ಕೊನೆಗೂ ಸತ್ಯ ಬಯಲಾಯ್ತು ನಟಿ ಸೌಂದರ್ಯ ಹಾಗೂ ಜಗಪತಿ ಬಾಬು ಸಂಬಂಧ-ಅನುಬಂಧ

Suvarna News   | Asianet News
Published : Apr 07, 2020, 02:25 PM ISTUpdated : Apr 07, 2020, 04:08 PM IST
ಕೊನೆಗೂ ಸತ್ಯ ಬಯಲಾಯ್ತು ನಟಿ ಸೌಂದರ್ಯ ಹಾಗೂ ಜಗಪತಿ ಬಾಬು ಸಂಬಂಧ-ಅನುಬಂಧ

ಸಾರಾಂಶ

ಕನ್ನಡ ಚಿತ್ರರಂಗದ ಅಪ್ರತಿಮ ಸೌಂದರ್ಯವತಿ  ಹಾಗೂ ಅದ್ಭುತ ನಟಿ ಸೌಂದರ್ಯ ಅಗಲಿ 16 ವರ್ಷಗಳೇ ಕಳೆದರೂ ಆಕೆ ಹೊಂದಿದ್ದ ಸಂಬಂಧಗಳು, ಗಾಸಿಪ್‌ ಹಾಗೆಯೇ ಉಳಿದಿವೆ. ಆದರೆ ಅಂಥ ಗಾಳಿ ಸುದ್ದಿಗಳಿಗೆ ನಟ ಜಗಪತಿ ಬಾಬು ಈಗ ಬ್ರೇಕ್‌ ಹಾಕಿ, ಸ್ಪಷ್ಟನೆ ನೀಡ್ದಾರೆ.

ಮುದ್ದು ಮುಖದ ಚೆಲುವೆ ಸೌಂದರ್ಯ ತಮ್ಮ ನಟನೆ ಮೂಲಕ ಇಡೀ ದಕ್ಷಿಣ ಭಾರತ ಚಿತ್ರರಂಗದ ತಾರೆಯರ ಸ್ಫೂರ್ತಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ವಿಧಿ ಅವರನ್ನು 2004ರಲ್ಲಿ ನಡೆದ ವಿಮಾನ ದುರಂತದಲ್ಲಿ  ಇಹಲೋಕಕ್ಕೆ ಕರೆದೊಯ್ಯಿತು. ಅಂದಿನಿಂದ ಇಲ್ಲೀವರೆಗೂ ಸೌಂದರ್ಯ ನೆನಪು ಮಾತ್ರ ಜನಮಾನಸದಿಂದ ಮಾಸಿಲ್ಲ. 

'ರೈತು ಭಾರತಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸೌಂದರ್ಯ, ಖ್ಯಾತ ನಟ ಜಗಪತಿ ಬಾಬು ಜೊತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಈ ಬಾಂಧವ್ಯ ಚಿತ್ರರಂಗದಲ್ಲಿ ಅನೇಕ ಬಾರಿ ಗಾಸಿಪ್‌ಗಳನ್ನೂ ಸೃಷ್ಟಿಸಿತ್ತು. ಇಷ್ಟು ವರ್ಷಗಳ ಕಾಲ ನಾವು ಸ್ನೇಹಿತರು ಎಂದು ಹೇಳಿಕೊಂಡ ಓಡಾಡುತ್ತಿದ್ದ ಜಗಪತಿ ಬಾಬು, ಖಾಸಗಿ ಕಾರ್ಯಕ್ರಮವೊಂದರಲ್ಲ, ಸೌಂದರ್ಯ ಜೊತೆಗೆ ಇದ್ದ ಸಂಬಂಧದ ಬಗ್ಗೆ ಮಾತನಾಡಿ, ಗಾಳಿ ಮಾತುಗಳಿಗೆ ಬ್ರೇಕ್‌ ಹಾಕಿದ್ದಾರೆ.

