ಸಂಚಾರಿ ವಿಜಯ್ ಇನ್ನೂ ಕೊನೆಯುಸಿರೆಳೆದಿಲ್ಲ: ವೈದ್ಯರು ಸ್ಪಷ್ಟಪಡಿಸಿದ್ದೇನು?

By Suvarna NewsFirst Published Jun 14, 2021, 3:05 PM IST
Highlights

* ಅಪಘಾತದಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ಸಂಚಾರಿ ವಿಜಯ್
* ಆಸ್ಪತ್ರೆಯವರು ಬಿಲ್ ಕಟ್ಟುವುದು ಬೇಡ ಎಂದಿದ್ದಾರೆ
* ಸಂಜೆ ಮೆದುಳಿನ ವರದಿ ಬಂದ ನಂತರ ಮುಂದಿನ ಹೆಜ್ಜೆ
* ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ

ಬೆಂಗಳೂರು(ಜೂ.  14) ಅಪಘಾತದಿಂದ ಗಾಯಗೊಂಡು ಚಿಕಿತ್ಸೆ  ಪಡೆದುಕೊಳ್ಳುತ್ತಿರುವ ನಟ ಸಂಚಾರಿ ವಿಜಯ್ ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಚಾರವನ್ನು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.  ವಿಜಯ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಉಸಿರಾಡುತ್ತಿದ್ದಾರೆಂದು ವೈದ್ಯರು, ಡಿಸಿಎಂ ಸ್ಪಷ್ಟಪಡಿಸಿದ್ದಾರೆ. 

ಸಂಚಾರಿ ವಿಜಯ್ ಸ್ಥಿತಿ ತುಂಬಾ ಕ್ರಿಟಿಕಲ್ ಇದೆ. ಅವರ ಜೀವ ಉಳಿಸೋಕೆ ತುಂಬಾ ಪ್ರಯತ್ನ ನಡಿತಿದೆ. ಈ ಘಟನೆ ಇಂದ ನಿಜಕ್ಕೂ ನಂಬಲಿಕ್ಕೆ ಸಾಧ್ಯವಿಲ್ಲ. ಇಂತ ದೊಡ್ಡ ಕಲಾವಿದ ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಯವರು ಬಿಲ್‌ ಕಟ್ಟುವುದು ಬೇಡ ಅಂದಿದ್ದಾರೆ. ಕುಟುಂಬಸ್ಥರು ಕಟ್ಟಿದ ಹಣವನ್ನೂ ವಾಪಾಸ್ ಕೊಟ್ಟಿದ್ದಾರೆ. ಅವರ ಜೀವ ಉಳಿಯಲಿ ಅಂತ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಎಲ್ಲಾ ರೀತಿಯಾದ ಪ್ರಯತ್ನದಿಂದ ಜೀವ ಉಳಿಸಲಿ ಎಂದು ಆಶಿಸುತ್ತೇನೆ. ಅವರ ಕುಟುಂಬದವರ ಜೊತೆ ಮಾತನಾಡಿದ್ದೇನೆ. ವಿಜಯ್  ಐಸಿಯುನಲ್ಲಿ ಇದ್ದಾರೆ. ಐಸಿಯು ಬಳಿಯಿಂದ ವಿಜಯ್ ರನ್ನು ನೋಡಿದ್ದೇನೆ. ತುಂಬಾ ಕ್ರಿಟಿಕಲ್ ಇದ್ದಾರೆ. ಜೀವ ಉಳಿಸೋಕೆ ಪ್ರಯತ್ನವಾಗಲಿ ಎಂದರು. ವದಂತಿಗಳ ಕಾರಣ ಸಂತಾಪ ಸೂಚನೆ ಹರಿದು ಬಂದಿದೆ. ಮಿದುಳು ನಿಷ್ಕ್ರಿಯವಾಗಿದೆ. ಪ್ರಾಣ ಇರುವ ವ್ಯಕ್ತಿಗೆ ಸಂತಾಪ ಸೂಚಿಸುವ ಕೆಲಸ ಮಾಡಬಾರದು. ಅವರು ಉಳಿದು ಬರಲಿ ಅಂತ ಪ್ರಾರ್ಥಿಸಬೇಕು ಎಂದರು.

