ಸನ್ನಿವೇಶವನ್ನು ಸ್ವಾಗತಿಸಿ, ಪಾಸಿಟಿವ್‌ ಆಗಿರಿ : ರಮೇಶ್‌ ಅರವಿಂದ್‌

By Kannadaprabha NewsFirst Published Apr 8, 2020, 9:57 AM IST
Highlights

ರಮೇಶ್‌ ಅರವಿಂದ್‌ ಅವರ ಒಂದೊಂದು ನುಡಿಯಲ್ಲೂ ಸ್ಪೂರ್ತಿಯ ಒರತೆಯಿದೆ. ಲಾಕ್‌ಡೌನ್‌ ಟೈಮ್‌ಅನ್ನು ಹೇಗೆ ಸ್ವೀಕರಿಸಿದರೆ ಹ್ಯಾಪಿಯಾಗಿರ್ತೀವಿ, ಈ ಸಮಯದ ಸದ್ಭಳಕೆ ಹೇಗೆ ಅನ್ನೋ ಬಗೆಗೆಲ್ಲ ಇಲ್ಲಿ ಮಾತನಾಡಿದ್ದಾರೆ.

ರಮೇಶ್‌ ಅರವಿಂದ್‌ ಅವರ ಒಂದೊಂದು ನುಡಿಯಲ್ಲೂ ಸ್ಪೂರ್ತಿಯ ಒರತೆಯಿದೆ. ಲಾಕ್‌ಡೌನ್‌ ಟೈಮ್‌ಅನ್ನು ಹೇಗೆ ಸ್ವೀಕರಿಸಿದರೆ ಹ್ಯಾಪಿಯಾಗಿರ್ತೀವಿ, ಈ ಸಮಯದ ಸದ್ಭಳಕೆ ಹೇಗೆ ಅನ್ನೋ ಬಗೆಗೆಲ್ಲ ಇಲ್ಲಿ ಮಾತನಾಡಿದ್ದಾರೆ.

- ನಿಮ್ಮ ಪ್ರಕಾರ ಕೊರೋನಾ ಟೈಮ್‌ನ ವಿಲನ್‌ಗಳು ಯಾರು?

1. ಪರಿಸ್ಥಿತಿ.

ಯಾವ ವಿಷಯಕ್ಕಾದರೂ ಸರಿ ಶತ್ರುವಾಗೋದು ಇದುವೇ. ನಿಮ್ಮ ನಡವಳಿಕೆಯನ್ನು ನಿರ್ಧಾರ ಮಾಡೋದೂ ಪರಿಸ್ಥಿತಿಯೇ. ಉದಾಹರಣೆಗೆ ನಿಮ್ಮ ಎದುರಿಗೊಬ್ಬ ಬಂದು ತಲೆ ಮೇಲೆ ಗನ್‌ ಇಟ್ಟು ಮಾತಾಡುತ್ತಿದ್ದರೆ ನಿಮ್ಮ ನಡವಳಿಕೆ ಬೇರೆ ಇರುತ್ತೆ. ಒಬ್ಬ ಪ್ರೀತಿಯಿಂದ ಬಂದು ಬೊಕ್ಕೆ ಕೊಟ್ಟು ಮಾತಾಡಿಸಿದರೆ ನಿಮ್ಮ ನಡವಳಿಕೆ ಬೇರೆಯೇ ಇರುತ್ತೆ. ಈಗ

ಸುತ್ತಮುತ್ತಲಿನ ವಿಷಯಗಳು ನಿಮ್ಮ ಜೊತೆಗೆ ಆಟ ಆಡುತ್ತವೆ. ಈ ಥರದ ಒತ್ತಡ ಬಂದಾಗ ನಿಮಗೆ ನೀವೇ ಶತ್ರುಗಳಾಗುವ ಹಾಗೆ ಮಾಡೋದೂ ಪರಿಸ್ಥಿತಿಯೇ.

ಲಾಕ್ ಡೌನ್ ನಡುವೆ ಬೆಂಕಿ ಹಚ್ಚಿದ ಕೆಜಿಎಫ್ ಬೆಡಗಿ, ಅಬ್ಬಾಬ್ಬಾ ಏನ್ ಬೋಲ್ಡ್ ಗುರು!

