ಕನ್ನಡದ ತಂತ್ರಜ್ಞರು, ಕಲಾವಿದರೇ ಸೇರಿಕೊಂಡು ಬಾಲಿವುಡ್‌ನಲ್ಲೊಂದು ಹಾಲಿವುಡ್‌ನಂತಹ ಸಿನಿಮಾ ಮಾಡಿದ್ದಾರೆ. ಅದರ ಹೆಸರು ‘ದಿ ಫಾಲನ್’ ಎಂಬುದು. ಈ ಚಿತ್ರದ ಮೂಲಕ ಬಿಗ್‌ಬಾಸ್ ಸ್ಪರ್ಧಿ ಅನುಪಮಾ ಗೌಡ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.
ಕನ್ನಡದ ತಂತ್ರಜ್ಞರು, ಕಲಾವಿದರೇ ಸೇರಿಕೊಂಡು ಬಾಲಿವುಡ್‌ನಲ್ಲೊಂದು ಹಾಲಿವುಡ್‌ನಂತಹ ಸಿನಿಮಾ ಮಾಡಿದ್ದಾರೆ. ಅದರ ಹೆಸರು ‘ದಿ ಫಾಲನ್’ ಎಂಬುದು. ಈ ಚಿತ್ರದ ಮುಖ್ಯ ಪಾತ್ರಧಾರಿಗಳು ಬಿಗ್‌ಬಾಸ್ ಅನುಪಮಾ ಗೌಡ, ರಂಗಭೂಮಿ ಪ್ರತಿಭೆ ಭವಾನಿ ಪ್ರಕಾಶ್, ಮಯೂರಿ ನಟರಾಜ, ಸತ್ಯ ಬಿಜಿ. ಇದನ್ನು ನಿರ್ದೇಶಿಸಿರುವುದು ಪ್ರದೀಪ್ ವರ್ಮಾ.
undefined
‘ಊರ್ವಿ’ ಚಿತ್ರದ ನಂತರ ಸದ್ದಿಲ್ಲದೆ ಪ್ರದೀಪ್ ವರ್ಮಾ ಹಿಂದಿ ಚಿತ್ರವನ್ನು ರೂಪಿಸಿದ್ದಾರೆ. ಯಾವಾಗ ಈ ಸಿನಿಮಾ ಶುರುವಾಯಿತು, ಯಾವಾಗ ಚಿತ್ರೀಕರಣ ಮುಗಿಯಿತು ಎನ್ನುವ ಕುತೂಹಲಗಳಲ್ಲೇ ಸದ್ಯಕ್ಕೆ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ. ಹಾಗಾದರೆ ಈ ಚಿತ್ರದ ಕತೆ ಏನು ಎಂಬುದು ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿರುವ ಹುಟ್ಟು ಹಾಕಿರುವ ಪ್ರಶ್ನೆ. ಪ್ರಕೃತಿಯ ವಿನಾಶ ಮತ್ತು ಮಾನವನ ಕೊನೆಯ ಕೊಂಡಿ. ಇವೆರಡು ಚಿತ್ರದ ಮುಖ್ಯ ಅಂಶಗಳು. ಅಂದರೆ ಮಾನವ ಸ್ವಾರ್ಥಿಕ್ಕೆ ಇಡೀ ಪ್ರಕೃತಿಯೇ ನಿರ್ನಾಮ ಆಗುತ್ತದೆ.
ಇದರ ಜತೆಗೆ ಮಾನವ ಕೂಡ ಅಳಿಸಿ ಹೋಗುತ್ತಾನೆ. ಹೀಗೆ ಪ್ರಕೃತಿಯ ಕಳೆದು ಹೋಗುವ ಮನುಷ್ಯ ಜೀವಿಗಳ ಪೈಕಿ, ಒಂದೇ ಒಂದು ಕುಟುಂಬದ ಉಳಿದುಕೊಳ್ಳುತ್ತದೆ. ಹಾಗೆ ಉಳಿದುಕೊಂ ಕುಟುಂಬ ವಿನಾಶಗೊಂಡು ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಪ್ರಕೃತಿಯಲ್ಲಿ ಹೇಗೆ ತನ್ನ ವಿಕಾಸವನ್ನು ಕಂಡುಕೊಳ್ಳುತ್ತದೆ, ಯಾವ ತಂತ್ರಜ್ಞಾನದ ಸೌಲಭ್ಯಗಳೂ ಇಲ್ಲದ ಇಡೀ ಜಗತ್ತೇ ಖಾಲಿ ಎನಿಸುವ ಭೂಮಿಯ ಮೇಲೆ ಆ ಕುಟುಂಬ ಏನೆಲ್ಲ ಮಾಡುತ್ತದೆ ಎಂಬುದೇ ಚಿತ್ರದ ಕತೆ.
ನಿಖಿಲ್ ಮದುವೆಯಾಗೋ ಹುಡುಗಿ ರೇವತಿ ಏನ್ ಓದಿದ್ದಾರೆ? ಏನ್ ಮಾಡ್ತಿದ್ದಾರೆ?
ಸಾಮಾನ್ಯವಾಗಿ ಹಾಲಿವುಡ್ ಚಿತ್ರಗಳಲ್ಲಿ ಇಂಥ ಅದ್ಭುತಗಳನ್ನು ನೋಡಿದ್ದೇವೆ. ಈಗ ಭಾರತೀಯ ಭಾಷೆಯಲ್ಲೂ ಮತ್ತೊಂದು ಜಗತ್ತಿನ ದಂತ ಕತೆಯನ್ನು ‘ಹೀಗೆ ಇರಬಹುದು’ ಎನ್ನುವ ಊಹೆಯ ಮೇರೆಗೆ ತೆರೆ ಮೇಲೆ ಕಟ್ಟಿಕೊಡಲು ಹೊರಟಿದ್ದಾರೆ ನಿರ್ದೇಶಕ ಪ್ರದೀಪ್ ವರ್ಮಾ.