50ರ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್; ಸೆಲೆಬ್ರಿಟಿಗಳು ಶುಭ ಕೋರಿದ್ದು ಹೀಗೆ!

Suvarna News   | Asianet News
Published : Sep 02, 2021, 04:59 PM ISTUpdated : Sep 02, 2021, 05:54 PM IST
50ರ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್; ಸೆಲೆಬ್ರಿಟಿಗಳು ಶುಭ ಕೋರಿದ್ದು ಹೀಗೆ!

ಸಾರಾಂಶ

ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ನಟ ಕಿಚ್ಚ ಸುದೀಪ್‌ ಹುಟ್ಟು ಹಬ್ಬಕ್ಕೆ ಸಿನಿ ಆಪ್ತರು ಹಾಗೂ ರಾಜಕಾರಣಿಗಳು ಶುಭ ಹಾರೈಸುತ್ತಿದ್ದಾರೆ. ಯಾರೆಲ್ಲಾ, ಹೇಗೆ ವಿಶ್ ಮಾಡಿದ್ದಾರೆ ಎಂದು ಇಲ್ಲಿದೆ ನೋಡಿ...  

'ತಾಯವ್ವ' ಮತ್ತು 'ಸ್ಪರ್ಶ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ ನಟ ಕಿಚ್ಚ ಸುದೀಪ್, ಈಗ ಗಾಯಕನಾಗಿ, ಚಿತ್ರ ನಿರ್ಮಾಪಕರಾಗಿ, ಕಿರುತೆರೆ ರಿಯಾಲಿಟಿ ಶೋ ನಿರೂಪಕ, ಸಮಾಜ ಸೇವಕ ಹಾಗೂ ಕ್ರಿಕೆಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇಂದು 50ರ ವಸಂತಕ್ಕೆ ಕಾಲಿಡುತ್ತಿರುವ ನಟ ಸುದೀಪ್ ಕೊರೋನಾ ಕಾಟದಿಂದ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಕೊರೋನಾ ಕಾಟದಿಂದ ಅಭಿಮಾನಿಗಳನ್ನು ಭೇಟಿ ಮಾಡದೇ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ. 

ಇಂದು ಪತ್ರಕರ್ತ ಡಾ.ಶರಣ್ ಹುಲ್ಲೂರು ಬರೆದಿರುವ ಕಿಚ್ಚನ ಬಯೋಗ್ರಾಫಿ 'ಕನ್ನಡ ಮಾಣಿಕ್ಯ ಕಿಚ್ಚ' ಆಡಿಯೋ ಪುಸ್ತಕವೂ ಬಿಡುಗಡೆಯಾಗಿದೆ. ಇದರ ಜೊತೆಗೆ ಸುದೀಪ್ ಒಪ್ಪಿ ಕೊಂಡಿರುವ ಸಿನಿಮಾ ತಂಡ ವಿಶೇಷವಾಗಿ ಕಿಚ್ಚನ ಹುಟ್ಟಿದಬ್ಬಕ್ಕೆ ಶುಭ ಕೂರಿದ್ದಾರೆ. 

ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ವಿಶ್

ಶ್ರೇಯಸ್‌ ಕೆ ಮಂಜು ಒಂದು ದಿನ ಮುಂಚೆಯೇ ಶುಭ ಹಾರೈಸಿದ ಕಾರಣ ಸುದೀಪ್ ತಮಾಷೆಯಾಗಿ ಕಾಲೆಳದಿದ್ದಾರೆ. 'ನಾಳೆ ಹುಟ್ಟುಹಬ್ಬ ಇರುವುದು ಬ್ರದರ್. ನಿಮ್ಮ ತಂದೆಯಿಂದಲೂ ನಾನು ಅಡ್ವಾನ್ಸ್ ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಅಂದ್ಮೇಲೆ ನಿನ್ನಿಂದಲೂ ಅಡ್ವಾನ್ಸ್ ವಿಶ್ ಬೇಡ,' ಎಂದು ಟ್ಟೀಟ್ ಮಾಡಿದ್ದಾರೆ. 