2. ಅಭ್ಯಾಸ

ಮನೆಯೊಳಗೇ ಇದ್ದು ನಿಮಗೆ ಅಭ್ಯಾಸ ಇಲ್ಲ. ಮೂರ್ಹೊತ್ತೂ ಕೆಲಸ ಮಾಡಿಯೇ ಅಭ್ಯಾಸ. ಹಾಗಾಗಿ ಏಕಾಏಕಿ ಎದುರಾದ ಇಂದಿನ ಸ್ಥಿತಿ ಶತ್ರುವಾಗ್ತಿದೆ. ನಮ್ಮಮ್ಮ ಮನೆ ಬಿಟ್ಟು ಆಚೆ ಬರೋದೇ ಕಡಿಮೆ.ಅವರಿಗಿದು ಸಮಸ್ಯೆಯೇ ಅಲ್ಲ. ಲೈಫ್‌ನಲ್ಲಿ ಪ್ಲಸ್‌ ಪಾಯಿಂಟ್‌ ಆಗೋದೂ ಅಭ್ಯಾಸಗಳೇ.

- ಈ ವಿಲನ್‌ ಮಣಿಸಿ ಹೀರೋಗಳಾಗೋದು ಹೇಗೆ?

1. ನನ್ನ ಮಾವ ನಂಗೊಂದು ಅದ್ಭುತವಾದ ಮಾತು ಹೇಳ್ತಾ ಇದ್ರು. ‘ವೆನ್‌ ಯೂ ಡು ಸಮ್‌ಥಿಂಗ್‌ ಅಂಡರ್‌ ಕಂಪಲ್ಶನ್‌ ಡು ಇಟ್‌ ಗ್ರೇಸ್‌ಫುಲೀ’ ಅಂತ. ನೀವು ಈ ಕೆಲಸ ಮಾಡಲೇ ಬೇಕು. ಬೇರೆ ದಾರಿಯೇ ಇಲ್ಲ ಅಂದಾಗ ಆ ಸನ್ನಿವೇಶವನ್ನು ಸ್ವಾಗತಿಸಿ. ಮಾಡಬೇಕಾದ್ದನ್ನು ಸಂಪೂರ್ಣ ಸ್ವೀಕಾರ ಮಾಡಿ ಮಾಡಿ. ಅದರ ಜೊತೆಗೆ ಒದ್ದಾಡಬೇಡಿ, ಗುದ್ದಾಡಬೇಡಿ. ಗುದ್ದಾಡೋದರಲ್ಲಿ ಅರ್ಥ ಇಲ್ಲ. ನೀವು ಹೀರೋಗಳಾಗಬೇಕಾದರೆ ಮಾಡಬೇಕಾದ ಮೊದಲ ಸ್ಟೆಪ್‌ ಇರೋದನ್ನು ಇದ್ದ ಹಾಗೆ ಸ್ವೀಕರಿಸೋದು.

2. ಪಾಸಿಟಿವ್‌ ಆಗಿ ನೋಡಿ. ನೀವು ನೋಡೋ ದೃಷ್ಟಿಕೋನ ಬಹಳ ಮುಖ್ಯ ಆಗುತ್ತೆ. ನಾಜಿ ಕಾನ್ಸಟ್ರೇಶನ್‌ ಕ್ಯಾಂಪ್‌ನಲ್ಲಿ ಹಿಟ್ಲರ್‌ ಕೊಡ್ತಿದ್ದ ಆ ಟಾರ್ಚರ್‌ನಲ್ಲೂ ಕೆಲವರು ಅದ್ಭುತವಾದ ಕೆಲಸ ಮಾಡಿದ್ದಾರೆ. ಕಾರಣ ಅವರ ಪಾಸಿಟಿವ್‌ ದೃಷ್ಟಿಕೋನ.

