ಮನೆಯಲ್ಲಿ ಎರಡು ನಾಯಿಗಳಿವೆ ಅಷ್ಟೇ; 'ತಬ್ಬಲಿ' ವಿನೋದ್ ರಾಜ್ ಕಣ್ಣೀರು ಹಾಕಿದ್ದೇಕೆ?

By Shriram Bhat  |  First Published Nov 6, 2024, 4:42 PM IST

ನಟ ಜೈಲಲ್ಲಿ ನಟ ದರ್ಶನ್ ಅವರನ್ನು ಹಾಗೂ ಕೊಲೆಯಾಗಿರುವ ರೇಣುಕಾ ಸ್ವಾಮಿ ಮನೆಗೆ ಹೋಗಿ ಅವರ ಅಪ್ಪನನ್ನು ಭೇಟಿಯಾಗಿ ಬಂದಿದ್ದರ ಬಗ್ಗೆ ನಟ ವಿನೋದ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆ ಬಳಿಕ ನಟ ವಿನೋದ್ ರಾಜ್ಅ..


ನಟ ವಿನೋದ್ ರಾಜ್ (Vinod Raj) ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದ ಹಾಗು ಮಾತುಗಳಿಂದ ಆಗಾಗ ಸುದ್ದಿಯಾಗುತ್ತ ಇರುತ್ತಾರೆ. ಮಾಧ್ಯಮಗಳು ಅವರ ಬಾಯಿಯ ಬಳಿ ಮೈಕ್ ಹಿಡಿದರೆ, ಅಥವಾ ಯೂಟ್ಯೂಬ್ ಚಾನೆಲ್‌ಗಳು ಏನಾದರೂ ಪ್ರಶ್ನೆ ಕೇಳಿದರೆ, ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ವಿನೋದ್ ರಾಜ್ ಅವರನ್ನು ಕಂಡರೆ ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ಆದರೆ, ಪ್ಲಸ್ ಇದ್ದಲ್ಲಿ ಮೈನಸ್ ಕೂಡ ಇರಲೇಬೇಕು ಎಂಬಕೆಲವರ ಮಾತಿನಂತೆ, ಅವರ ಮಾತಿನ ಮೂಲಕ ಟ್ರೋಲ್ ಮಾಡುವವರೂ ಇದ್ದಾರೆ. 

ಈಗ್ಯಾಕೆ ಆ ಮಾತು ಅಂತೀರಾ? ನಟ ಜೈಲಲ್ಲಿ ನಟ ದರ್ಶನ್ ಅವರನ್ನು ಹಾಗೂ ಕೊಲೆಯಾಗಿರುವ ರೇಣುಕಾ ಸ್ವಾಮಿ ಮನೆಗೆ ಹೋಗಿ ಅವರ ಅಪ್ಪನನ್ನು ಭೇಟಿಯಾಗಿ ಬಂದಿದ್ದರ ಬಗ್ಗೆ ನಟ ವಿನೋದ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆ ಬಳಿಕ ನಟ ವಿನೋದ್ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸುದ್ದಿಯಲ್ಲಿ ಇರಲೇ ಇಲ್ಲ. ಆದರೆ, ಇದೀಗ ಮತ್ತೆ ನಟ ವಿನೋದ್ ರಾಜ್ ನೆಟ್‌ನಲ್ಲಿ ಸುದ್ದಿಗೆ ಬಂದಿದ್ದಾರೆ. ಅವರದೊಂದು ಮಾತು ಬಹಳಷ್ಟು ವೈರಲ್ ಆಗುತ್ತಿದೆ.

Latest Videos

undefined

ಪಾರ್ವತಮ್ಮನ ಆಶ್ರಯದಲ್ಲಿ ಕನ್ನಡ ಚಿತ್ರರಂಗ ಒಂದಾಗಿದ್ದ ಕಾಲ; ಇದು ಹೀಗ್ಯಾಕೆ ವೈರಲ್ ಆಗ್ತಿದೆ?!

