
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರಲು ವರ್ಕೌಟ್ ಮತ್ತು ಡ್ಯಾನ್ಸ್ ಮಾಡುತ್ತಾರೆ ಎಂಬುದುವು ಎಲ್ಲರಿಗೂ ಗೊತ್ತಿರುವ ಸತ್ಯವೇ ಆದರೆ ಅದನ್ನು ನೋಡುವ ಭಾಗ್ಯ ಯಾರಿಗೂ ಸಿಕ್ಕಿರಲಿಲ್ಲ.
ಸರ್ಕಾರಿ ಶಾಲಾ ಮಕ್ಕಳ ಜೊತೆ ಕಾಲ ಕಳೆದ ಪುನೀತ್ ರಾಜ್‍ಕುಮಾರ್
ಕೆಲ ದಿನಗಳ ಹಿಂದೆ ಪುನೀತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೋಪ್ ಎಕ್ಸರ್ಸೈಸ್ ಮತ್ತು ಕ್ರಾಸ್ ಎಕ್ಸರ್ಸೈಸ್‌ಗಳನ್ನು ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಿನ 10ಕಿ.ಮೀ ಜಾಗಿಂಗ್, ಸೈಕ್ಲಿಂಗ್ ಮತ್ತು ವಾಕಿಂಗ್ ಮಾಡುತ್ತಾರೆ ಶೂಟಿಂಗ್ ಇದ್ದರೂ ಸಮಯ ಮಾಡಿಕೊಂಡು ವ್ಯಾಯಾಮ ಮಾಡುತ್ತಾರೆ. ಇಷ್ಟೇಲ್ಲಾ ವರ್ಕೌಟ್ ಮಾಡಿಯೇ 44 ವರ್ಷವಾದರೂ ಇನ್ನು ಯಂಗ್ ಹುಡುಗನಂತೆ ಕಾಣಿಸಿಕೊಳ್ಳುತ್ತಿರುವುದು.
ಈ ಹಿಂದೆಯೂ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಕೋಟಿಗೊಬ್ಬ-3 ಚಿತ್ರೀಕರಣಕ್ಕೆಂದು ತಮ್ಮ ನಿವಾಸದಿಂದ ಕಂಠೀರವ ಸ್ಟುಡಿಯೋಗೆ ಸೈಕಲ್‌ನಲ್ಲಿ ಹೋಗಿದ್ದಾರೆ. ಈ ವಿಡಿಯೋವನ್ನು ಸುದೀಪ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.