3. ಕರೆಕ್ಷನ್‌ಗಳಿಗೆ ಭಯ ಪಡಬೇಡಿ. ವಯಸ್ಸು ನಲವತ್ತಾದಾಗ ಪುಸ್ತಕ ಓದಲಿಕ್ಕಾಗಲ್ಲ. ಆಗ ಕನ್ನಡಕ ಹಾಕಿ ನೋಡಿದ್ರೆ ಮತ್ತೆ ಅದೇ ಸ್ಪಷ್ಟಅಕ್ಷರ, ನಿಖರ ಜಗತ್ತು. ನಾನು ಒಂಭತ್ತನೇ ಕ್ಲಾಸ್‌ನಲ್ಲಿದ್ದಾಗ ಬೋರ್ಡ್‌ ಮೇಲೆ ಬರೆದದ್ದು ಮಸುಕಾಗಿ ಕಾಣ್ತಿತ್ತು. ಟೆಸ್ಟ್‌ ಮಾಡಿಸಿ ಮೈನಸ್‌ 2.5 ಪವರ್‌ ಗ್ಲಾಸ್‌ ಹಾಕಿಕೊಂಡೆ. ಆ ಸೂಕ್ಷ್ಮ ಕರೆಕ್ಷನ್‌ನಿಂದ ಮತ್ತೆ ಬೋರ್ಡ್‌ ಸ್ಪಷ್ಟವಾಗಿ ಕಾಣತೊಡಗಿತು. ಈಗಿನ ಪರಿಸ್ಥಿತಿಯಲ್ಲೂ ಅಂಥಾ ಸಣ್ಣದೊಂದು ಅಡ್ಜೆಸ್ಟ್‌ಮೆಂಟ್‌ ಬೇಕು. ಅದನ್ನು ಮಾಡದೇ ಹೋದರೆ ಕನ್ನಡಕವಿಲ್ಲದ ಮಂಜು ದೃಶ್ಯಗಳೇ ಕಾಣುತ್ತವೆ. ಲೈಫ್‌ನಲ್ಲಿ ಏನನ್ನೂ ಓದಲಿಕ್ಕಾಗಲ್ಲ.

ಪ್ರೀತಿಯಲ್ಲಿ ಬಿದ್ದು ಎರಡನೇ ಹೆಂಡತಿಯಾದ ಬಾಲಿವುಡ್‌ ಬೆಡಗಿಯರಿವರು!

- ನೀವು ಹೇಳಿದ ಮಾತುಗಳನ್ನು ಅಳವಡಿಸಿಕೊಳ್ಳೋದಕ್ಕೆ ನಿಮ್ಮಿಂದಾಗಿದೆಯಾ?

ಖಂಡಿತಾ. ನನ್ನ ಅನುಭವವನ್ನೇ ಇಲ್ಲಿ ಹೇಳಿರೋದು. ಈವರೆಗೆ ಮಾಡಲಿಕ್ಕಾಗದ್ದನ್ನೆಲ್ಲ ಮಾಡ್ತಾ ಕ್ಷಣ ಕ್ಷಣವನ್ನೂ ಖುಷಿಯಲ್ಲಿ ಕಳೆಯುತ್ತಿದ್ದೇನೆ. ನಾನು ಎಲ್ಲರಿಗೂ ಅದನ್ನೇ ಹೇಳ್ತಿದ್ದೀನಿ. ಇಷ್ಟುದಿನ ಆ ಸಿನಿಮಾ ಅಷ್ಟುಚೆನ್ನಾಗಿದೆ, ಯಾಕೆ ನೋಡಿಲ್ಲ ಗುರೂ ಅಂದ್ರೆ, ಏ ಟೈಮೇ ಸಿಕ್ಕಿಲ್ಲ ಅಂತಿದ್ರಲ್ಲಾ, ಈಗ ಟೈಮ್‌ ಸಿಕ್ಕಿದ್ಯಲ್ಲಾ. ಬುಕ್‌ ಓಡಲಿಕ್ಕೆ, ಎಕ್ಸರ್‌ಸೈಸ್‌ ಮಾಡ್ಲಿಕ್ಕೆ ಎಲ್ಲಿದೆ ಗುರೂ ಟೈಮ್‌ ಅಂತಿದ್ರಲ್ಲಾ ಈಗ ಸಮಯ ಕೊಟ್ಟಿದ್ಯಲ್ಲಾ. ಗಂಡ ನಂಗೆ ಟೈಮೇ ಕೊಡಲ್ಲ ಅಂತಿದ್ರಲ್ಲಾ, ಈಗ ಅವ್ನು ನಿಮ್ಮ ಜೊತೆಗೇ ಇರ್ತಾನಲ್ಲ.

- ಆದ್ರೆ ಗಂಡ ಹೆಂಡತಿ ಜಗಳವೂ ಏರ್ತಿದೆಯಲ್ಲಾ ಸಾರ್‌?

ನೆಗೆಟಿವ್‌ ಕಡೆ ಹೋದ್ರೆ ಹೀಗೇ ಆಗೋದು, ಅದಕ್ಕೊಂದು ಕೊನೆ ಇರಲ್ಲ. ಹೆಂಡತಿ ಮಕ್ಕಳ ಜೊತೆಗೆ ಸಿಕ್ಕ ಸಮಯದಲ್ಲಿ ನಿರಾಳವಾಗಿ, ಸಮಾಧಾನದಿಂದ ನಡ್ಕೊಳ್ತಿದ್ರೆ ಎಲ್ಲೂ ಮಿಸ್‌ ಆಗಿರುವ ಲಿಂಕು ಮತ್ತೆ ಕೂಡಿಕೊಳ್ಳುತ್ತೆ. ಕಷ್ಟಆಗ್ತಿದೆ ಗೊತ್ತು.