ಸೌಂದರ್ಯ ಹಾಗೆ ಮಾಡದಿದ್ದರೆ ಇಂದು ನಮ್ಮೊಂದಿಗಿರುತ್ತಿದ್ದರು: ಏನದು ಘಟನೆ?

'ಸೌಂದರ್ಯ ಜೊತೆ ನನಗೆ ಉತ್ತಮ ಬಾಂಧವ್ಯವಿತ್ತು. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೆವು. ಸೌಂದರ್ಯ ಅವರ ಅಣ್ಣ ನನಗೆ ಸ್ನೇಹಿತ. ಈ ಕಾರಣಕ್ಕೆ ನಾನು ಅನೇಕ ಬಾರಿ ಅವರ ಮನೆಗೂ ಹೋಗಿದ್ದೇನೆ. ಜನರು ಆಕೆ ಬಗ್ಗೆ ತಪ್ಪಾಗಿ ಆರ್ಥ ಮಾಡಿಕೊಂಡಿದ್ದಾರೆ. ಆಕೆಯೊಂದಿಗಿನ ನನ್ನ ಸಂಬಂಧವನ್ನೂ ಯಾವತ್ತೂ ಸರಿಯಾಗಿ ನೋಡೇ ಇಲ್ಲ ಜನರು. ಜನರು ನಮ್ಮ ಬಗ್ಗೆ ಮಾತನಾಡುವಾಗಲೆಲ್ಲಾ ನಾವು ಅದನ್ನು ಕಾಂಪ್ಲಿಮೆಂಟ್‌ ಆಗಿ ಸ್ವೀಕರಿಸುತ್ತಿದ್ದೆವು. ಸಾಮಾನ್ಯವಾಗಿ ಜನರು ಸಂಬಂಧ ಅಂದರೆ ದೈಹಿಕವೆಂದೇ ಭಾವಿಸುತ್ತಾರೆ. ಆದರೆ ನಮ್ಮದು ಅವೆಲ್ಲವನ್ನೂ ಮೀರಿದ ಅನುಬಂಧವಾಗಿತ್ತು,' ಎಂದು ಸೌಂದರ್ಯ ಜೊತೆ ಹೊಂದಿದ್ದ ಸ್ನೇಹ- ಸಂಬಂಧದ ಬಗ್ಗೆ ಅವರು ಮನ ಬಿಚ್ಚಿ ಹೇಳಿಕೊಂಡಿದ್ದಾರೆ.

ಹೆಸರಿಗೆ ತಕ್ಕಂತೆ ’ಸೌಂದರ್ಯ’ದ ಖನಿಯಂತಿದ್ದಾರೆ ಆಪ್ತಮಿತ್ರ ಚೆಲುವೆ!

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಅದ್ಭುತ ನಟಿ ಸೌಂದರ್ಯ. 2004ರಲ್ಲಿ ನಡೆದ ಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದರು. ಮುಳುಗಡೆಯಾದ ಜನರ ಬದುಕಿನ ಚಿತ್ರಣವನ್ನು ಬಿಂಬಿಸುವ ಕನ್ನಡದ ದ್ವೀಪ ಚಿತ್ರದ ಅಭಿನಯನಕ್ಕಾಗಿ ಅವರು ರಾಷ್ಟ್ರೀಯ ಪ್ರಶಸ್ತಿಗೂ ಪಾತ್ರರಾಗಿದ್ದರು. ಹೆಸರಿಗೆ ತಕ್ಕಂತೆ ಸೌಂದರ್ಯದೊಂದಿಗೆ, ಅತ್ಯುತ್ತಮ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದ ಈ ನಟಿಯ ಸಾವು ಇನ್ನೂ ಕನ್ನಡಿಗರಿಗೆ ಮರೆಯಲು ಸಾಧ್ಯವಾಗುತ್ತಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