
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ನ ಕಥೆ ಸೋರಿಕೆಯಾಗಿದೆ ಎನ್ನಲಾಗಿದೆ. ಈ ಸಿನಿಮಾವನ್ನು ಯುಎಇ ಯಲ್ಲಿ ವಿತರಣೆ ಮಾಡುತ್ತಿರುವ ಫಾರ್ಸ್ ಫಿಲಂಸ್ ವಿತರಕರ ವೆಬ್‌ಸೈಟ್‌ನಲ್ಲಿ ಚಿತ್ರದ ಕಥೆ ಬಹಿರಂಗಗೊಂಡ ಬಗ್ಗೆ ವರದಿಯಾಗಿದೆ.
1940 ರಿಂದ 1970ರ ಅವಧಿಯಲ್ಲಿ ಗೋವಾದಲ್ಲಿ ವಸಾಹತುಶಾಹಿ ಆಡಳಿತ ಕ್ಷೀಣಿಸುತ್ತಿತ್ತು. ಕ್ರೈಮ್ ಸಿಂಡಿಕೇಟ್‌ಗಳ ಅಧಿಪತ್ಯ ಪ್ರಭಾವಶಾಲಿಯಾಗತೊಡಗಿತ್ತು. ಹೊರಜಗತ್ತಿಗೆ ಸ್ವರ್ಗದಂತಿದ್ದ ಗೋವಾದ ಭೂಗತ ಲೋಕ ಕತ್ತಲೆಯ ಕೂಪದಂತೆ ಕರಾಳವಾಗಿತ್ತು. ಇದೇ ಹೊತ್ತಿನಲ್ಲಿ ಅಲ್ಲೊಬ್ಬ ಯುವಕ ರಕ್ತ, ಭಯ ಮತ್ತು ದ್ರೋಹದ ಮೂಲಕ ತನ್ನ ಸಾಮ್ರಾಜ್ಯವನ್ನು ರೂಪಿಸಿದ ರೋಚಕತೆ ಸಿನಿಮಾದ ಮುಖ್ಯ ಎಳೆ ಎಂದು ತಿಳಿದುಬಂದಿದೆ.
‘ಅಧಿಕಾರವನ್ನು ಯಾರೂ ಕೊಡುವುದಿಲ್ಲ, ಅದನ್ನು ಬಲವಂತದಿಂದ ವಶಪಡಿಸಲಾಗುತ್ತದೆ. ಹಾಗೆ ಪಡೆದ ಅಧಿಕಾರಕ್ಕೆ ಪ್ರತಿಫಲದ ಅಪೇಕ್ಷೆ ಇರುತ್ತದೆ. ಕಳ್ಳಸಾಗಣೆ ಮಾರ್ಗವೇ ಇಲ್ಲಿ ಯುದ್ಧಭೂಮಿ. ನಿಷ್ಠೆಯ ಬದಲಿಗೆ ಇಲ್ಲಿರುವುದು ಅನುಮಾನ. ತಲೆ ಕೆಟ್ಟವನಷ್ಟೇ ಇವುಗಳ ನಡುವೆ ಬದುಕಬಲ್ಲ’ ಎಂಬ ಕಥೆಯ ವಿವರಗಳೂ ವೆಬ್‌ಸೈಟ್‌ನಲ್ಲಿವೆ.
ಟಾಕ್ಸಿಕ್ ಸಿನಿಮಾದಲ್ಲಿ ಐವರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಎಲ್ಲರೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಯನ್ ತಾರಾ, ರುಕ್ಮಿಣಿ ವಸಂತ್, ಕಿಯಾರ ಅಡ್ವಾಣಿ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿ ಐವರು ಈ ಸಿನಿಮಾದಲ್ಲಿದ್ದಾರೆ. ಇದೇ ಕಾರಣದಿಂದ ಕುತೂಹಲ ಡಬಲ್ ಆಗಿದೆ.
ಇದನ್ನೂ ಓದಿ: Yash: ಟಾಕ್ಸಿಕ್ ಟೀಸರ್ ನೋಡ್ತಿದ್ದಂತೆ ಗಂಡೈಕ್ಳಳಿಂದ ಶುರುವಾಯ್ತು ಗೂಗಲ್ ಹುಡುಕಾಟ
ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಚಿತ್ರವಿದು.
ಇದನ್ನೂ ಓದಿ: ಶಾಂತಂ ಪಾಪಂನಲ್ಲಿಯೂ ಟಾಕ್ಸಿಕ್‌ನ ಡ್ಯಾನ್ಸಿಂಗ್ ಕಾರ್; ಮುಖದಲ್ಲಿ ಕೋಪ, ದೇಹದಲ್ಲಿ ತಾಪ; ಸ್ಮಶಾನದಲ್ಲಿಯೇ ರೊಮ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.