Omicron Effect ಏನು ಮಾಡಬೇಕು ಮುಖ್ಯಮಂತ್ರಿಗಳೇ? ಎಂದು ಕಠಿಣ ಪ್ರಶ್ನೆ ಮುಂದಿಟ್ಟ ನಿರ್ದೇಶಕ ಮಂಸೋರೆ!

By Suvarna News  |  First Published Dec 10, 2021, 12:39 PM IST

ರೂಪಾಂತರಗೊಂಡ ವೈರಸ್‌ನಿಂದ ಮತ್ತೆ ಮಲ್ಟಿಫ್ಲೆಕ್ಸ್‌ನಲ್ಲಿ ರೂಲ್ಸ್‌. ಮಕ್ಕಳಿಗೆ ಪ್ರವೇಶವಿಲ್ಲ ಅಂದ್ರೆ UA ಸಿನಿಮಾದವರು ಏನು ಮಾಡಬೇಕು? 


ರಾಷ್ಟ್ರ ಪ್ರಶಸ್ತಿ ನಿರ್ದೇಶಕ ಮಂಸೋರೆ (Mansore) ಅವರು ಸೋಷಿಯಲ್ ಮೀಡಿಯಾ (Social Media) ಮೂಲಕ ಕರ್ನಾಟಕ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ಕನ್ನಡದ ಖಾಸಗಿ ವೆಬ್‌ವೊಂದರಲ್ಲಿ ಮಾತನಾಡಿರುವ ನಿರ್ದೇಶಕರು WHO ಅದೇಶಿಸದೇ ಇವರೇ ವೈರಸ್‌ ಸಮಸ್ಯೆ ಆಗುತ್ತೆ ಅಂತ ಹೇಳಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಏನೇ ನಡೆದರೂ ಅತಿ ಹೆಚ್ಚು ಪರಿಣಾಮ ಬೀರುತ್ತಿರುವುದು ಚಿತ್ರರಂಗಕ್ಕೆ ಎಂಬುವುದು ಬೇಸರದ ಸಂಗತಿ. 

ಮಂಸೋರೆ ಪೋಸ್ಟ್:

Tap to resize

Latest Videos

undefined

'ಮಲ್ಟಿಪ್ಲೆಕ್ಸ್‌ಗಳಲ್ಲಿ (Multiplex) ಮಕ್ಕಳಿಗೆ ಪ್ರವೇಶವಿಲ್ಲ. ಸಣ್ಣ ಬಡ್ಜೆಟ್ಟಿನ ಸಿನೆಮಾಗಳಿಗೆ ಸಿಂಗಲ್ ಸ್ಕ್ರೀನ್ (Single Screen) ಥಿಯೇಟರುಗಳು ಸಿಗೋದಿಲ್ಲ. ಅಂತಹ ನಿರ್ಮಾಪಕರು ಏನು ಮಾಡಬೇಕು ಕರ್ನಾಟಕ ಮುಖ್ಯಮಂತ್ರಿಗಳೇ? ಹೊಸ ರೂಪಾಂತರ ತಳಿ ಅಷ್ಟು ಅನಾಹುತಕಾರಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಮೇಲೂ ಸಿನಿಮಾ ಉದ್ಯಮವನ್ನು ಮುಳುಗಿಸಲು ಹೊರಟಿದ್ದೀರಲ್ಲಾ, ಇದು ಯಾವ ನ್ಯಾಯ? # ತುಘಲಕ್‌ ದರ್ಬಾರ್' ಎಂದು ಮಂಸೋರೆ ಬರೆದುಕೊಂಡಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಷ್ಟ್ರ ಪ್ರಶಸ್ತಿ ಪುರಸ್ಕೃತ' ನಿರ್ದೇಶಕ ಮಂಸೋರೆ!

'ಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡ್ತಾರೆ ನೈಟ್ ಕರ್ಫ್ಯೂ (Night Cerfew) ಇಲ್ಲ ಶಾಲೆ ಮುಚ್ಚುವ ಗಂಭೀರ ಪರಿಸ್ಥಿತಿ ಸದ್ಯಕ್ಕಿಲ್ಲ ಅಂತಾ. ಮಕ್ಳು ಸ್ಕೂಲಿಗೆ (School) ಹೋಗ್ಬಹುದಂತೆ ಆದ್ರೆ ಸಿನಿಮಾ ನೋಡೋದಕ್ಕೆ ಮಲ್ಟಿಪ್ಲೆಕ್ಸ್‌ಳಿಗೆ ಬರಬಾರ್ದು. ನಿಮ್ ಲಾಜಿಕ್ಕೇ ಅರ್ಥವಾಗಲ್ಲ ಥೋ' ಎಂದು ಶ್ರೀಧರ್ ಕಾಮೆಂಟ್ (Comment) ಮಾಡಿದ್ದರೆ, 'ನಾಳೆ ಹೆಚ್ಚು ಕಡಿಮೆ ಆದರೆ ನೀವು ಬೈಯೋದು ಅದೇ ಸರ್ಕಾರವನ್ನೇ ಅಲ್ಲವಾ? ಶಾಲೆಗೆ ಕಳಿಸೋಕೆ ಹಿಂದೆ ಮುಂದೆ ನೋಡ್ತಾ ಇದ್ದೀವಿ. ಇನ್ನು ಸಿನಿಮಾ ನೋಡೋಕೆ ಕರೆದುಕೊಂಡು ಹೋಗೋದು ಹೇಗೆ ಮಂಸೋರೆ. ಪ್ರತಿದಿನ ನಮಗೆ ಆ ಹೆದರಿಕೆ ಇದೆ. ಒಬ್ಬ ತಂದೆಯಾಗಿ (Father) ನನಗೆ ಈ concern ಇದೆ. ಅರ್ಥ ಮಾಡ್ಕೊಳ್ಳಿ' ಎಂದು ಗಿರೀಶ್ ಕಾಮೆಂಟ್ ಮಾಡಿದ್ದಾರೆ. ಹೀಗೆ ಎರಡೂ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಮಂಸೋರೆ ಮಾತು:

