ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ವಿಶೃತ್‌ಗೆ ಸನ್ಮಾನ!

Published : Apr 29, 2022, 10:27 AM IST
ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ವಿಶೃತ್‌ಗೆ ಸನ್ಮಾನ!

ಸಾರಾಂಶ

ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ವಿಶೃತ್‌ಗೆ ಸನ್ಮಾನ ನಿರ್ದೇಶನವೇ ಆದ್ಯತೆ, ನಟನೆ : ವಿಶೃತ್‌ ನಾಯಕ್‌

2017ನೇ ಸಾಲಿನ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದ ನಟ, ನಿರ್ದೇಶಕ ವಿಶೃತ್‌ ನಾಯಕ್‌ ಅವರಿಗೆ ಸ್ನೇಹಿತರು ಮತ್ತು ವಿಶೃತ್‌ ನಟನೆ, ನಿರ್ದೇಶನದ ‘ಮಂಜರಿ’ ಚಿತ್ರತಂಡದವರು ಇತ್ತೀಚೆಗೆ ಸನ್ಮಾನಿಸಿದರು. ಮಂಜರಿ ಚಿತ್ರದ ನಿರ್ಮಾಪಕ ಶಂಕರ್‌, ನಟ ಜೆಕೆ, ನಿರ್ಮಾಪಕರಾದ ಭಾ ಮಾ ಹರೀಶ್‌, ಜಗದೀಶ್‌, ಸಂಗೀತ ನಿರ್ದೇಶಕ ಸತೀಶ್‌ ಬಾಬು ಹಾಜರಿದ್ದರು. ಈ ಹೊತ್ತಿನಲ್ಲಿ ವಿಶೃತ್‌ ಹೇಳಿದ ಮಾತುಗಳು ಇಲ್ಲಿವೆ.

1. ನಾನು ಮೂಲತಃ ಕುಣಿಗಲ…ನ ಹೊಸಕೆರೆಯವನು. ಬೆಂಗಳೂರಿಗೆ ಬಂದು ಟ್ರಾವೆಲ್ಸ್‌ ನಡೆಸುತ್ತಿದ್ದೆ. ಒಂದು ಹಂತದಲ್ಲಿ ಟ್ರಾವೆಲ್ಸ್‌ ಮಾರಿದೆ. ಆಗ ನನ್ನ ಹೆಂಡತಿ ನನ್ನನ್ನು ಕಾನ್ಫಿಡಾಗೆ ಸೇರಿಸಿದಳು. ಅಲ್ಲಿ ಹಿರಿಯ ನಿರ್ದೇಶಕರಿಂದ ಮಾರ್ಗದರ್ಶನ ದೊರೆಯಿತು. ಬರವಣಿಗೆಗೆ ರವಿ ಬೆಳಗೆರೆ ಸ್ಫೂರ್ತಿ.

ಬಂಡೆಗಲ್ಲುಗಳಿದ್ದ ಜಮೀನಾಯ್ತು ಹಸಿರು ಹೊತ್ತ ಭೂಮಿ, ಬಂಗಾರದಂಥಾ ಬೆಳೆ ಬೆಳೆದ ರೈತ ಸಾಧಕಿ

2. ಮಂಜರಿ ಚಿತ್ರಕ್ಕೆ ನಾನು ನಿರ್ದೇಶನ ಮಾತ್ರ ಮಾಡಬೇಕು ಎಂದುಕೊಂಡಿದ್ದೆ. ನಾನು ಮಾಡಿದ ಪಾತ್ರಕ್ಕೆ ಬೇರೊಬ್ಬ ಹಿರಿಯ ನಟರನ್ನು ಕೇಳಿದ್ವಿ. ಸಂಭಾವನೆ ವಿಚಾರದಲ್ಲಿ ಅವರಿಂದ ನಮ್ಮ ಚಿತ್ರದಲ್ಲಿ ಪಾತ್ರ ಮಾಡಿಸಲು ಆಗಲಿಲ್ಲ. ನಿರ್ಮಾಪಕರು ಆ ಪಾತ್ರ ನೀನೇ ಮಾಡು ಅಂತ ನನಗೆ ಹೇಳಿದರು. ಹೀಗೆ ಹಿರಿಯ ನಟರೊಬ್ಬರು ಮಾಡದೆ ಹೋದ ಪಾತ್ರ ಮಾಡಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಆದೆ.

ಹಿರಿಯ ನಟ ಶಂಕರ್‌ ಭಟ್‌ ಅವರಿಗೆ ಕಲಾ ವಿಭೂಷಣ ಪ್ರಶಸ್ತಿ

    3. ನಿರ್ದೇಶನಕ್ಕೆ ನನ್ನ ಮೊದಲ ಆದ್ಯತೆ. ಸದ್ಯ ಜೆಕೆ ನಟನೆಯ ಕಾಡ ಹಾಗೂ ಕಾಲನಾಗಿಣಿ ಚಿತ್ರಗಳನ್ನು ನಿರ್ದೇಶಿದ್ದು, ಈ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

    ಹಿರಿಯ ನಟ ಶಂಕರ್‌ ಭಟ್‌ ಅವರಿಗೆ ಕಲಾ ವಿಭೂಷಣ ಪ್ರಶಸ್ತಿ

    ಹಿರಿಯ ಕಲಾವಿದ ಶಂಕರ್‌ ಭಟ್‌ ಅವರಿಗೆ ಭಾರತ ರತ್ನ ಸರ್‌ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನದ ‘ಕಲಾ ವಿಭೂಷಣ ರಾಷ್ಟ್ರ ಪ್ರಶಸ್ತಿ’ ಸಂದಿದೆ. ಏ.28ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.

    ವೃತ್ತಿಯಲ್ಲಿ ಬ್ಯಾಂಕ್‌ ಅಧಿಕಾರಿಯಾಗಿದ್ದ ಭಟ್ಟರು ‘ಶ್ವೇತ ಗುಲಾಬಿ’ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಆ ದಿನಗಳಲ್ಲೇ ರಾಜ್ಯಮಟ್ಟದ ನಾಟಕದ ಸ್ಪರ್ಧೆಗಳಲ್ಲಿ ಉತ್ತಮ ನಟನೆಗಾಗಿ ಮೂರು ಬಾರಿ ‘ಉಲ್ಲಾಳ್‌ ಶೀಲ್ಡ್‌’ ಪಡೆದ ಪ್ರತಿಭಾವಂತರು. ಮುಂದೆ ಹವ್ಯಾಸಿ ರಂಗಭೂಮಿಯಲ್ಲಿ ಗಿರೀಶ್‌ ಕಾರ್ನಾಡ್‌, ಬಿ ವಿ ಕಾರಂತ್‌, ಜಿ ವಿ ಅಯ್ಯರ್‌, ಶಂಕರ್‌ನಾಗ್‌, ರಮೇಶ್‌ ಭಟ್‌, ನಾಗಾಭರಣ ಮೊದಲಾದವರೊಂದಿಗೆ ನಾಟಕಗಳಲ್ಲಿ ಅಭಿನಯಿಸಿದರು.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
    ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!