳಿಲ್ಲ. ಡೌ ಟು ಅರ್ಥ ಅಂತಾರಲ್ಲ ಹಾಗೆ ಪ್ರತಿಯೊಬ್ಬರು ತಳಸ್ಥರದಿಂದಲೇ ಬಂದವರು. ಅವರಿಗೂ ಇಲ್ಲಿನ ವಾಸ್ತವಗಳು ಗೊತ್ತು. ಹಾಗಾಗಿ ಹಿರಿಯರೇ ಇರಲಿ, ಕಿರಿಯರೇ ಇರಲಿ ಎಲ್ಲರಿಗೂ ಸಮಾನ ಗೌರವ ನೀಡುವಂತಹ ಚಿತ್ರೋದ್ಯಮ ಅಂದ್ರೆ ಕನ್ನಡ ಚಿತ್ರೋದ್ಯಮ.
ಹಾಗಂತ ಇಲ್ಲೇನು ಆಗಿಲ್ವಾ? ಯಾರೋ ಕೆಲವು ವ್ಯಕ್ತಿಗಳು ಕೆಟ್ಟದಾಗಿ ನಡೆದುಕೊಂಡಾಗ ಸುದ್ದಿ ಆಗೋದು ಮಾಮೂಲು. ಆದ್ರೆ ವಾಸ್ತವ ಬೇರೆಯದೇ ಇರುತ್ತೆ. ಆ ರೀತಿ ಕೆಟ್ಟದಾಗಿ ನಡೆದುಕೊಂಡವರು ಇಲ್ಲಿ ಬಹುಕಾಲ ಉಳಿಯುವುದು ಇಲ್ಲ ಬಿಡಿ, ಕೊನೆಗೂ ಇಲ್ಲಿ ಉಳಿಯುವುದು ಒಳ್ಳೆಯತನ. ಅದು ನಟಿಯರ ಪಾಲಿಗೆ ಇಲ್ಲಿ ವರವಾಗಿದೆ. ಭಯದಿಂದ ದೂರ ಉಳಿದು ನಟಿಸುವಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.