Ek Love Ya ಪೈರಸಿ, ನಿರ್ದೇಶಕ ಜೋಗಿ ಪ್ರೇಮ್ ಮೊದಲ ರಿಯಾಕ್ಷನ್..

Suvarna News   | Asianet News
Published : Feb 27, 2022, 01:09 PM IST
Ek Love Ya ಪೈರಸಿ, ನಿರ್ದೇಶಕ ಜೋಗಿ ಪ್ರೇಮ್ ಮೊದಲ ರಿಯಾಕ್ಷನ್..

ಸಾರಾಂಶ

ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದೆ ಏಕ್ ಲವ್ ಯಾ ಸಿನಿಮಾ. ಪೈರಸಿ ಮಾಡುತ್ತಿರುವವರಿಗೆ ಪ್ರೀತಿಯಿಂದಲೇ ಬುದ್ಧಿ ಹೇಳಿದ ಸ್ಯಾಂಡಲ್‌ವುಡ್ ನಿರ್ದೇಶಕ.....

ಕನ್ನಡ ಚಿತ್ರರಂದಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಿರ್ದೇಶಕರು ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲಿಯೂ ನಿರ್ದೇಶಕ ಜೋಗಿ ಪ್ರೇಮ್ ಏಕ್ ಲವ್ ಯಾ (Ek Love Ya) ಚಿತ್ರದ ಮೂಲಕ ಬಾ-ಮೈದನ ರಾಣಾನನ್ನು (Raana) ಪರಿಚಯಿಸಿಕೊಟ್ಟಿದ್ದಾರೆ. ಫ್ರೆಶ್ ಫೇಸ್‌ ರೇಶ್ಮಾ (Reeshma) ಅಭಿನಯವೂ ಅದ್ಭುತವಾಗಿದೆ. ಅರ್ಜುನ್ ಜನ್ಯಾ (Arjun Janya) ಸಂಗೀತ ಇಡೀ ಚಿತ್ರದ ಔಟ್‌ಲುಕ್ ಬದಲಾಯಿಸಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ವೇಳೆ ಕೆಲವು ಕಿಡಿಗೇಡಿಗಳು ಪೈರಸಿ ಮಾಡಿದ್ದಾರೆ. ಇಡೀ ತಂಡದ ಜೊತೆ ಮೊಬೈಲ್‌ನಲ್ಲಿ ಲೈವ್‌ ಬಂದಿದ್ದ ಪ್ರೇಮ್‌ ಕೊಟ್ಟ ಮೊದಲ ರಿಯಾಕ್ಷನ್ ಇದು.

ಜೋಗಿ ಪ್ರೇಮ್ Ek Love Ya ತಂದ ಪ್ರೇಮಕಾವ್ಯ!

ಪ್ರೇಮ್ ಮಾತು:
'ಎಲ್ಲರೂ ಬಂದು ಥಿಯೇಟರ್‌ನಲ್ಲಿ ಸಿನಿಮಾ ನೋಡಿ. ಇದು ನಮ್ಮ ರಿಕ್ವೆಸ್ಟ್‌. ಯಾರಾದರೂ ಫೇಸ್‌ಬುಕ್‌ (Facebook), ಯುಟ್ಯೂಬ್‌ (Youtube) ಅಥವಾ ಇನ್‌ಸ್ಟಾದಲ್ಲಿ (Instagram) ವಿಡಿಯೋ ಅಪ್ಲೋಡ್ ಮಾಡಿದ್ದರೆ ದಯವಿಟ್ಟು ಅವರಿಗೆ ಹೇಳಿ ಮಾಡಬೇಡಿ ಎಂದು. ಇದು ಕನ್ನಡ ಸಿನಿಮಾ ನನ್ನ ಸಿನಿಮಾ..ಏಕ್‌ ಲವ್‌ ಯಾ ಅಂತಲ್ಲ. ಕನ್ನಡ ಸಿನಿಮಾ ಅಂದ್ರೆ ಎಲ್ಲಾ ಕನ್ನಡಿಗರ ಸಿನಿಮಾ. ದಯವಿಟ್ಟು ಯಾರೂ ಪೈರೆಸಿ (Piracy) ಮಾಡೋದು, ಬೇರೆ ಬೇರೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಪ್ಲೋಡ್ ಮಾಡೋದು ಮಾಡಬೇಡಿ. ಯಾರಾದಾರೂ ಮಾಡಿದ್ದರೆ ನೀವೇ ದಯವಿಟ್ಟು ಬುದ್ಧಿವಾದ ಹೇಳಿ. ಪ್ಲೀಸ್ ಕನ್ನಡ ಸಿನಿಮಾ ಉಳಿಸಿ ಹಾಗೆ ಬೆಳಸಿ,' ಎಂದು ನಿರ್ದೇಶಕ ಪ್ರೇಮ್ (Jogi Prem) ಮಾತನಾಡಿದ್ದಾರೆ. 

