ಜೈಲೂಟ ತಿಂದ ನಟ ದರ್ಶನ್‌ಗೆ ವಾಂತಿ ಭೇದಿ; ಭರ್ಜರಿ ತೂಕ ಇಳಿಕೆ

By Sathish Kumar KHFirst Published Jul 9, 2024, 3:12 PM IST
Highlights

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಟ ದರ್ಶನ್ ಜೈಲೂಟ ತಿಂದು ವಾಂತಿ, ಭೇದಿಯಿಂದ ಬಳಲಿ ಸುಮಾರು ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ. 

ಬೆಂಗಳೂರು (ಜು.09): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೆಂಟ್ರಲ್ ಜೈಲು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾ ಖೈದಿಯಾಗಿರುವ ನಟ ದರ್ಶನ್‌ಗೆ ಮನೆಯಿಂದ ಊಟ ತರಿಸಿಕೊಳ್ಳಲು ಜೈಲಿನ ಅಧಿಕಾರಿಗಳು ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೊಡುವ ಊಟವನ್ನು ತಿಂದು ವಾಂತಿ ಭೇದಿಯಿಂದ ಬಳಲಿರುವ ದರ್ಶನ್ ಸುಮಾರು 10 ಕೆಜಿಯಷ್ಟು ತೂಕ ಇಳಿಕೆ ಆಗಿದ್ದಾನೆ. ಹೀಗಾಗಿ, ಮನೆಯಿಂದ ಊಟ, ಹಾಸಿಗೆ ಹಾಗೂ ಅಭ್ಯಾಸಕ್ಕೆ ಕೆಲವು ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ನೀಡುವಂತೆ ದರ್ಶನ್ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಹೌದು, ಹೈಕೋರ್ಟ್ ಗೆ ನಟ ದರ್ಶನ್ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಊಟ, ಹಾಸಿಗೆ, ಪುಸ್ತಕಗಳನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ನ್ಯಾಯಾಲಯಕ್ಕೆ ರಿಟ್ ಸಲ್ಲಿಕೆ ಮಾಡಿದ್ದಾರೆ. ವಕೀಲರಾದ ಪ್ರವೀಣ್ ತಿಮ್ಮಯ್ಯ ಅವರು ರಿಟ್ ಅರ್ಜಿ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಅರ್ಜಿ ಕುರಿತು ನಟ ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ವಾದ ಮಂಡನೆಗೆ ಹಾಜರಾಗಲಿದ್ದಾರೆ. ಇನ್ನು ದರ್ಶನ್ ಅರ್ಜಿಯು ಹೈಕೋರ್ಟ್ ಪೀಠದ ಮುಂದೆ ಗುರುವಾರ ವಿಚಾರಣೆಗೆ ‌ಬರುವ ಸಾಧ್ಯತೆಯಿದೆ.

Latest Videos

ಮಂಜಿನ ನಗರಿ ಮಡಿಕೇರಿಯಲ್ಲಿ ಹಾಸನದ 19 ವರ್ಷದ ಯುವತಿ ಇಟ್ಟುಕೊಂಡು ನಕಲಿ ವೇಶ್ಯಾವಾಟಿಕೆ

ಮನೆಯಿಂದ ಬಟ್ಟೆ, ಚಮಚ (cutlery), ಖಾಸಗಿಯಾಗಿ ಪಡೆಯುವ ಆಹಾರ, ಮನೆಯಲ್ಲಿ ತಯಾರಿಸಿದ ಆಹಾರ, ಹಾಸಿಗೆ, ಪುಸ್ತಕ ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ಕೈದಿಗಳಿಗೆ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ತಿಂದಾಗ ಅತಿಸಾರ / ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ ಎಂದು ಜೈಲಿನ ವೈದ್ಯರೇ ನಟ ದರ್ಶನ್‌ ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. 

ಇನ್ನು ನಟ ದರ್ಶನ್‌ಗೆ ಜೈಲೂಟ ತಿಂದು ಅತಿಸಾರ / ಭೇದಿ ಉಂಟಾಗಿ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲಿನ ಅಧಿಕಾರಿಗಳಿಗೆ  ದರ್ಶನ್ ಕೋರಿಕೆ ಮಾಡಿದ್ದರೂ ಅದನ್ನು ಮನ್ನಿಸಿಲ್ಲ. ನಿಮ್ಮ ಮನವಿಗೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ‌. ಮನೆ ಊಟ ತರಿಸಿಕೊಳ್ಳಲು ಜೈಲು ಅಧಿಕಾರಿಗಳ ನಿರಾಕರಣೆ ಮಾಡಿರುವುದು ಕಾನೂನುಬಾಹಿರ, ಅಮಾನವೀಯವಾಗಿದೆ. ಹೀಗೇ ಮುಂದುವರಿದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. 

ನಟ ದರ್ಶನ್ ಕೊಲೆ ಕೇಸ್; ಕೋರ್ಟ್‌ ವಿಚಾರಣೆಗೆ ಮುನ್ನವೇ ಜಾಮೀನು ಅರ್ಜಿ ವಾಪಸ್ ಪಡೆದ ವಕೀಲರು

ಜೊತೆಗೆ, ದೀರ್ಘ ಕಾಲದವರೆಗೆ ಜೈಲಿನ ಊಟ ತಿಂದರೆ ನಟ ದರ್ಶನ್ ಅನಾರೋಗ್ಯಕ್ಕೂ ಕಾರಣವಾಗಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

click me!