ತಮ್ಮ ಅಮ್ಮನ ನೆನಪು ಬರುತ್ತಲೇ ಇರುತ್ತದೆ. ಅದು ತಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ ಎಂದಿದ್ದಾರೆ ನಟ, ಲೀಲಾವತಿ ಕಂದ ವಿನೋದ್ ರಾಜ್. 'ಮನೆಗೆ ಬಂದ್ಯಾ ಕಂದಾ? ಊಟ ಮಾಡಿದ್ಯಾ ಅಂತ ಕೇಳೋಕೂ ಯಾರೂ ಇಲ್ಲ..! ಮನೆಲ್ಲಿ ಎರಡು ನಾಯಿಗಳಿವೆ ಅಷ್ಟೇ.. ಅಮ್ಮನ ನೆನಪು ಬಂದರೆ ತುಂಬಾ ಕಷ್ಟವಾಗುತ್ತದೆ ಬದುಕೋಕೆ' ಎಂದಿದ್ದಾರೆ ನಟ ಹಾಗೂ ಲೀಲಾವತಿ ಮಗ ವಿನೋದ್ ರಾಜ್. ಲೀಲಾವತಿ ನಿಧನದ ಬಳಿಕ ನೆಲಮಂಗಲದ ಮನೆಯಲ್ಲಿ ವಿನೋದ್ ರಾಜ್ ಒಬ್ಬರೇ ಇದ್ದಾರೆ ಎನ್ನಲಾಗಿದೆ. 

ಅಯ್ಯೋ, ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ, ಮಗನೂ ಇದ್ದಾರೆ. ಅವರೇಕೆ ಒಬ್ಬಂಟಿಯಾಗಿದ್ದಾರೆ ಎಂದು ಕೇಳಬೇಡಿ. ವಿನೋದ್ ರಾಜ್ ಸಂಸಾರ ಚೆನ್ನಾಗಿಯೇ ಇದೆ. ಆದರೆ, ಅವರ ಹೆಂಡತಿ ಮತ್ತು ಮಗ ಚೆನ್ನೈನಲ್ಲಿ ಇರುವ ಅವರ ಮತ್ತೊಂದು ಮನೆಯಲ್ಲಿ ಇದ್ದಾರೆ. ಆಗಾಗ ಅವರು ಇಲ್ಲಿ ನೆಲಮಂಗಲಕ್ಕೆ ಹಾಗೂ ಇವರು ಚೆನ್ನೈಗೆ ಹೋಗಿ-ಬಂದು ಮಾಡುತ್ತಾರೆ. ಆದರೆ ರೆಗ್ಯಲರ್ ಆಗಿ ವಿನೋದ್ ರಾಜ್ ಅವರು ಇಲ್ಲಿ ಒಬ್ಬಂಟಿಯಾಗಿದ್ದಾರೆ ಅಷ್ಟೇ. 

ಮದುವೆಗೆ ರೆಡಿಯಾಗಿರುವ ಡಾಲಿ ಧನಂಜಯ್ ಅಂತಿಂಥವರಲ್ಲ, ಹತ್ತನೇ ಕ್ಲಾಸ್‌ನಲ್ಲಿ ಮಾಡಿದ್ದೇನು?

ಲೀಲಾವತಿ ಹಾಗು ವಿನೋದ್ ರಾಜ್ ಅವರಿಬ್ಬರ ಉತ್ತಮ ಬಾಂಧವ್ಯದ ಬಗ್ಗೆ ಇಡೀ ಕರ್ನಾಟಕಕ್ಕೇ ಗೊತ್ತಿದೆ. ತಾಯಿ-ಮಗ ಇದ್ದರೆ ಹೀಗಿಬೇಕು ಎಂಬಂತೆ ಬದುಕಿ ಬಾಳಿದ್ದಾರೆ ಲೀಲಾವತಿ ಹಾಗೂ ವಿನೋದ್ ರಾಜ್. 'ನಿನಗೆ ನಾನು, ನನಗೆ ನೀನು' ಎಂಬಂತೆ ಇದ್ದ ಅವರಿಬ್ಬರು, ಲೀಲಾವತಿ ಬದುಕಿನ ಕೊನೆಯವರೆಗೂ ಹಾಗೇ ಇದ್ದರು ಎಂಬುದು ಸತ್ಯವಾದ ಹಾಗೂ ನಿಜವಾದ ವಿಶೇಷ ಸಂಗತಿ. ಇದೀಗ ವಿನೋದ್‌ ರಾಜ್ ಅವರು 'ತಾಯಿಯಿಲ್ಲದ ತಬ್ಬಲಿ' ಆಗಿದ್ದಾರೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. 

click me!