ಇದು ಜಮೀನು, ಆಸ್ತಿಯೇನೂ ದೊಡ್ಡದಾಗುವಂತ ವಿಷ್ಯ ಅಲ್ಲ ಸರ್.. ಅರ್ಥ ಮಾಡ್ಕೊಳಿ.. ನಮ್‌ಗಳಿಗೆ ಒಂದು ಅವಕಾಶ ಮಾಡಿ, ಯಾವುದಾದ್ರೂ ಒಂದು ವಿಷ್ಯ ಬಂದ್ರೆ, ಅದನ್ನ ಒಂದ್ ರೀತಿ..
ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಹಲವು ವರ್ಷಗಳ ಹಿಂದೆ ಯಶ್ ಜೀವನದಲ್ಲಿ ನಡೆದಿದ್ದ ಘಟನೆ ಹಾಗು ಆ ಬಗ್ಗೆ ನಟ ಯಶ್ ಮಾತನಾಡಿದ್ದು, ಈಗ ಸೋಷಿಯಲ್ ಮೀಡಿಯಾ ಮೂಲಕ ಸಖತ್ ವೈರಲ್ಆಗತೊಡಗಿವೆ. ಈ ಸಾಮಾಜಿಕ ಜಾಲತಾಣವೇ ಹಾಗೆ, ಇಂದು ಹೇಳಿದ್ದು ಹತ್ತು ವರ್ಷಗಳ ಬಳಿಕ ಕೂಡ ವೈರಲ್ ಆಗಬಹುದು. ಬೇರೆ ಯಾರೋ ಹೀರೋ ಏನೋ ಮಾಡಿದರೆ ಇನ್ನೊಬ್ಬರು ಹೀರೋ ಯಾವತ್ತೋ ಆಡಿರುವ ಮಾತುಗಳು ವೈರಲ್ ಆಗತೊಡಗುತ್ತವೆ.
ಹಾಗಿದ್ದರೆ ಅದೇನು ಗೊತ್ತಾ? ಹಾಸನದಲ್ಲಿ ನಟ ಯಶ್ ಫ್ಯಾಮಿಲಿ ತೆಗೆದುಕೊಂಡಿರುವ ಜಮೀನಿಗೆ ಸಂಬಂಧಿಸಿ ವಿವಾದವೊಂದು ಏರ್ಪಟ್ಟಿತ್ತು. ಆಗ ಯಶ್ ಪೊಲೀಸ್ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್ ಕೊಟ್ಟು, ಜಗಳವಾಡಿದ್ದ ಜನರ ಜೊತೆ ಅಲಲ್ಇ ಮಾಧ್ಯಮದ ಮೈಕ್-ಕ್ಯಾಮೆರಾ ಮುಂದೆಯೇ ಮಾತನಾಡಿದ್ದರು. ಅದೀಗ, ಇಷ್ಟು ವರ್ಷಗಳ ಬಳಿಕ, ಯಾವುದೋ ಕೇಸ್‌ಗೆ ಸಂಬಂಧಿಸಿ ಹರಿದಾಡುತ್ತಿದೆ. ಯಶ್ ಮಾತುಗಳು, ಕಾನೂನಿನ ಪ್ರಕಾರವೇ ಜಗಳ ಬಗೆಹರಿಸಿಕೊಂಡ ರೀತಿ ಬೇರೆಯವರಿಗೂ ಮಾದರಿ ಆಗಬೇಕು ಎಂಬ ಸದುದ್ಧೇಶ ಇರಬಹುದು.
ಶಿವಣ್ಣನ ಮಗಳ ಸಿನಿಮಾಗೆ ಎಂಟ್ರಿ ಕೊಟ್ರು ಅಚ್ಯುತ್ ಕುಮಾರ್, ಹಳೇ ಬೇರು ಹೊಸ ಚಿಗುರು ಆಟವೇ..?
ಅದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮೇಲೆ ಬಂದು ಸಖತ್ ವೈರಲ್ ಆಗುತ್ತಿದೆ. ಕಾರಣ, ತಮ್ಮ ಕುಟುಂಬಕ್ಕೆ ಸಮಸ್ಯೆ ಬಂದಾಗ ನಟ ಯಶ್ ಅದನ್ನು ಕಾನೂನಿನ ಪ್ರಕಾರವೇ ಬಗೆಹರಿಸಿಕೊಳ್ಳಲು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಯಶ್ ಅದನ್ನು ವೈಯಕ್ತಿಕವಾಗಿ ಬಗೆಹರಿಸಿಕೊಳ್ಳಲು ಹೋಗಿರಲಿಲ್ಲ. ಅಲ್ಲಿ, ತಮ್ಮ ಜಮೀನು ವಿವಾದಕ್ಕೆ ಸಂಬಂಧಿಸಿ ಮಾಧ್ಯಮಗಳ ಎದುರು ಪೊಲೀಸ್ ಸ್ಟೇಷನ್ ಮುಂದೆಯೇ ತಮ್ಮ ಜಮೀನಿಗೆ ಸಂಬಂಧಿಸಿದ ವಿವಾದ ಏನಾಗಿತ್ತು, ಮುಂದೆ ಮಾಡಲಿರುವುದು ಏನು ಎಂಬುದನ್ನು ಹೇಳಿದ್ದರು.
ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!
ನಟ ಯಶ್ ಅವರು 'ಎಲ್ಲಿಂದಾನೋ ಬಂದವ್ರು, ಇಲ್ಲಿ ಬಂದೀದಿರಾ ಅಂತ ಕೇಳ್ತೀರಂತೆ.. ಹಾಸನದಲ್ಲೇ ಹುಟ್ಟಿರೋ ಮಗ ನಾನು.. ನಮ್ ತಂದೆ-ತಾಯಿ ಹಾಸನದವ್ರೇ.. ನಾನು ಹಾಸನದಲ್ಲೂ ಜಮೀನು ಮಾಡ್ತೀನಿ, ಬೆಳಗಾವಿಲೂ ಮಾಡ್ತೀನಿ, ಮಂಗಳೂರಲ್ಲೂ ಮಾಡ್ತೀನಿ. ಕರ್ನಾಟಕದವ್ನುನಾನು, ಎಲ್ಲಿ ಬೇಕಾದ್ರೂ ಮಾಡ್ತೀನಿ.. ಈ ತರ ಬಣ್ಣಕಟ್ತಾರೆ, ನೀವೂ ನಂಬ್ಕೋನೇಡಿ ದಯವಿಟ್ಟು..
ಮಾಡದೇ ಇರುವ ಕೊಲೆಗೆ ಜೈಲಿನಲ್ಲಿ ಇದ್ದಾರೆ, ನೋವು ಆಗಲ್ವಾ ಅಂದ್ರು ನಿರ್ಮಾಪಕ ಕೆ ಮಂಜು!
ಹತ್ತು ಎಕರೆ ಬೇಕಾ ಯಾರಿಗಾದ್ರೂ? ಬಡವರಿಗೆ ಉಪಯೋಗ ಆಗುತ್ತಾ? ಅಥವಾ ಜನ್ರಿಗೆ ಉಪಯೋಗ ಆಗುತ್ತಾ? ನಾನೇ ಬಿಟ್ಕೊಡ್ತೀನಿ.. ಸರ್ಕಾರಿ ಶಾಲೆ ಮಾಡ್ತಾರಾ, ಅಥವಾ ಜನಕ್ಕೆ ಯೂಸ್ ಆಗೋತರದ್ದು ಮಾಡ್ತಾರಾ, ನಾನೇ ಬಿಟ್ಕೊಡ್ತೀನಿ.. ಇದು ಜಮೀನು, ಆಸ್ತಿಯೇನೂ ದೊಡ್ಡದಾಗುವಂತ ವಿಷ್ಯ ಅಲ್ಲ ಸರ್.. ಅರ್ಥ ಮಾಡ್ಕೊಳಿ.. ನಮ್‌ಗಳಿಗೆ ಒಂದು ಅವಕಾಶ ಮಾಡಿ, ಯಾವುದಾದ್ರೂ ಒಂದು ವಿಷ್ಯ ಬಂದ್ರೆ, ಅದನ್ನ ಒಂದ್ ರೀತಿ ಪ್ರೊಜೆಕ್ಟ್ ಮಾಡೋ ಮೊದಲು ಯೋಚ್ನೆ ಮಾಡಿ.. ಅವ್ರು ಹೇಳಿದ್ದೆಲ್ಲಾ ಸತ್ಯ ಅಂದ್ಕೊಂಡ್ಬಿಟ್ರೆ...?
ತಂದೆ-ಮಗಳ ಬಾಂಧವ್ಯಕ್ಕೆ ಕಪ್ಪು ಚುಕ್ಕೆ ಇಟ್ಟ ಯೂಟ್ಯೂಬರ್ ವಿರುದ್ಧ ಕೇಸ್; ಸಾಯಿ ಧರಮ್ ತೇಜ ಗರಂ!