'ಇಷ್ಟು ಚಂದ ಹೊಸ ಹುಡುಗರನ್ನ, ರಾಣಾ ಮತ್ತು ರೇಶ್ಮಾನ ಚೆನ್ನಾಗಿ ಒಪ್ಪಿಕೊಂಡು ಪ್ರೀತಿಯಿಂದ ಬರ ಮಾಡಿಕೊಂಡಿದ್ದೀರಿ. ಹಾಡುಗಳನ್ನು ಬಿಗ್ ಹಿಟ್ ಮಾಡಿದ್ದೀರಿ. ಮಿಲಿಯನ್‌ ಗಟ್ಟಲೆ ನೋಡಿದ್ದೀರಾ 300 ಮಿಲಿಯನ್‌ ಮೇಲೆ ರೀಲ್ಸ್‌ (Insta Reels) ಮಾಡಿದ್ದೀರಾ. ಅವರಿಗೆಲ್ಲಾ ಥ್ಯಾಂಕ್ಸ್ ಹೇಳ್ತೀನಿ. ಈ ಸಲ ನಾನು ಸಿನಿಮಾವನ್ನು ಅಷ್ಟು ಪಬ್ಲಿಸಿಟಿ ಮಾಡೋಕೆ ಹೋಗಿಲ್ಲ. ಬೇರೆ ಬೇರೆ ರೀತಿಯಲ್ಲಿ ಫ್ಲಾಟ್‌ಫಾರ್ಮ್‌‌ಗಳನ್ನು ಬಳಸಿಲ್ಲ. ಎಲ್ಲಾ ನೀವೇ ಮಾಡಿದ್ದೀರಿ. ಪ್ರೇಮ್‌ನ ಮೇಲೆ ಅಷ್ಟು ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆನ ನಾನು ಉಳಿಸಿಕೊಂಡಿದ್ದೀನಿ ಅಂದುಕೊಂಡಿದ್ದೀನೆ. ಪ್ರತಿಯೊಬ್ಬರು ಪ್ರೇಮ್ ಸಿನಿಮಾ ಇಷ್ಟ ಪಟ್ಟಿದ್ದೀರಿ. ಫ್ಯಾಮಿಲಿ ಮಕ್ಕಳು ಎಲ್ಲರೂ ಕೂಡ ಸಿನಿಮಾ ನೋಡಬಹುದು, ಸಂಗೀತದ ರಸದೌತಣ ಎಂಜಾಯ್ ಮಾಡುವವರಿಗೆ ಒಳ್ಳೆಯ ಸಂಗೀತ ಇದೆ, ಫೋಟೋಗ್ರಾಫಿ (Photography) ಇಷ್ಟ ಪಡುವವರಿಗೆ ಕಣ್ಣಿಗೆ ಒಂದು ಹಬ್ಬ ಇದೆ,' ಎಂದು ಪ್ರೇಮ್ ಹೇಳಿದ್ದಾರೆ. 

ಎಲ್ಲರೂ ಪದೇ ಪದೇ ಪ್ರೇಮ್‌ ಹೆಸರೇಳಲು ಕಾರಣ ಬಿಚ್ಚಿಟ್ಟ Rachita Ram!

'ಹೊಸ ಹುಡುಗರು ಅಂದಾಕ್ಷಣ ಹೇಗ್‌ ಮಾಡಿರುತ್ತಾರೋ ಏನೋ ಅನ್ನುವುದಲ್ಲ. ತುಂಬಾ ಚೆನ್ನಾಗಿ ಆ್ಯಕ್ಟಿಂಗ್ ಮಾಡಿದ್ದಾರೆ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇತ್ತೀಚಿಗೆ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗಳು ಡೆಲ್ಲಿ (Delhi), ಹೈದರಾಬಾದ್ (Hyderabad) ಘಟನೆಗಳು ಸೇರಿವೆ. ಪ್ರೀತಿ ಅಂದ್ರೆ ಬೆಲೆ ಕೊಡಿ, ಹೆಣ್ಣಿಗೆ ಗೌರವ ಕೊಡಿ, ಹೆಣ್ಣಿಗೆ ತಿಳಿಯದಂತೆ ಆಕೆಗೆ ಏನೂ ಮಾಡಬೇಡಿ. ಪೈರಸಿ ಮಾತ್ರ ಮಾಡಬೇಡಿ ದಮ್ಮಯ್ಯ ಅಂತಿನಿ ಕಣೋ,' ಎಂದಿದ್ದಾರೆ ಪ್ರೇಮ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?