K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌

Published : Jun 28, 2026, 07:10 PM IST
K Bhagyaraj

ಸಾರಾಂಶ

ಶಿವರಾಜ್‌ಕುಮಾರ್ ನಟನೆಯ ಈ ಸಿನಿಮಾ ತಮಿಳಿನ ‘ಸುಂದರಕಾಂಡಂ’ ಚಿತ್ರದ ರಿಮೇಕ್. ಇದು ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಸೂಕ್ಷ್ಮ ಕಥೆಯನ್ನು ಒಳಗೊಂಡಿತ್ತು. ಇನ್ನು,  ಅನಂತ್ ನಾಗ್-ಸೌಂದರ್ಯ ನಟನೆಯ ‘ತೂಗುವೆ ಕೃಷ್ಣನ’ ಚಿತ್ರವು ತಮಿಳಿನ 'ಆರಾರೋ ಆರಿರಾರೋ' ಚಿತ್ರದ ರೂಪಾಂತರ.

ಕೆ ಭಾಗ್ಯರಾಜ್ ಸ್ಕ್ರೀನ್‌ಪ್ಲೇ ಮ್ಯಾಜಿಕ್: ಕನ್ನಡದ ಈ ನಟರುಗಳ ಲೈಫ್ ಬದಲಿಸಿದ ಆ ನಿರ್ದೇಶಕನ ತಮಿಳು ಕಥೆಗಳಿವು!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ‘ಸ್ಕ್ರೀನ್‌ಪ್ಲೇ ಕಿಂಗ್’ ಎಂದೇ ಖ್ಯಾತರಾದವರು ಇತ್ತೀಚೆಗೆ ನಮ್ಮನ್ನಗಲಿದ ನಿರ್ದೇಶಕ ಕೆ. ಭಾಗ್ಯರಾಜ್. ಅವರ ಸಿನಿಮಾಗಳೆಂದರೆ ಅಲ್ಲಿ ಅದ್ದೂರಿ ಆಕ್ಷನ್ ಇರುತ್ತಿರಲಿಲ್ಲ, ಬದಲಾಗಿ ಮಧ್ಯಮ ವರ್ಗದ ಜನರ ಬದುಕು, ಹಳ್ಳಿಯ ಮುಗ್ಧ ಪ್ರೇಮಕಥೆಗಳು ಮತ್ತು ಹೊಟ್ಟೆ ಹುಣ್ಣಾಗಿಸುವಂತಹ ಹಾಸ್ಯ ಇರುತ್ತಿತ್ತು. ಭಾಗ್ಯರಾಜ್ (Director K Bhagyaraj) ಅವರ ಕಥೆಗಳು ಎಷ್ಟು ಶಕ್ತಿಶಾಲಿಯಾಗಿದ್ದವೆಂದರೆ, ಅವುಗಳನ್ನು ಕನ್ನಡಕ್ಕೆ ರಿಮೇಕ್ ಮಾಡಿದ ಪ್ರತಿಯೊಬ್ಬ ನಟನೂ ಇಂದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈ ಕೆ. ಭಾಗ್ಯರಾಜ್ ಅವರು ತಮಿಳಿನ ಹಿರಿಯ ನಿರ್ದೇಶಕ ಭಾರತಿರಾಜ್ ಅವರ ಶಿಷ್ಯ ಅನ್ನೋದು ಗಮನಿಸಬೇಕಾದ ಸಂಗತಿ.

ಭಾಗ್ಯರಾಜ್ ಅವರ ಕಥೆಗಳನ್ನು ನಂಬಿ ಗೆದ್ದ ಕನ್ನಡದ ಹೀರೋಗಳ ಪಟ್ಟಿ!

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಭಾಗ್ಯರಾಜ್ ಕಾಂಬಿನೇಷನ್!

ಕನ್ನಡಿಗರ ಹೆಮ್ಮೆಯ ‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರ ಕೆರಿಯರ್‌ನಲ್ಲಿ ಭಾಗ್ಯರಾಜ್ ಸಿನಿಮಾಗಳು ದೊಡ್ಡ ತಿರುವು ನೀಡಿವೆ. ಹಂಸಲೇಖ ಅವರ ಸಂಗೀತ ಮತ್ತು ಭಾಗ್ಯರಾಜ್ ಅವರ ಸ್ಕ್ರಿಪ್ಟ್ ಸೇರಿದರೆ ಅಲ್ಲಿ ವಿಜಯೋತ್ಸವ ಫಿಕ್ಸ್ ಆಗಿರುತ್ತಿತ್ತು.

