ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ‘ಎ ಫಾರ್ ಆನಂದ್’ ಶೂಟಿಂಗ್ ಆರಂಭ: ವಿದ್ಯಾರ್ಥಿಗಳ ಜೊತೆ ಶಿವಣ್ಣ ಡ್ಯಾನ್ಸ್!

Published : Oct 10, 2026, 09:09 PM IST
Shivarajkumar

ಸಾರಾಂಶ

ನಟ ಶಿವರಾಜ್‌ಕುಮಾರ್ ಅಭಿನಯದ ‘ಎ ಫಾರ್ ಆನಂದ್’ ಚಿತ್ರದ ಚಿತ್ರೀಕರಣ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿದೆ. ವಿದ್ಯಾರ್ಥಿಗಳ ಜೊತೆ ಶಿವಣ್ಣ ಸಂಭ್ರಮಿಸಿದ್ದು, ಚಿತ್ರದಲ್ಲಿ ರವೀನಾ ಟಂಡನ್ ಕೂಡ ನಟಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ‘ಕರುನಾಡ ಚಕ್ರವರ್ತಿ’ ನಟ ಡಾ. ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ತಮ್ಮ ಮುಂಬರುವ ಚಿತ್ರ ‘ಎ ಫಾರ್ ಆನಂದ್‌’ ಚಿತ್ರೀಕರಣ ಆರಂಭಿಸಿದರು. ಶಿವಣ್ಣ ಅವರ ಆಗಮನವು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಭ್ರಮ ಮತ್ತು ತಾರಾ ಮೆರುಗು ತುಂಬಿ ವಿದ್ಯಾರ್ಥಿಗಳಿಗೆ ಅವಿಸ್ಮರಣೀಯ ಕ್ಷಣವಾಯಿತು.

ನೆಚ್ಚಿನ ನಟನನ್ನು ಸ್ವಾಗತಿಸಲು ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ ಜನಪ್ರಿಯ ಕನ್ನಡ ಹಾಗೂ ಶಿವರಾಜ್‌ಕುಮಾರ್ ಅವರ ಹಿಟ್ ಹಾಡುಗಳಿಗೆ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದಾಗ ಕ್ಯಾಂಪಸ್‌ನ ರಂಗು ಹೆಚ್ಚಿಸಿತ್ತು.

ವಿದ್ಯಾರ್ಥಿಗಳ ಜೊತೆ ಡ್ಯಾನ್ಸ್

ತೆರೆಯ ಮೇಲೆ ತಮ್ಮ ಚೈತನ್ಯಶೀಲ ಅಭಿನಯ ಮತ್ತು ಅಭಿಮಾನಿಗಳೊಂದಿಗೆ ಬೆರೆಯುವ ಸ್ನೇಹಪರ ಸ್ವಭಾವಕ್ಕೆ ಹೆಸರುವಾಸಿಯಾದ ಶಿವಣ್ಣ, ವಿದ್ಯಾರ್ಥಿಗಳ ಉತ್ಸಾಹಕ್ಕೆ ಸ್ಪಂದಿಸಿ ಅವರೊಂದಿಗೆ ತಾವೂ ಹೆಜ್ಜೆ ಹಾಕಿದ್ದು ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ನಂತರ ನಟ ಮತ್ತು ವಿದ್ಯಾರ್ಥಿಗಳ ನಡುವಿನ ಈ ಸಂವಾದವು ಚಿತ್ರೀಕರಣದ ಸುತ್ತಲಿನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತು.

‘ಎ ಫಾರ್ ಆನಂದ್’ ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ನಟಿಸುತ್ತಿದ್ದು, ಇದು ವಿದ್ಯಾರ್ಥಿ ಜೀವನದ ಕಥಾಹಂದರವನ್ನು ಹೊಂದಿದೆ. ಚಿತ್ರೀಕರಣಕ್ಕಾಗಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವನ್ನು ಪ್ರಮುಖ ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಗಿದ್ದು, ಚಿತ್ರದ ಬಹುಭಾಗದ ಚಿತ್ರೀಕರಣವು ಇಲ್ಲಿಯೇ ನಡೆಯಲಿದೆ.

ಇದರೊಂದಿಗೆ, ಬೆಂಗಳೂರು ಉತ್ತರದಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಚಿತ್ರೀಕರಣಕ್ಕೆ ಸ್ಥಳಾವಕಾಶ ಕಲ್ಪಿಸಿದ್ದಲ್ಲದೆ, ಚಿತ್ರತಂಡಕ್ಕೆ ಬೆಂಬಲ ನೀಡಿದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ.ನಿಸಾರ್ ಅಹ್ಮದ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಡಾ.ಶಿವರಾಜ್‌ಕುಮಾರ್ ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಡಿ ಪ್ರದೇಶವಾದ ಈ ಜಿಲ್ಲೆಯಲ್ಲಿ 8 ದಿನಗಳಿಂದ 'ಪ್ರೇಮದ ಊರಲಿ' ನೋಡಲು ಕುಟುಂಬ ಸಮೇತ ಕಿಕ್ಕಿರಿದ ಜನ!
‘ಪ್ರೇಮದ ಊರಲಿ’ಗೂ ‘ಬೃಂದಾವಿಹಾರಿ’ಗೂ ಏನು ಸಂಬಂಧ? ಗೋಲ್ಡನ್ ಸ್ಟಾರ್ ಗಣೇಶ್ ಏನ್ ಹೇಳಿದ್ರು?