ಅವ್ರು ಹಳ್ಳಿ ಜನ, ನಮ್ ತಂದೆ ತಾಯಿನೂ ಹಳ್ಳಿ ಜನನೇ.. ಆ ಮಾತುಕತೆಗಳು ಆಗುತ್ತೆ.. ಆದ್ರೆ ಯಾವ್ ರೀತಿ ಮಾತಾಡ್ಬೇಕೋ ಆ ರೀತಿ ಮಾತಾಡ್ಬೇಕು.. ಆದ್ರೆ, ಮೀಡಿಯಾ ಇದೆ ಅಂತ, ಎಲ್ಲಾನೂ ಇದೇ ಆಗ್ಬಿಟ್ಟಿದೆ ನಮ್ಗೆ.. ಇಲ್ಲಿ ಇವತ್ತು ಯಾಕೆ ಬಂದಿದೀವಿ ಗೊತ್ತಾ? ಇರ್ಲಿ ಬಿಡ್ರಿ, ನಾವೂ ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ.. ತಂದೆ-ತಾಯಿಗೆ ಮಾತಾಡ್ತಾ ಇದ್ರೂ ನಮ್ ಇಮೇಜು ಅದೂ ಇದೂ ಅಂತ ನೋಡ್ತಾ ಕೂತ್ಕೊಳ್ಳೋಕೆ ಆಗಲ್ಲಾರೀ..'ಎಂದಿದ್ದರು. ಅದೀಗ ಸಾಂದರ್ಭಿಕವಾಗಿ ವೈರಲ್ ಆಗುತ್ತಿದೆ ಎನ್ನಬಹುದು!
ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!
ಅಂದಹಾಗೆ, ಯಶ್ ನಟನೆ ಹಾಗು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾಗಳ ಖ್ಯಾತಿ ಹಾಗು ಗಳಿಕೆ ಬಗ್ಗೆ ಜಗತ್ತೇ ತಿಳಿದಿದೆ. ಕೆಜಿಎಫ್ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಜಾಸ್ತಿ ಆಗಿದ್ದು, ಈ ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಎನಿಸಿದೆ. ದಂಗಲ್ ಹಾಗೂ ಬಾಹುಬಲಿ-2 ಚಿತ್ರಗಳ ಬಳಿಕ ಯಶ್ ನಟನೆಯ 'ಕೆಜಿಎಫ್2' KGF 2 ಚಿತ್ರವು ಭಾರತದಲ್ಲಿ ಅತೀ ಹೆಚ್ಚಿನ ಗಳಿಕೆ ಕಂಡಿರುವ ಮೂರನೆಯ ಚಿತ್ರವಾಗಿ ಹೊರಹೊಮ್ಮಿದೆ.
ಏನ್ರೀ ಇದು ನಟ ವಿಷ್ಣುವರ್ಧನ್ ಕಥೆ, ಮತ್ತೊಂದು ದಾಖಲೆ ವಿಷ್ಣುವರ್ಧನ್ ಹೆಸರಲ್ಲಿದೆ..!
ಈ ಮೂಲಕ ಕೆಜಿಏಫ್-2 ಚಿತ್ರವು ಜೂನಿಯರ್ ಎನ್‌ಟಿಆರ್ ಹಾಗು ರಾಮ್ ಚರಣ್ ನಟನೆಯ 'ಆರ್‌ಆರ್‌ಅರ್' ಚಿತ್ರವನ್ನು ಕೆಳಕ್ಕೆ ತಳ್ಳಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಗೀತೂ ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್'ನಲ್ಲಿಯೂ ಯಶ್ ನಟಿಸುತ್ತಿದ್ದಾರೆ. ಇನ್ನೊಂದು ಸಂಗತಿ ಎಂದರೆ, ನಟ ಯಶ್ ರಾಮಾಯಣ ಸಿನಿಮಾಗೆ ನಿರ್ಮಾಪಕರೂ ಆಗಿದ್ದು, ಈ ಮೂಲಕ ಮೊದಲ ಬಾರಿಗೆ ನಿರ್ಮಾಪಕ ಪಟ್ಟ ಪಡೆದಿದ್ದಾರೆ.
ತಂದೆ-ಮಗಳ ಬಾಂಧವ್ಯಕ್ಕೆ ಕಪ್ಪು ಚುಕ್ಕೆ ಇಟ್ಟ ಯೂಟ್ಯೂಬರ್ ವಿರುದ್ಧ ಕೇಸ್; ಸಾಯಿ ಧರಮ್ ತೇಜ ಗರಂ!