ಹಳ್ಳಿ ಮೇಷ್ಟ್ರು (1992): ತಮಿಳಿನ 'ಮುಂಧನೈ ಮುಡಿಚು' ಚಿತ್ರದ ರಿಮೇಕ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ರವಿಚಂದ್ರನ್ ಅವರ 'ಮೇಷ್ಟ್ರು' ಅವತಾರ ಇಂದಿಗೂ ಫೇಮಸ್ ಆಗಿಯೇ ಇದೆ.

ಅಣ್ಣಯ್ಯ (1993): ಇದು 'ಎಂಗ ಚಿನ್ನ ರಾಸಾ' ಚಿತ್ರದ ರಿಮೇಕ್. ಮಧುಬಾಲಾ ಜೊತೆಗಿನ ರವಿಮಾಮ ಅವರ ಕೆಮಿಸ್ಟ್ರಿ ಮತ್ತು ಹಾಡುಗಳು ಈ ಚಿತ್ರವನ್ನು ಬ್ಲಾಕ್‌ಬಸ್ಟರ್ ಮಾಡಿದವು. ಇಂದಿಗೂ ಸಿನಿಪ್ರೇಕ್ಷಕರು ಈ ಚಿತ್ರದ ಬಗ್ಗೆ ಮಾತನ್ನಾಡುತ್ತಲೇ ಇರುತ್ತಾರೆ.

ಮನೆ ದೇವ್ರು: 'ಮೌನ ಗೀತೆಗಳ್' ಆಧಾರಿತ ಈ ಚಿತ್ರ ಸಂಸಾರದ ಸುಂದರ ಕಥೆಯನ್ನು ಹೇಳಿತ್ತು.

ವಿಶೇಷವೆಂದರೆ, ತಮಿಳಿನ 'ಇದು ನಮ್ಮ ಆಳು' ಚಿತ್ರವನ್ನು ರವಿಚಂದ್ರನ್ ಅವರು 'ರವಿಶಾಸ್ತ್ರಿ (2006)' ಮೂಲಕ 2ನೇ ಬಾರಿ ರಿಮೇಕ್ ಮಾಡಿದ್ದರು.

ನವರಸ ನಾಯಕ ಜಗ್ಗೇಶ್ ಅವರ ಕಾಮಿಡಿ ದರ್ಬಾರ್!

ಕೆ ಭಾಗ್ಯರಾಜ್ ಅವರ ತುಂಟತನದ ಕಥೆಗಳಿಗೆ ಜಗ್ಗೇಶ್ ಅವರ ಬಾಡಿ ಲ್ಯಾಂಗ್ವೇಜ್ ಸರಿಯಾಗಿ ಒಪ್ಪುತ್ತಿತ್ತು.

ಅಳಿಯ ಅಲ್ಲ ಮಗಳ ಗಂಡ (1997): ಜಗ್ಗೇಶ್ ಅವರ ಕೆರಿಯರ್‌ನ ಮೈಲಿಗಲ್ಲು ಈ ಸಿನಿಮಾ. ಇದು ಭಾಗ್ಯರಾಜ್ ಅವರ 'ಇದು ನಮ್ಮ ಆಳು' ಚಿತ್ರದ ರಿಮೇಕ್. ಜಗ್ಗೇಶ್ ಅವರ ಡೈಲಾಗ್ ಡೆಲಿವರಿ ಚಿತ್ರವನ್ನು ದೊಡ್ಡ ಹಿಟ್ ಆಗಿಸಿತು.

ಜಗತ್ ಕಿಲಾಡಿ (1998): 'ಅವಸರ ಪೊಲೀಸ್ 100' ರಿಮೇಕ್ ಆದ ಈ ಚಿತ್ರದಲ್ಲಿ ಜಗ್ಗೇಶ್ ಅವರ ಡಬಲ್ ರೋಲ್ ಮ್ಯಾಜಿಕ್ ಮಾಡಿತ್ತು.

