
ಚೀನಾದಿಂದ ಬಂದ ಮಹಾಮಾರಿ ಕೊರೋನಾ ವೈರಸ್ ಇಡೀ ಭಾರತವನ್ನು ಆಕ್ರಮಿಸುತ್ತಿದೆ. ಕೋವಿಡ್-19 ಎಂಬ ಮಾರಾಣಾಂತಿಕ ವೈರಸ್‌ನಿಂದ ಪಾರಾಗಲು ಭಾರತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದೆ. ಇದರ ಪರಿಣಾಮ ಅನೇಕ ವೃತ್ತಿ ಕ್ಷೇತ್ರಗಳ ಕಾರ್ಮಿಕರಿಗೆ ವರ್ಕ್ ಫ್ರಂ ಹೋಂ ಹಾಗೂ ಕೆಲವರಿಗೆ ಅನಿವಾರ್ಯವಾಗಿ ರಜೆ ಘೋಷಿಸಲಾಗಿದೆ. ಇದರಿಂದ ಆಯಾ ದಿನ ದುಡಿದು, ಹೊಟ್ಟೆ ತುಂಬಿಸಿಕೊಳ್ಳುವ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ. ಜನರ ಹಸಿವನ್ನು ನೀಗಿಸಲು ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ದನ ಸಹಾಯ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಕೈಲಾದಷ್ಟು ಸಹಾಯವನ್ನು ಪ್ರಾಣಿ, ಪಕ್ಷಿಗಳಿಗೂ ಮಾಡುತ್ತಿದ್ದಾರೆ.
ಲಾಕ್‌ಡೌನ್‌ನಲ್ಲಿಯೂ ಮಾನವೀಯತೆ ಮೆರೆದ ನಟಿ; ಬೀದಿ ಶ್ವಾನಗಳಿಗೆ ಊಟ ವ್ಯವಸ್ಥೆ!
ಈಗಾಗಲೇ ಬೀದಿ ನಾಯಿಗಳಿಗೆ 21 ದಿನಗಳ ಕಾಲ ಆಹಾರ ನೀಡಲು ನಟಿ ಸಂಯುಕ್ತಾ ಹೊರನಾಡು ತಂಡವೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ನಟ ಚಂದನ್ ಕುಮಾರ್ ಕೋತಿಗಳಿಗೆ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಮನವೀಯತೆ ಮೆರೆಯುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರವಾದ ಪ್ರವಾಸಿ ತಾಣವೆಂದೆರ ನಂದಿ ಬೆಟ್ಟ, ಅಲ್ಲಿ ಜನರಿಂದಾನೇ ಕೋತಿಗಳಿಗೆ ಆಹಾರ ಸಿಗುವುದು. ಇಲ್ಲವಾದರೆ ಅವುಗಳ ಪಾಡು ಕೇಳುವವರೇ ಇರುವುದಿಲ್ಲ. ನಟ ಚಂದನ್ ಕೋತಿಗಳಿಗೆ ಬಾಳೆ ಹಣ್ಣು ಹಾಗೂ ಅಲ್ಲಿನ ನಾಯಿಗಳಿಗೆ ಬಿಸ್ಕೆಟ್ ಹಿಡಿದು ಹೊರಟಿದ್ದಾರೆ.
ಇದನ್ನು ಒಂದು ದಿನ ಮಾಡಿ ಹಾಗೇ ಬಿಟ್ಟಿಲ್ಲ, ಚಂದನ್ ಪ್ರತಿ ದಿನವೂ ಹೋಗಿ ಪ್ರಾಣಿಗಳಿಗೆ ಆಹಾರ ನೀಡಿ ಬರುತ್ತಾರೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡುತ್ತಲೇ ಇದ್ದಾರೆ. ಸದ್ಯಕ್ಕೆ ಧಾರಾವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು, ಚಂದನ್ ಪ್ರಾಣಿಗಳಿಗೆ ಆಹಾರ ನೀಡುತ್ತಾ, ಜಿಮ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಕೈಲದಾಷ್ಟು ಸಹಾಯವನ್ನು ಅಗತ್ಯವಿರುವವರಿಗೆ, ಪಶು ಪಕ್ಷಿಗಳಿಗೆ ಮಾಡಿದರೆ ಮಾನವ ಪ್ರಕೃತಿಯೊಂದಿಗೆ ಬೆರೆಯಲು ಕಲಿತಂತೆ ಆಗುತ್ತದೆ. ಅಲ್ಲದೇ ಇಂಥದ್ದೊಂದು ಕೆಟ್ಟ ಸಂದರ್ಭ ಮತ್ತೊಮ್ಮೆ ಬರದಂತೆ ಮಾಡಲು ನಿಸರ್ಗದೊಂದಿಗಿನ ಸಹ ಜೀವನ, ಸಬ ಬಾಳ್ವೆ ಈಗಿನ ಅಗತ್ಯವೂ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.