
ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಟೀಸರ್ ನಾಳೆ(ಏ.2) ಬಿಡುಗಡೆಯಾಗಲಿದೆ. ಮಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮಲಯಾಳಂ ವರ್ಶನ್, ಮೆಗಾ ಸ್ಟಾರ್ ಚಿರಂಜೀವಿ ತೆಲುಗು ಟೀಸರ್, ಜನಪ್ರಿಯ ನಟ ಸಿಂಬು ತಮಿಳು ಟೀಸರ್ ಅನಾವರಣ ಮಾಡಲಿದ್ದಾರೆ. ನಾಳೆ ಬೆಳಗ್ಗೆ 9.55ಕ್ಕೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ‘ವಿಕ್ರಾಂತ್ ರೋಣ’ ಟೀಸರ್ ಬಿಡುಗಡೆಯಾಗಲಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಟೀಸರ್‌ಗಳು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾದರೆ, ಹಿಂದಿ ಹಾಗೂ ಇಂಗ್ಲೀಷ್ ಟೀಸರ್‌ಗಳು ಟಿ ಸೀರೀಸ್‌ನಲ್ಲಿ ರಿಲೀಸ್ ಆಗಲಿವೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದ ನಿರ್ಮಾಪಕ ಜಾಕ್ ಮಂಜುನಾಥ್.
ಅನೂಪ್ ಭಂಡಾರಿ ನೀಡಿರುವ ವಿಕ್ರಾಂತ್ ರೋಣ ಚಿತ್ರದ ಅಪ್‌ಡೇಟ್ಸ್ ಇಲ್ಲಿದೆ-
1. ‘ವಿಕ್ರಾಂತ್ ರೋಣ’ ಕನ್ನಡ, ತೆಲುಗು, ,ತಮಿಳು, ಹಿಂದಿ, ಮಲಯಾಳಂ ಜತೆಗೆ ಇಂಗ್ಲಿಷ್‌ನಲ್ಲೂ ಬಿಡುಗಡೆ ಆಗುತ್ತಿದೆ. ಮಲಯಾಳಂ ಭಾಷೆಯ ಹೊರತಾಗಿ ಎಲ್ಲಾ ಭಾಷೆಗಳಲ್ಲೂ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಇದು ನಮ್ಮ ಚಿತ್ರದ ನಾಯಕ ಸುದೀಪ್ ಪ್ರೀತಿಯಿಸಿದ ಸ್ವೀಕರಿಸಿ ನಿಭಾಯಿಸಿದ ದೊಡ್ಡ ಸವಾಲು ಎಂಬುದು ನನ್ನ ಭಾವನೆ.
2. ಚಿತ್ರಕ್ಕೆ ಇಂಗ್ಲಿಷ್ ಡಬ್ಬಿಂಗ್ ನಡೆಯುತ್ತಿದೆ. ಸುದೀಪ್ ಪಾತ್ರದ ಡಬ್ಬಿಂಗ್ ಕೆಲಸ ಮಾತ್ರ ಮುಗಿದ್ದು, ಉಳಿದವರ ಪಾತ್ರಗಳಿಗೆ ಡಬ್ಬಿಂಗ್ ನಡೆಯುತ್ತಿದೆ. ನನಗೆ ಗೊತ್ತಿರುವಂತೆ ಒಂದು ಕಮರ್ಷಿಯಲ್ ಚಿತ್ರದಲ್ಲಿ ನಾಯಕ ನಟನೊಬ್ಬ ತಮ್ಮ ಪಾತ್ರಕ್ಕೆ ತಾವೇ ಇಂಗ್ಲಿಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ದಕ್ಷಿಣ ಭಾರತದ ಯಾವ ಹೀರೋಗಳು ಕೂಡ ತಮ್ಮ ಪಾತ್ರಕ್ಕೆ ತಾವೇ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ವಾಯ್‌್ಸ ಕೊಟ್ಟಿಲ್ಲ.
3. ಇಂಗ್ಲಿಷ್‌ಗೆ ಡಬ್ ಮಾಡುವಾಗ ತಾಂತ್ರಿಕವಾಗಿ ಮತ್ತು ಕ್ರಿಯೇಟಿವ್ ಆಗಿ ಸಾಕಷ್ಟುಸವಾಲುಗಳನ್ನು ಎದುರಿಸಿದ್ದೇವೆ. ಆ್ಯಕ್ಸೆಂಟ್ ಸವಾಲನ್ನು ಸುದೀಪ್ ತುಂಬಾ ಅದ್ಭುತವಾಗಿ ನಿಭಾಯಿಸಿದ್ದಾರೆ. ನಿರ್ದೇಶಕನಾಗಿ ನನಗೆ ಎದುರಾಗಿದ್ದು, ಕನ್ನಡ ಅವತರಿಣಿಕೆಯಲ್ಲಿ ಬರುವ ಗಾದೆ ಮಾತುಗಳನ್ನು ಇಂಗ್ಲಿಷಿಗೆ ಹೇಗೆ ತೆಗೆದುಕೊಂಡು ಹೋಗುವುದು ಎನ್ನುವುದು. ಅವು ಇಂಗ್ಲಿಷ್‌ಗೆ ವರ್ಕ್ ಆಗಲ್ಲ. ಅಂಥ ಕಡೆ ಯಾವ ಸಂಭಾಷಣೆ ಬರಬೇಕು, ಇಂಡಿಯನ್ ಇಂಗ್ಲಿಷ್ ಆದರೂ ಅದನ್ನು ಪಾತ್ರಧಾರಿಯ ಬಳಿ ತೆರೆ ಮೇಲೆ ಹೇಗೆ ಮಾತನಾಡಿಸಬೇಕು ಎನ್ನುವ ಸವಾಲುಗಳನ್ನು ಈ ಚಿತ್ರದಲ್ಲಿ ಎದುರಿಸಿದ್ದೇನೆ.
4. ಬಿಡುಗಡೆ ದಿನಾಂಕವನ್ನು ಇನ್ನೂ ಪಕ್ಕಾ ಮಾಡಿಲ್ಲ. ಅದನ್ನು ನಿರ್ಮಾಪಕ ಜಾಕ್ ಮಂಜು ಅವರೇ ಹೇಳಬೇಕು. ಆದರೆ, ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.