'ಥಿಯೇಟರ್‌ನಲ್ಲಿ ಇಡೀ ಕುಟುಂಬ ನೋಡಬಹುದಾದ ಸಿನಿಮಾಗಳು ಯು ಸರ್ಟಿಫಿಕೇಟ್ (U certificare film) ಪಡೆದವುಗಳು. ಪಾಲಕರ ಜೊತೆ ಮಕ್ಕಳ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಮಕ್ಕಳಿಗೆ ಮಲ್ಟಿಫ್ಲೆಕ್ಸ್‌ಗೆ ಪ್ರವೇಶ ಇಲ್ಲ. ಮಕ್ಕಳು ಸಿನಿಮಾ ನೋಡಲು ಮಲ್ಟಿಫ್ಲೆಕ್ಟ್‌ಗೆ ಹೋಗುವುದು ಜಾಸ್ತಿ. ಡಿಸೆಂಬರ್ ಜನವರಿಯಲ್ಲಿ (December January) ಸಾಕಷ್ಟು ಸಿನಿಮಾಗಳು ರಿಲೀಸ್ ಆಗುವುದಿದೆ. ಹೀಗಾದರೆ ಸಿನಿಮಾ ನೋಡಲು ಯಾರು ಬರುತ್ತಾರೆ? ವರ್ಷಾನುಗಟ್ಟಲೇ ಶ್ರಮ ಹಾಕಿ ಕಷ್ಟಪಟ್ಟ ಸಿನಿಮಾ ಮಾಡುವವರು ಈ ರೀತಿ ಆದರೆ ಏನು ಮಾಡಬೇಕು' ಎಂದು ನಿರ್ದೇಶಕರು ಪ್ರಶ್ನೆ ಮಾಡಿದ್ದಾರೆ. 

ನಾನು ಕಂಡಿದ್ದ ಕನಸು ಕನಸಾಗಿಯೇ ಹೋಯಿತು: ನಿರ್ದೇಶಕ ಮಂಸೋರೆ

'ಮಾಲ್‌ಗೆ (Mall) ಎಂಟ್ರಿ ಆಗುವಾಗ ಟಿಕೆಟ್ ಪಡೆಯುವಾಗ, ಟಿಕೆಟ್ ಪಡೆದು ಸಿನಿಮಾ ಹಾಲ್‌ಗೆ ಹೋಗುವ ಮುನ್ನ ಡಬಲ್ ಡೋಸ್ ವ್ಯಾಕ್ಸಿನೇಶನ್ (Vaccine Certificate) ಪಡೆದ ಸರ್ಟಿಫಿಕೇಟ್ ತೋರಿಸಬೇಕು. ಮೂರು ಸಲ ಯಾಕೆ ಸರ್ಟಿಫಿಕೇಟ್ ತೋರಿಸಬೇಕು? ಒಮ್ಮೆ ತೋರಿಸಿದರೆ ಸಾಕಾಗಲ್ವಾ? ಸುಮ್ಮನೆ ಸಮಯ ವ್ಯರ್ಥ' ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. 

'ಮಾಲ್‌ಗಳಲ್ಲಿ ಜನರ ಮೊಬೈನ್ ಸಂಗ್ರಹ ಮಾಡುತ್ತಿದ್ದಾರೆ. ಈ ರೀತಿ ಸಂಗ್ರಹ ಮಾಡಲು ಡಾಟಾ ಸಂಗ್ರಹ ಮಾಡಿ ಏನಾದರೂ ಮಾಡಿದರೆ ಯಾರು ಹೊಣೆ? ಸರ್ಕಾರ ಯಾಕೆ ಎಲ್ಲ ವಿಚಾರಕ್ಕೂ ಸಿನಿಮಾ ಮೇಲೆ ಕಣ್ಣಿಡುತ್ತದೆ ಅಂತ ಅರ್ಥವಾಗುತ್ತಿಲ್ಲ. ನಿಯಮ ಮಾಡಿ ಆದರೆ ಜನರಿಗೆ ಸಮಸ್ಯೆ ಆಗುವ ರೀತಿಯಲ್ಲಿ ನಿಯಮ ಮಾಡಬೇಡಿ.  WHO ಏನಾದರೂ ಒಮಿಕ್ರಾನ್‌ನಿಂದ ಸಮಸ್ಯೆ ಆಗತ್ತೆ ಅಂತ ಹೇಳಿದೆಯಾ? ಮಕ್ಕಳಿಗೆ ಹೆಚ್ಚಿನ ತೊಂದರೆ ಆಗುತ್ತೆ ಅಂತ ಹೇಳಿದೆಯಾ? ಎರಡು ಡೋಸ್ ಪಡೆದವರಿಗೆ ಓಮಿಕ್ರಾನ್ ಬರಲ್ವಾ? ಚಿತ್ರರಮಗದವರ ಜೊತೆ ಕೂಡು ಚರ್ಚೆ ಮಾಡಿ ಸರ್ಕಾರ ನೀತಿ ನಿಯಮ ಮಾಡಬೇಕು' ಎಂದಿದ್ದಾರೆ.

 

click me!