Ashika Ranganath: ಮದಗಜ ಚಿತ್ರದ ಪಲ್ಲವಿ ಪಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ

By Suvarna News  |  First Published Dec 10, 2021, 5:16 PM IST

'ಮದಗಜ' ಚಿತ್ರದಲ್ಲಿ ಆಶಿಕಾ ರಂಗನಾಥ್‌ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾವು ನಿಭಾಯಿಸಿದ್ದ ಪಾತ್ರ ಅಷ್ಟು ಸುಲಭವಾಗಿ ಇರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾದ ಮಾಹಿತಿಯನ್ನು ಚುಟುಚುಟು ಹುಡುಗಿ ಹಂಚಿಕೊಂಡಿದ್ದಾರೆ.


ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ 'ಮದಗಜ' (Madhagaja) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಪಟಾಕಿ ಪೋರಿ ಆಶಿಕಾ ರಂಗನಾಥ್‌ (Ashika Ranganath) ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ 'ಮದಗಜ' ಚಿತ್ರದಲ್ಲಿ ಆಶಿಕಾ ನಿಭಾಯಿಸಿದ್ದ ಪಾತ್ರ ಅಷ್ಟು ಸುಲಭವಾಗಿ ಇರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾದ ಮಾಹಿತಿಯನ್ನು ಚುಟುಚುಟು ಹುಡುಗಿ ಹಂಚಿಕೊಂಡಿದ್ದಾರೆ.

'ಮದಗಜ' ಸಿನಿಮಾಗಾಗಿ ತಾವು ಪಟ್ಟಿರುವ ಶ್ರಮದ ಕುರಿತಾಗಿ ಆಶಿಕಾ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ 'ಪಲ್ಲವಿ ಪಾತ್ರವನ್ನು ನಿಭಾಯಿಸಿದ್ದ ಅನುಭವದ ಕೆಲ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪಲ್ಲವಿ ಪಾತ್ರ ಅಂದುಕೊಂಡಷ್ಟು ಸುಲಭವಾಗಿ ಇರಲಿಲ್ಲ. ಈ ಪಾತ್ರಕ್ಕಾಗಿ ಸಾಕಷ್ಟು ಪ್ರಯತ್ನಗಳು, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಪ್ರೀತಿ ಎಲ್ಲವೂ ಬೇಕಾಯಿತ್ತು. ಇಂದು ನಾನು ಕರ್ನಾಟಕದಾದ್ಯಂತ ಎಲ್ಲರ ಪ್ರೀತಿಯನ್ನು ಸ್ವೀಕರಿಸುತ್ತಿರುವುದು ಸಂತೋಷಕರ ವಿಷಯವಾಗಿದೆ. ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಧನ್ಯವಾದಗಳು. ಲವ್ ಯು ಡಾರ್ಲಿಂಗ್ಸ್' ಎಂದು ಕ್ಯಾಪ್ಷನ್ ಬರೆದು 'ಮದಗಜ' ಸಿನಿಮಾದ ಶೂಟಿಂಗ್​ ವೇಳೆ ತಾವು ಗದ್ದೆಯಲ್ಲಿ ಟ್ರ್ಯಾಕ್ಟರ್ ಹೊಡಿಸುವ ವಿಡಿಯೋ, ಕ್ಲಿಕ್ಕಿಸಿಕೊಂಡ ಪೋಟೋಗಳು ಮತ್ತು ತಮ್ಮ ಬೆನ್ನಿನ ಸ್ಕಿನ್​ ಟ್ಯಾನ್​ ಆದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 

Tap to resize

Latest Videos

'ಎಲ್ಲೋದ್ರೂ ಸಿಗರೇಟ್ ಹೊಡೆದಿದ್ದೀರಾ ಅಂತ ಕೇಳ್ತಾರೆ'

'ಮದಜಗ' ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಬರೋಬ್ಬರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್‌ ಅಫೀಸ್‌ನಲ್ಲೂ ರೇಕಾರ್ಡ್ ಮಾಡಿದೆ. 'ಮದಗಜ' ಶ್ರೀಮುರಳಿ ಕೆರಿಯರ್‌ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದ್ದು, ಒಂದು ಕಡೆ ಆಕ್ಷನ್ ಧಮಾಕ, ಮತ್ತೊಂದು ಕಡೆ ತಾಯಿ ಸೆಂಟಿಮೆಂಟ್ ಕಥೆಯನ್ನೊಳಗೊಂಡಿದೆ. ರತ್ನ ಪಾತ್ರದಲ್ಲಿ ತೆಲುಗಿನ ದೇವಯಾನಿ (Devayani), ಬಸವನಾಗಿ ರಂಗಾಯಣ ರಘು (Rangayana Raghu) ಹಾಗೂ ತಾಂಡವನ ಪಾತ್ರದಲ್ಲಿ ಗರುಡ ರಾಮ್‌ (Garuda Ram) ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಮುಖ್ಯವಾಗಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu) ಈ ಚಿತ್ರದ ಮುಖ್ಯ ಖಳನಾಯಕನಾಗಿದ್ದು ಅವರ ರಾ ಲುಕ್ ನೋಡುಗರ ಮೈಜುಮ್ಮೆನಿಸುತ್ತದೆ. 