ಗಂಡ ಆಫೀಸ್‌ಗೆ ಹೋದ ಮೇಲೆ ನೀವು ನಿಮ್ಮಿಷ್ಟದ ಸೀರಿಯಲ್‌ ನೋಡ್ತಾ ಕಳೆಯುತ್ತಿದ್ದಿರಿ, ಈಗ ಅದಾಗ್ತಿಲ್ಲ, ಗೊತ್ತು. ಮಕ್ಕಳಿಗೂ ಆಟ ಆಡಕ್ಕಾಗ್ತಿಲ್ಲ. ಆದರೆ ಇದು ಜೈಲ್‌ ಅಲ್ಲ. ಹೊರಗೆ ಬಂದರೇ ಸತ್ತು ಹೋಗ್ತಿರ್ರೀ ನೀವು.. ನೀವಿದನ್ನು ವಿಶಾಲವಾಗಿ ನೋಡಿದಾಗ ಈ ತ್ಯಾಗ ಅನಿವಾರ್ಯ ಅನ್ನೋದು ಅರ್ಥ ಆಗುತ್ತೆ.

- ಈಗ ಹೀಗೆ ಮನೆಯಲ್ಲಿ ಕೂತಿರುವವರಿಗೆ ನೀವು ಸಜೆಸ್ಟ್‌ ಮಾಡುವ ಬೆಸ್ಟ್‌ ಸಿನಿಮಾಗಳು?

ಬೂತಯ್ಯನ ಮಗ ಅಯ್ಯು, ಅಪರಿಚಿತ, ಹಿಂದಿಯಲ್ಲಿ ಲಗಾನ್‌, ಚಕ್‌ ದೇ, ತಮಿಳಿನಲ್ಲಿ ನಾಯಗನ್‌, ತೆಲುಗಿನಲ್ಲಿ ಹಳೇ ಮಾಯಾ ಬಜಾರು, ಇಂಗ್ಲೀಷ್‌ನಲ್ಲಿ ಯುರೋಪಿಯನ್‌ ಸಿನಿಮಾ ಸೆಕ್ಷನ್‌ ಹೋದ್ರಂತೂ ಕೇಳೋದೇ ಬೇಡ. ಹಾಗಂತ ಇಡೀ ದಿನ ಚಿತ್ರ ನೋಡಬೇಡಿ. ಅಂಥಾ ಸಮಯ ಅಲ್ಲ ಇದು. ಇದರ ಹೊರತಾಗಿ ಕಳೆಯಲಿಕ್ಕೆ ಇದೊಂದು ಅದ್ಭುತ ಅವಕಾಶ. ಈ ಸಿನಿಮಾಗಳನ್ನು  ಬಸ್‌ನಲ್ಲಿ ಹೋಗ್ತಿದ್ದಾಗಲೂ ನೋಡಬಹುದು.

ಆನ್‌ಲೈನ್‌, ನ್ಯೂಸ್‌, ಟಿವಿ ಅಂತನೂ ಇಡೀ ದಿನದ ಟೈಮ್‌ ವೇಸ್ಟ್‌ ಮಾಡಬೇಡಿ. ಏಕಾಗ್ರತೆಯಿಂದ ಮಾಡಬೇಕಾದ ಕೆಲವು ಕೆಲಸಗಳಿವೆ. ನಿಮ್ಮ ಬೆಳವಣಿಗೆಗೆ ಅವಶ್ಯವಾಗಿರುವ ಏನನ್ನೋ ಕಲಿಯೋದಕ್ಕೆ ಇದು ಸುವರ್ಣಾವಕಾಶ. ದಿನದಲ್ಲಿ ಅರ್ಧ ಗಂಟೆ, ಒಂದು ಗಂಟೆ ಅದಕ್ಕೆ ಸಮಯ ಕೊಡಿ. ನಾನು ನೆಕ್ಸ್ಟ್‌ಲೆವೆಲ್‌ ಗೆ ಹೋಗೋದಕ್ಕೆ ಏನು ಹೆಲ್ಪ್‌ ಆಗುತ್ತೆ ಅದನ್ನು ದಯವಿಟ್ಟು ಕಲಿಯಿರಿ. ಬೆಸ್ಟ್‌ ಆಗಿ ಹೊರಬನ್ನಿ.

