ಓದಿನ ಕಡೆ ಗಮನವಿಲ್ಲ ಕಡಿಮೆ ಅಂಕ ಪಡೆದು ಹೊಡೆಸಿಕೊಳ್ಳುತ್ತಾನೆ: ಮಗನ ಭವಿಷ್ಯದ ಬಗ್ಗೆ ರವಿಶಂಕರ್ ಮಾತು!

By Vaishnavi Chandrashekar  |  First Published Jan 18, 2024, 4:07 PM IST

ಮಕ್ಕಳ ಆಸಕ್ತಿ ಬಗ್ಗೆ ಮಾತನಾಡಿದ ರವಿಶಂಕರ್ ಗೌಡ..ಹಿರಿಮಗ ನಿರ್ದೇಶಕನಾಗಬೇಕು ಅಂತಾನೇ ಇರ್ತಾನಂತೆ. 


ಡಾಕ್ಟರ್ ವಿಠಲ್ ರಾವ್‌ ಫೇಮ್‌ ಇನ್‌ ಸರ್ಜರಿ ಆಂಡ್ ಭರ್ಜರಿ ಅನ್ನೋ ಡೈಲಾಗ್‌ ಕೇಳಿದ ಕ್ಷಣ ಮೊದಲು ನೆನಪಾಗುವುದು ನಟ ರವಿಶಂಕರ್ ಗೌಡ. ಸಣ್ಣ ಪುಟ್ಟ ಕಾಮಿಡಿ ಪಾತ್ರಗಳನ್ನು ಮಾಡುತ್ತಾ ಸಿನಿ ರಸಿಕರ ಗಮನ ಸೆಳೆದು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಮಿಂಚುತ್ತಿರುವ ರವಿ  ಮಕ್ಕಳು ಕೂಡ ಸಿನಿಮಾರಂಗದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಹಿರಿಯ ಪುತ್ರ ಈಗಾಗಲೆ ಗುರು ಶಿಷ್ಯರು ಚಿತ್ರದ ಮೂಲಕ ಬಣ್ಣ ಹಚ್ಚಿದಲ್ಲದೆ ಈಗಲೇ ನಿರ್ದೇಶನದ ಕಡೆ ಆಸಕ್ತಿ ತೋರಿಸುತ್ತಿರುವುದಾಗಿ ರವಿಶಂಕರ್ ಮಾತುಗಳನ್ನು ಹಂಚಿಕೊಂಡಿದ್ದಾರೆ.

'ಕಿರಿಮಗನಿಗೆ ಯಾವುದರಲ್ಲಿ ಇಂಟ್ರೆಸ್ಟ್‌ ಇದೆ ಎಂದು ಹೊತ್ತಿಲ್ಲ. ಹಿರಿ ಮಗ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ, ಮೊನ್ನೆ ರವಿಚಂದ್ರನ್‌ ಅವರ ಜಡ್ಜ್‌ಮೆಂಟ್ ಸಿನಿಮಾದಲ್ಲಿ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಡಬ್ಬಿಂಗ್ ಮುಗಿಸಿದ್ದಾನೆ. ಈಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ ಆದರೂ ಓದಿನ ಕಡೆ ಗಮನ ಇಲ್ಲ. ಏಕೆಂದರೆ ಅವನಿಗೆ ಆಕ್ಟರ್ ಆಗಬೇಕು ಡೈರೆಕ್ಟರ್ ಆಗಬೇಕು ಅನ್ನೋ ಆಸೆ. ನನ್ನಂತೆ ಆಕ್ಟರ್ ಆಗಬೇಕು ಅನ್ನೋದಕ್ಕಿಂತ ಹೆಚ್ಚಾಗಿ ನಿರ್ದೇಶಕನಾಗಬೇಕು ಅನ್ನೋದು ಅವನ ಇಂಟ್ರೆಸ್ಟ್‌. ಸದಾ ನಾನು ಡೈರೆಕ್ಟರ್ ಆಗಬೇಕು ಡೈರೆಕ್ಟರ್ ಆಗಬೇಕು ಅಂತ ಹೇಳುತ್ತಲೇ ಇರುತ್ತಾನೆ' ಎಂದು ರವಿಶಂಕರ್ ಗೌಡ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Tap to resize

Latest Videos

ಡಾಕ್ಟರ್‌ ವಿಠಲ್‌ ರಾವ್‌ ಕೈಯಲ್ಲಿ ಕತ್ತರಿ; ಮಗನಿಗೆ ಮಾಡಿದ ಹೇರ್‌ಕಟ್ ನೋಡಿ!

'ಮಗನಿಗೆ ಈಗಾಗಲೆ ಸಾಕಷ್ಟು ಆಫರ್‌ಗಳು ಬರುತ್ತಿದೆ, ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ನಾವು ಸದ್ಯಕ್ಕೆ ಎಲ್ಲೂ ಹೆಚ್ಚಿಗೆ ಕಳುಹಿಸುತ್ತಿಲ್ಲ. ಕೆಲವು ದಿನಗಳ ಹಿಂದೆ ಸಲಾರ್ ಚಿತ್ರದಲ್ಲಿ ನಟ ಸುಕುಮಾರ್‌ ಅವರ ಬಾಲ್ಯದ ಹುಡುಗನ ಕನ್ನಡದ ಧ್ವನಿಗೆ ನನ್ನ ಮಗ ಡಬ್ಬಿಂಗ್ ಮಾಡಿ ಬಂದ. ರವಿ ಮಗ ಸಖತ್ ಆಗಿ ಡಬ್ಬಿಂಗ್ ಮಾಡುತ್ತಾರೆ ಅಂತ ಪ್ರೊಡಕ್ಷನ್ ಮ್ಯಾನೇಜರ್ ಬಾಬಣ್ಣ ಅವರಿಗೆ ಯಾರೋ ಹೇಳಿದ್ದರಂತೆ. ಹೀಗಾಗಿ ನಾನು ಕಳುಹಿಸಿಕೊಟ್ಟೆ. ಹೊಂಬಾಳೆ ನಮ್ಮ ಸಂಸ್ಥೆ ರೀತಿ ಕಳುಹಿಸಿಲ್ಲ ಅಂದ್ರೆ ಚೆನ್ನಾಗಿರಲ್ಲ ಅಂತ. ಮಗ ಓದುವುದರಲ್ಲಿ ವೀಕ್...ಕಡಿಮೆ ಮಾರ್ಕ್ಸ್ ಪಡೆದು ಅಮ್ಮನ ಕೈಯಲ್ಲಿ ಬೈಯಿಸಿಕೊಳ್ಳುತ್ತಾನೆ. ಆಗಾಗ ಬುದ್ಧಿ ಮಾತುಗಳನ್ನು ಹೇಳುತ್ತೀನಿ. ನಾನು ಏನೂ ಹೇಳಿಕೊಡಲ್ಲ....ಅವನು ಅಷ್ಟು ಚೆನ್ನಾಗಿ ನಟಿಸುತ್ತಾನೆ ಎಂದು ಗುರು ಸರ್ ಹೇಳಿದ್ದರು. ಅವನಿಗೆ ಇಂಟ್ರೆಸ್ಟ್‌ ಇರುವ ಕಾರಣ ಅವನೇ ಆಸಕ್ತಿಯಿಂದ ಕೆಲಸ ಮಾಡುತ್ತಾನೆ' ಎಂದು ರವಿಶಂಕರ್ ಹೇಳಿದ್ದಾರೆ. 

click me!