ಮಾಧ್ಯಮಗಳಲ್ಲಿ ಬೇರೆ ರೀತಿ ಸುದ್ದಿ ಬರ್ತಿದೆ. ಹೀಗಾಗಿ ನಾನು ಮಾಧ್ಯಮದ ಮುಂದೆ ಬಂದು ಹೇಳಬೇಕಾದ ಅನಿವಾರ್ಯತೆ ಬಂತು. ಸಂಚಾರಿ ವಿಜಯ್ ಇನ್ನೂ ಜೀವಂತವಾಗಿದ್ದಾರೆ.ಅವರ ಬ್ರೈನ್ ಡೆಡ್ ಆಗಿದೆ ಅದರ ಬಗ್ಗೆ ನಿಗಾ ವಹಿಸಿದ್ದೇವೆ ಎಂದು ವೈದ್ಯ ಅರುಣ್ ಹೇಳಿಕೆ ನೀಡಿದ್ದಾರೆ.

ವಿಜಯ್ ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ?

ಹಾರ್ಟ್ ಬೀಟ್ ಇದೆ. ಬೇರೆ ರೀತಿಯ ಗೊಂದಲದ ಸುದ್ದಿ ಹಬ್ಬಿಸಬೇಡಿ. ಬ್ರೈನ್ ಡೆಡ್ ಆದ ತಕ್ಷಣ ಡೆತ್ ಅಲ್ಲ. ಯಾವಾಗ ಬೇಕಾದ್ರು ಸರಿ ಹೋಗಬಹುದು. ಸಂಜೆ 5 ಗಂಟೆಗೆ ಬ್ರೈನ್ ಬಗ್ಗೆ ರಿಪೋರ್ಟ್ ಬರುತ್ತದೆ. ಮೆದುಳು ಡೆತ್ ಅಲ್ಲ ಫೇಲ್ಯೂರ್ ಆಗಿದೆ. ಡೆಡ್ ಗೂ ಫೆಲ್ಯೂರ್ ಗೂ ವ್ಯತ್ಯಾಸವಿದೆ. ಹೀಗಾಗಿ ನಾವು ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ತಿಳಸಿದರು.

ಕುಟುಂಬಸ್ಥರು ಯಾವ ಅಂಗ ದಾನ‌ಮಾಡಬೇಕು ಅಂತ ನಿರ್ಧರಿಸ್ತಾರೆ. ಆ ಅಂಗವನ್ನು ನಾವು ತೆಗೆಯಬೇಕು. ಅಂಗಾಗ ಕಸಿ ಬೇಡ ಅಂತ ಆದ್ರೆ ನಾವು ತೆಗೆಯೋಲ್ಲ. ಅಂಗಾಗ ಬೇಕು ಅಂದಾಗ ಮಾತ್ರ ನಾವು ತೆಗೆಯಬೇಕು ಆಗ ಡೆತ್ ಅಂತ ಡಿಕ್ಲೇರ್ ಮಾಡ್ತೆವೆ. ಇನ್ನೂ ಅವರು ಜೀವಂತವಾಗಿದ್ದಾರೆ. ಹಾರ್ಟ್ ಬೀಟ್ ನಿಂತಾಗ ಮನುಷ್ಯ ಸಾಯ್ತಾನೆ.  ಯಾವ ಸಮಯಕ್ಕೆ ಅಂಗಾಗ ಕಸಿ ಆಗಬೇಕು ಅದನ್ನ ಸರ್ಕಾರ ಡಿಸೈಡ್ ಮಾಡಬೇಕು. ಇದಕ್ಕೆ ಅದರದ್ದೇ ಆದ ಪ್ರೊಸೀಜರ್ ಇದೆ  ಎಂದರು.

ಇನ್ನೂ ಆ ಬಗ್ಗೆ ನಿರ್ಧಾರ ವಾಗಿಲ್ಲ. ಸಂಜೆಯ ನಂತರ ಫೈನಲ್ ಬುಲಿಟಿನ್ ಬರುತ್ತೆ. ಮೆದುಳಿನ ರಿಪೋರ್ಟ್ ಬರುತ್ತದೆ. ಅಲ್ಲಿವರೆಗೂ ಕಾಯಬೇಕು. ನಂತರವೇ ಅಂಗಾಗ ದಾನದ ಮಾತು ಎಂದು ತಿಳಿಸಿದರು. 

click me!