
ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆ್ಯಂಬುಲೆನ್ಸ್ ಕೊರತೆ ಹೆಚ್ಚಾಗಿತ್ತು. ಈ ಸಮಯದಲ್ಲಿ ಜನರ ಸೇವೆ ಮಾಡಬೇಕೆಂದು ಕನ್ನಡ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಅರ್ಜುನ್ ಗೌಡ ಆ್ಯಂಬುಲೆನ್ಸ್ ಡ್ರೈವರ್ ಆಗಿ ಹಾಗೂ ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ್ದರು.
ಉಚಿತ ಆ್ಯಂಬುಲೆನ್ಸ್ ಸೇವೆ ನೀಡುತ್ತಿರುವ ಏಕೈಕ ನಟ ಅರ್ಜುನ್ ಗೌಡ ಸಂದರ್ಶನ!
'ತಾಯಿ ಗಂಗೆಯಲ್ಲಿ ಅಸ್ಥಿ ಬಿಡಲು ಕಾಶಿ ತಲುಪಿದ್ದೇನೆ. ಆತ್ಮಗಳಿಗೆ ಶಾಂತಿ ಸಿಗಲಿ. ಹರ ಹರ ಮಹಾದೇವ, ಅಂತ್ಯವು ಹೊಸ ಆರಂಭಕ್ಕೆ ಬುನಾದಿ,' ಎಂದು ಅರ್ಜುನ್ ಬರೆದುಕೊಂಡಿದ್ದಾರೆ. ಹೌದು! ಕೊರೋನಾದಿಂದ ಸತ್ತವರ ದೇಹವನ್ನು ಕೆಲವು ಪ್ಯಾಕೇಜ್ ಮೂಲಕ ಅಂತ್ಯಕ್ರಿಯೆ ಮಾಡಲು ತಿಳಿಸುತ್ತಿದ್ದರು, ಇನ್ನೂ ಕೆಲವರು ಆಸ್ಪತ್ರೆಯಲ್ಲಿಯೇ ದೇಹವನ್ನು ಬಿಟ್ಟು ಹೋಗುತ್ತಿದ್ದರು. ಕೊರೋನಾ ಭಯಕ್ಕಿಂತಲೂ ಹೆಚ್ಚಾಗಿ ಅವರ ಆರ್ಥಿಕ ಪರಿಸ್ಥಿತಿಗೆ ಕೆಲವರು ಏನೂ ಮಾಡಲಾಗದೆ ಈ ನಿರ್ಧಾರ ಕೈಗೊಂಡಿದ್ದರು. ಈ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಿ, ಅಸ್ಥಿ ವಿಸರ್ಜನೆ ಮಾಡಲು ಅರ್ಜುನ್ ಗೌಡ ಕಾಶಿಗೆ ತೆರಳಿದ್ದರು. ವಿಸರ್ಜನೆ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಶಿರಾದಲ್ಲಿ ದಂಪತಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಲಾಕ್‌ಡೌನ್ ಇದ್ದ ಕಾರಣ ಬೇರೆ ಊರುಗಳಿಂದ ಸಂಬಂಧಿಕರು ಅವರ ಮಕ್ಕಳನ್ನು ಕರೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಈ ವೇಳೆ ಅರ್ಜುನ್ ಗೌಡ ಬೆಂಗಳೂರಿನಿಂದ ಶಿರಾಗೆ ತೆರಳಿ, ಮಕ್ಕಳನ್ನು ಕರೆದುಕೊಂಡು ಹೋಗಿ ಸಂಬಂಧಿಕರ ಮನೆ ತಲುಪಿಸಿದ್ದಾರೆ. ಇಂಥ ಸಂಕಷ್ಟ ಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಜನ ಸೇವೆಗೆ ಮುಂದಾಗಿರುವ ಅರ್ಜುನ್‌ಗೆ ಒಳ್ಳೇಯದಾಗಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.