'ಪ್ರತಿ ಸಲವೂ ನಾನು ಸುದೀಪ್ ಸರ್‌ನ ಭೇಟಿ ಮಾಡಿದಾಗಲೂ ತಪ್ಪದೆ ಫೋಟೋ ತೆಗೆದುಕೊಳ್ಳುವೆ. ಹೀಗೆ ಮಾಡುವುದು ನನಗೆ ಸಂತೋಷ ನೀಡುತ್ತದೆ. ನಮ್ಮಿಬ್ಬರ ಫೆವರೆಟ್ ಫೋಟೋ ಇದು. ಹ್ಯಾಪಿ ಬರ್ತಡೇ ಸರ್,' ಎಂದು ನಟಿ ಹರ್ಷಿಕಾ ಪೂಣಚ್ಚ ಬರೆದುಕೊಂಡಿದ್ದಾರೆ. 

'ಸ್ಕೂಲ್‌ ದಿನಗಳಿಂದಲೂ ನಾನು ನಿಮ್ಮ ದೊಡ್ಡ ಫ್ಯಾನ್ ಸುದೀಪ್ ಸರ್. ನಿಮ್ಮ ಅದ್ಭುತ ಅಭಿನಯ ನಮ್ಮಂಥ ಯಂಗ್ ಕಲಾವಿದರಿಗೆ ಸ್ಫೂರ್ತಿ. ಅಭಿನಯ ಚಕ್ರವರ್ತಿ ಸರ್‌‌ಗೆ ಹುಟ್ಟು ಹಬ್ಬದ ಶುಭಾಶಯಗಳು, ಎಂದು ನಟ ಪೃಥ್ವಿ ಆಂಬರ್ ಟ್ಟೀಟ್ ಮಾಡಿದ್ದಾರೆ. 

 

'ಹುಟ್ಟುಹಬ್ಬದ ಶುಭಾಶಯಗಳು ಸುದೀಪ್ ಸರ್. ನೀವು ನಮಗೆ ಸ್ಫೂರ್ತಿ,' ಎಂದಿದ್ದಾರೆ ನಟಿ ಅದಿತಿ ಪ್ರಭುದೇವ್.

'ನಮಗೆ ದೊಡ್ಡ ಅಣ್ಣ, ನಮ್ಮ ಮೆಂಟರ್, ನಮ್ಮ ಗೈಡ್ ಸುದೀಪ್ ಸರ್. ನೀವು ಹೀಗೆ ಎಲ್ಲರಿಗೂ ಸ್ಪೂರ್ತಿಯಾಗಿರಿ. ಈ ವರ್ಷವೂ ಯಶಸ್ಸು ನಿಮ್ಮದಾಗಲಿ,' ಎಂದು ಅಕುಲ್ ಬಾಲಾಜಿ ಪತ್ನಿ ಜೋ ಟ್ಟೀಟ್ ಮಾಡಿದ್ದಾರೆ. 

ಹ್ಯಾಪಿ ಬರ್ತಡೇ ಕಿಚ್ಚ ಸುದೀಪ್; 50ನೇ ವಸಂತಕ್ಕೆ ಆಡಿಯೋ ಪುಸ್ತಕ ಬಿಡುಗಡೆ!

'ಚಿತ್ರರಂಗದ ಪ್ರತಿಭಾನ್ವಿತ ನಟ, ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೊಂಬಾಳೆ ಫಿಲಂ ಟ್ಟಿಟರ್ ಪೇಜ್‌ ಮೂಲಕ ವಿಶ್ ಮಾಡಿದೆ.

 

'ಕನ್ನಡದ ಚಿತ್ರರಂಗದ ಕೀರ್ತಿಯನ್ನು ಭಾರತಾದ್ಯಂತ ಪಸರಿಸಿದ ಕನ್ನಡದ ಹೆಮ್ಮೆಯ ನಟ ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ‌ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕನ್ನಡ ಮಾತ್ರವಲ್ಲದೇ ಭಾರತದ ಚಿತ್ರರಂಗದಲ್ಲಿ ಈ ದೀಪ ಸದಾ ಪ್ರಕಾಶಿಸುತ್ತಿರಲಿ ಎಂದು ಹಾರೈಸುತ್ತೇನೆ,' ಎಂದು ಸಂಸದ ಪ್ರಜ್ವಲ್ ರೇವಣ ಬರೆದುಕೊಂಡಿದ್ದಾರೆ.

'ಆಲ್ ಇಂಡಿಯಾ ಕಟೌಟ್. ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಸಲ್ಲುವ ಅಭಿನಯ ಚಕ್ರವರ್ತಿ... ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರಿಗೆ ಹುಟ್ದಬ್ಬದ ಶುಭಾಶಯ' ಎಂದು ಕಿರಿಕ್ ಕೀರ್ತಿ ಟ್ಟೀಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?