ಗುರು ಕಾಶೀನಾಥ್ ಮತ್ತು ಶಿಷ್ಯ ಉಪೇಂದ್ರ ಜೋಡಿ!

ಸ್ಯಾಂಡಲ್‌ವುಡ್‌ನ ಅಪ್ರತಿಮ ಪ್ರತಿಭೆ ಕಾಶೀನಾಥ್ ಅವರು ಕೂಡ ಭಾಗ್ಯರಾಜ್ ಸಿನಿಮಾಗಳನ್ನು ಕನ್ನಡೀಕರಿಸುವಲ್ಲಿ ಯಶಸ್ವಿಯಾಗಿದ್ದರು.

ಚಪಲ ಚೆನ್ನಿಗರಾಯ: ಭಾಗ್ಯರಾಜ್ ಅವರ 'ಚಿನ್ನ ವೀಡು' ಕಥೆಯನ್ನು ಕಾಶೀನಾಥ್ ಅವರು ತಮ್ಮದೇ ಸ್ಟೈಲ್‌ನಲ್ಲಿ ಹೇಳಿ ಜನರನ್ನ ನಗಿಸಿದ್ದರು.

ಲವ್ ಮಾಡಿ ನೋಡು: ಇದು ಕ್ಲಾಸಿಕ್ ಹಿಟ್ 'ಅಂದ 7 ನಾಟ್ಕಳ್' ಚಿತ್ರದ ರಿಮೇಕ್. ವಿಶೇಷ ಅಂದ್ರೆ ಈ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು!

ಇನ್ನುಳಿದ ಸೂಪರ್ ಸ್ಟಾರ್‌ಗಳ ಪಟ್ಟಿ ಹೀಗಿದೆ:

ಸುಂದರ ಕಾಂಡ: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಈ ಸಿನಿಮಾ ತಮಿಳಿನ ಅದೇ ಹೆಸರಿನ ಚಿತ್ರದ ರಿಮೇಕ್. ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಸೂಕ್ಷ್ಮ ಕಥೆಯನ್ನು ಇದು ಒಳಗೊಂಡಿತ್ತು.

ತೂಗುವೆ ಕೃಷ್ಣನ: ಅಭಿನಯ ಚತುರ ಅನಂತ್ ನಾಗ್ ಮತ್ತು ಸೌಂದರ್ಯ ಅವರ ಅದ್ಭುತ ನಟನೆಯ ಈ ಚಿತ್ರ 'ಆರಾರೋ ಆರಿರಾರೋ' ಚಿತ್ರದ ರೂಪಾಂತರ.

ಪ್ರೇಮಿ ನಂಬರ್ 1: ರಮೇಶ್ ಅರವಿಂದ್ ನಟನೆಯ ಈ ಲವ್ ಸ್ಟೋರಿ 'ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್' ಚಿತ್ರದ ಆಧಾರಿತ.

ಹೀಗೆ ಎಸ್. ನಾರಾಯಣ್ ಅವರ 'ವಿಶಾಲಾಕ್ಷಮ್ಮನ ಗಂಡ', 'ಬಾನಲ್ಲು ನೀನೆ ಭುವಿಯಲ್ಲು ನೀನೆ' ಸಿನಿಮಾಗಳೂ ಕೂಡ ಭಾಗ್ಯರಾಜ್ ಸ್ಕ್ರೀನ್‌ಪ್ಲೇ ಇಂದ ಬಂದಂತಹವೇ. ಒಟ್ಟಾರೆಯಾಗಿ ಹೇಳುವುದಾದರೆ, ಕೆ. ಭಾಗ್ಯರಾಜ್ ಅವರು ಬರೆದ ಹಳ್ಳಿಯ ಸೊಗಡಿನ ಕಥೆಗಳು ಗಡಿ ಮೀರಿ ಬಂದು ಕನ್ನಡಿಗರ ಹೃದಯ ಗೆದ್ದಿವೆ. ಸರಳ ಕಥೆಗಳೇ ಸಿನಿಮಾದ ಅಸಲಿ ಹೀರೋ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ba Ma Harish Son Ullas Gowda Death: ವಿಜಯನಗರ ನಿವಾಸದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
SN Shankar Death: ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