ಇನ್ನು ಆಶಿಕಾ ರಂಗನಾಥ್‌ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದು, ಎ ಸರ್ಕುಣಂ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ಜೊತೆಗೆ ಅಥರ್ವ ಮುರಳಿ (Atharvaa Murali) ನಾಯಕನಾಗಿ ನಟಿಸಿದ್ದಾರೆ. ಅಥರ್ವ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ. ತಮಿಳು ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಪ್ರತಿಭೆ. ಕಬಡ್ಡಿ ಆಟದ ಹಿನ್ನೆಲೆಯ ಕಥೆ ಹೊಂದಿರುವ ಚಿತ್ರವಿದು. ಹಾಗೂ ಆಶಿಕಾ ಅಭಿನಯದ 'ಅವತಾರ್ ಪುರುಷ' (Avatara Purusha) ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಅಧ್ಯಕ್ಷ ಶರಣ್ (Sharan) ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿಂಪಲ್ ಸುನಿ (Simple Suni) ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೇ ಪವನ್ ಒಡೆಯರ್ (Pavan Wadeyar) ನಿರ್ದೇಶನದ ಬಹುನಿರೀಕ್ಷಿತ 'ರೇಮೊ' (Raymo) ಚಿತ್ರದಲ್ಲಿಯೂ ಇಶಾನ್ (Ishan) ಜೊತೆ ಆಶಿಕಾ ರಂಗನಾಥ್ (Ashika Ranganath) ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಅಭಿನಯಿಸಿದ್ದಾರೆ. 

Raymo Teaser: ಇಶಾನ್-ಆಶಿಕಾ ರಂಗನಾಥ್‌ ಜೋಡಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್

ನನಗೆ ಸಕ್ಸಸ್ ಸೂತ್ರ ಗೊತ್ತಿಲ್ಲ. ಯಾಕೆಂದರೆ ಒಬೊಬ್ಬರು ಒಂದೊಂದು ವಿಚಾರದಲ್ಲಿ ವರ್ಕ್ ಆಗಿ ಯಶಸ್ಸು ಪಡೆದುಕೊಂಡಿರುತ್ತಾರೆ. ಇಂಥದ್ದೇ ಸೂತ್ರ ಅಂತ ಹೇಳಲಾಗದು. ಆಸಕ್ತಿ, ಶ್ರದ್ದೆಯಿಂದ ಕೆಲಸ ಮಾಡಬೇಕು. ನಂಬಿಕೆ ಮತ್ತು ವಿಶ್ವಾಸ ಮುಖ್ಯ. ನಾವು ಒಪ್ಪಿಕೊಳ್ಳುವ ಚಿತ್ರದ ಮೇಲೆ ನಂಬಿಕೆ ಇಡಬೇಕು. ನಮ್ಮ ಪಾತ್ರ, ಕತೆಯನ್ನು ರೂಪಿಸುವ ನಿರ್ದೇಶಕನ ಮೇಲೆ ವಿಶ್ವಾಸ ಇಡಬೇಕು. ಇದು ನಾನು ಅಂದುಕೊಂಡಿರುವ ಸಕ್ಸಸ್ ಸೂತ್ರ. ಈ ಎಲ್ಲದರ ನಂತರ ಅದೃಷ್ಟ ಅನ್ನೋದು ಬೇಕಿರುತ್ತದೆ. ಹಾಗೂ ನಿರ್ದೇಶಕ ಕಲ್ಪಿಸುವ ಪ್ರತಿಯೊಂದು ಪಾತ್ರಕ್ಕೂ ನಟಿಯಾಗಿ ಕೊನೆಯ ತನಕ ಜೀವ ತುಂಬಬೇಕು ಎಂಬುದು ನನ್ನ ಕನಸು. ಪ್ರತಿ ಚಿತ್ರದಲ್ಲೂ ನಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು, ನಾನು ಮಾಡುವ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕು. ಇದು ನಾನು ಪ್ರತಿ ದಿನ ಕಾಣುವ ಕನಸು ಎಂದು ಈ ಹಿಂದೆ ಆಶಿಕಾ ರಂಗನಾಥ್ ಹೇಳಿದ್ದಾರೆ.
 

click me!