
ನಾಗಣ್ಣ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣ, ರಿಯಲ್ ಸ್ಟಾರ್ ಉಪೇಂದ್ರ ನಟನೆಯಲ್ಲಿ ಮೂಡಿ ಬರುತ್ತಿರುವ ‘ಭಾರ್ಗವ’ ಚಿತ್ರಕ್ಕೆ ಚಿತ್ರೀಕರಣವು ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ.
ಚಿತ್ರೀಕರಣ ಮುಗಿಯುತ್ತಿರುವ ಸಂಭ್ರಮದಲ್ಲಿರುವ ಸೂರಪ್ಪ ಬಾಬು ‘ಭಾರ್ಗವ’ ಚಿತ್ರದ ಕುರಿತು ಐದು ಮಾಹಿತಿ ಕೊಟ್ಟಿದ್ದಾರೆ.
1. ಉಪೇಂದ್ರ, ನಾಗಣ್ಣ ಅವರದ್ದು ಸಕ್ಸಸ್ ಕಾಂಬಿನೇಶನ್. ನಾನೂ ಹಿಟ್ ಕೊಟ್ಟ ನಿರ್ಮಾಪಕ. ಹೀಗೆ ಈ ಮೊದಲೇ ಗೆದ್ದಿರುವ ಕಾಂಬಿನೇಶನ್ ತುಂಬಾ ವರ್ಷಗಳ ನಂತರ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿದೆ.
2. ಇದು ಪಕ್ಕಾ ಉಪೇಂದ್ರ ಅವರ ಸ್ಟೈಲಿನ ಫ್ಯಾಮಿಲಿ ಸಿನಿಮಾ. ‘ಕುಟುಂಬ’, ‘ರಕ್ತಕಣ್ಣೀರು’ ಹಾಗೂ ‘ಗೌರಮ್ಮ’ ಚಿತ್ರಗಳ ನಂತರ ಅದೇ ರೀತಿ ಫ್ಲೇವರ್‌ನೊಂದಿಗೆ ‘ಭಾರ್ಗವ’ ಚಿತ್ರವನ್ನು ರೂಪಿಸಲಾಗಿದೆ. ಉಪೇಂದ್ರ ಫ್ಯಾಮಿಲಿ ಮ್ಯಾನ್ ಆಗಿ ಕಂ ಬ್ಯಾಕ್ ಆಗುತ್ತಿದ್ದಾರೆ.
3. ನಮ್ಮದು ಕನ್ನಡದ ಸಿನಿಮಾ. ಉಪ್ಪಿ ಅವರ ಫ್ಯಾನ್ಸ್ ಇಂಡಿಯಾ ಸಿನಿಮಾ ಅಂತಲೂ ಹೇಳಬಹುದು.
4. ಇಲ್ಲಿವರೆಗೂ 57 ದಿನ ಶೂಟಿಂಗ್ ಆಗಿದೆ. ಚಿತ್ರೀಕರಣ ಆಗಿರುವ ಫೂಟೇಜ್ ನೋಡಿದಾಗ ನಾನು ಏನನ್ನ ನಿರೀಕ್ಷೆ ಮಾಡಿದ್ನೋ ಅದನ್ನೇ ನಿರ್ದೇಶಕರು ಹಾಗೂ ಹೀರೋ ತೆಗೆದುಕೊಟ್ಟಿದ್ದಾರೆ.
5. ಕೇವಲ ಮನರಂಜನೆಯನ್ನೇ ಕೇಂದ್ರವಾಗಿಟ್ಟುಕೊಂಡು ಬಂದಿರುವ ಸಿನಿಮಾ. ಥಿಯೇಟರ್‌ಗೆ ಬರುವ ಪ್ರೇಕ್ಷಕನಿಗೆ ಗೊಂದಲ ಮೂಡಿಸುವುದಾಗಲಿ, ಆತನ ಯೋಚನೆಗಳಿಗೆ ಸವಾಲು ಹಾಕುವಂತಹ ಯಾವ ತಂತ್ರಗಳೂ ಇಲ್ಲದೆ ಮೂಡಿ ಬರುತ್ತಿರುವ ಚಿತ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.