ಕೆಟ್ಟವರು ಎಲ್ಲಾ ಕಡೆ ಇದ್ದಾರೆ: ಶಿಲ್ಪಾ ಮಂಜುನಾಥ್

By Web DeskFirst Published Mar 8, 2019, 11:06 AM IST
Highlights

‘Every man needs a women when his life is a mess, because just like the game of chess - the queen protects the king’ 

ಚಿತ್ರೋದ್ಯಮ ಮಾತ್ರವಲ್ಲ, ಯಾವುದೇ ಕ್ಷೇತ್ರವಾದರೂ ಸರಿ ನಮಗದು ಸೇಫ್ ಅಥವಾ ನಾನ್‌ಸೇಫ್ ಅಂತ ಎನಿಸೋದು ನಮ್ಮ ಮನಸ್ಥಿತಿಯ ಮೇಲೆಯೇ. ನಮಗೆ ಅಲ್ಲಿ ಬೇಸರ ತರಿಸುವಂತಹ ಘಟನೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಮೇಲೆಯೇ. ಕನ್ನಡದ ಜತೆಗೆ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ನಾನು ಕೆಲಸ ಮಾಡಿದ್ದೇನೆ. ಹೆಚ್ಚು ಕಡಿಮೆ ಮೂರ್ನಾಲ್ಕು ವರ್ಷದಿಂದ ಇಲ್ಲಿದ್ದೇನೆ. ಈ ಮೂರು ಭಾಷೆಯ ಚಿತ್ರೋದ್ಯಮವೂ ನನ್ನ ದೃಷ್ಟಿಯಲ್ಲಿ ಸೇಫ್.ಯಾವತ್ತಿಗೂ ಎಲ್ಲಿಯೂ ನನಗಿದು ಸುರಕ್ಷಿತವಲ್ಲ, ಇಲ್ಲಿಂದ ಹೊರಟು ಹೋಗೋಣ ಅಂತ ಎನಿಸಿಲ್ಲ.

ಎಲ್ಲಾ ಕ್ಷೇತ್ರಗಳಲ್ಲೂ ಕಿಡಿಗೇಡಿಗಳು, ಕೆಟ್ಟವರು ಇದ್ದ ಹಾಗೆಯೇ ಇಲ್ಲೂ ಇದ್ದಾರೆ. ಅವರ‌್ಯಾರು ನನ್ನ ಉಸಾಬರಿಗೆ ಬಂದಿಲ್ಲ. ವ್ಯಂಗ್ಯವಾಗಿ ಮಾತನಾಡುವುದು, ಕೆಟ್ಟ ದೃಷ್ಟಿಯಲ್ಲಿ ನೋಡುವುದು, ಇಲ್ಲವೇ ಅನಗತ್ಯವಾಗಿ ಕಿರಿಕಿರಿ ಮಾಡುವಂತಹ ಅನುಭವ ನನಗೂ ಆಗಿದೆ. ಆದರೆ, ಸರಿ ಅಲ್ಲ ಎನಿಸಿದ್ದನ್ನು ನಾನು ಸ್ಥಳದಲ್ಲೇ ಹೇಳಿದ್ದೇನೆ. ಕೋಪದಿಂದಲೂ ಮಾತನಾಡಿದ್ದು ಇದೆ. ಆನಂತರ ಅವರ ದೃಷ್ಟಿಯೂ ಬದಲಾಗಿದೆ. ಅಲ್ಲಿಗಿಂತ ನನಗೆ ಕನ್ನಡ ಚಿತ್ರೋದ್ಯಮ ಒಂದು ಕುಟುಂಬದ ಅನುಭವ ನೀಡುತ್ತದೆ. ಚಿತ್ರೀಕರಣ ಅಂತ ಹೊರ ಊರುಗಳಿಗೆ ಹೋದರೆ, ನಾವೆಲ್ಲ ಒಂದೇ ಫ್ಯಾಮಿಲಿಯವರು ಎನ್ನುವಷ್ಟು ಅನ್ಯೋನ್ಯವಾಗಿ ಇದ್ದೇವೆ. ಇಂತಹ ವಾತಾವರಣ ಮೂಡುವುದು ನಮ್ಮ ಇರುವಿಕೆಯ ಮೇಲೆ.

click me!