- ಹೇಗಿರುತ್ತೆ ನಿಮ್ಮ ದಿನಚರಿ?

ಲಾಕ್‌ಡೌನ್‌ ಟೈಮ್‌ ಅಂತ ನಾನೇನೂ ಹತ್ತು ಗಂಟೆಗೆ ಏಳ್ತಿಲ್ಲ. ಹಿಂದಿನಂತೆ ಆರೂಕಾಲಿಗೇ ಏಳ್ತೀನಿ. ಬೆಳಗಿನ ಒಂದೂವರೆ ಗಂಟೆ ನನ್ನ ಟೈಮು. ಅದನ್ನು ಓದಿಗೆ, ಎಕ್ಸರ್‌ಸೈಸ್‌ ಅಂತ ಇಟ್ಕೊಂಡಿದ್ದೀನಿ. ಆದರೆ ಮೊದಲು ಬೆಳಗ್ಗೆ ಎಂಟಕ್ಕೆಲ್ಲ ಮೇಕಪ್‌ ಮುಗಿಸಿ ಶೂಟಿಂಗ್‌ಗೆ ಹೋಗ್ತಿದ್ದೆ. ಮತ್ತೆ ಬರ್ತಿದ್ದದ್ದು ರಾತ್ರಿ ಎಂಟಕ್ಕೇ. ಈಗ ಆ ಟೈಮ್‌ ಸಿಕ್ಕಿದೆ. ನನಗೆ ಕಾಮರ್ಸ್‌ ಬಗ್ಗೆ ಬಹಳ ಆಸಕ್ತಿ. ಅಕೌಂಟ್‌, ಡೆಬಿಟ್‌, ಕ್ರೆಡಿಟ್‌, ಬ್ಯಾಲೆನ್ಸ್‌ ಶೀಟ್‌ ಅಂದರೇನು, ಟ್ಯಾಕ್ಸ್‌ ಅಂದರೇನು ಅನ್ನೋದರ ಗೊತ್ತಿರಲಿಲ್ಲ. ಈಗ ಕಲೀತಿದ್ದೇನೆ.

ನಾನು ಸೈನ್ಸ್‌ ವಿದ್ಯಾರ್ಥಿ. ಕಾಮರ್ಸ್‌ ಇಂದಿಗೆ ಅತ್ಯಗತ್ಯ. ಇದನ್ನು ಸ್ಕೂಲ್‌ನಲ್ಲೇ ಹೇಳಿಕೊಡ್ಬೇಕು. ಹಾಗೇ ಸಿನಿಮಾದಲ್ಲಿ ವಿಎಸ್‌ಎಕ್ಸ್‌ ಪ್ರೊಸೆಸ್‌, ಸಿಸ್ಟಮ್‌ ಬಗ್ಗೆ ಕಲೀತಿದ್ದೀನಿ. ಇದು ಬಹಳ ನನ್ನನ್ನು ಸೆಳೆಯುತ್ತಿದೆ. ಶಿವಾಜಿ ಸುರತ್ಕಲ್‌ 2 ಹೇಗೆ ಮಾಡಬಹುದು ಅನ್ನುವ ಡಿಸ್ಕಶನ್‌ ನಡೀತಿದೆ.

ಹಿಂದೆಯೂ ನಾನು ಸುಮ್ಮನೇ ಕೂತಿರುತ್ತಿರಲಿಲ್ಲ. ಸ್ವಲ್ಪ ಸಮಯ ಸಿಕ್ಕರೂ ಬರೆಯುತ್ತಿದ್ದೆ. ಹಾಗೆ ಬರೆದಿಟ್ಟ ಸ್ಕ್ರಿಪ್ಟ್‌ಗಳನ್ನು ತಿರುವಿ ಹಾಕುತ್ತಿದ್ದೇನೆ. ನೀಟಾಗಿ ಸ್ಟೋರ್‌ ಮಾಡಿಡುತ್ತಿದ್ದೇನೆ. ಜೊತೆಗೆ ಮನೆಯಲ್ಲಿ ಹೆಂಡತಿ, ಮಗಳು ಮತ್ತು ನಾನು ಮೂರು ಊಟ ಜೊತೆಗೇ ಮಾಡ್ತಿದ್ದೀವಿ. ಮನೆ ಕೆಲಸದಲ್ಲಿ ನನ್ನಿಂದಾದ ಸಹಾಯ ಮಾಡ್ತಾ ಇದ್ದೀನಿ.

- ಪ್ರಿಯಾ ಕೇರ್ವಾಶೆ 

click me!